'ನನಗೆ 71, ವಿಜಯೇಂದ್ರನಿಗೆ 46 ವರ್ಷ, ಅವರೊಂದಿಗೆ ನನ್ನನ್ನು ಹೋಲಿಸಬೇಡಿ'

Published : Jun 08, 2022, 07:04 PM IST
'ನನಗೆ 71, ವಿಜಯೇಂದ್ರನಿಗೆ 46 ವರ್ಷ, ಅವರೊಂದಿಗೆ ನನ್ನನ್ನು ಹೋಲಿಸಬೇಡಿ'

ಸಾರಾಂಶ

* ವಿಜಯೇಂದ್ರ ಮುಂದಿನ ಸಿಎಂ ಘೋಷಣೆ * ವಿಜಯೇಂದ್ರ ಜತೆಗೆ ನನ್ನನ್ನು ಹೋಲಿಸಬೇಡಿ  * ಚಾಮರಾಜನಗರದಲ್ಲಿ  ಸಚಿವ ವಿ.ಸೋಮಣ್ಣ ಹೇಳಿಕೆ

ಚಾಮರಾಜನಗರ,(ಜೂನ್. 08): 'ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ (BY Vijayendra) ಎಂದು ಕೆಲ ಕಾರ್ಯಕರ್ತರು ಘೋಷಣೆ ಕೂಗಿರುವ ಬಗ್ಗೆ ಸಚಿವ ವಿ.ಸೋಮಣ್ಣ (V Somanna) ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಚಾಮರಾಜನಗರದಲ್ಲಿ ಮಾತನಾಡಿದ ಸೋಮಣ್ಣ, . ಈಗ ನನಗೆ 71 ವರ್ಷ, ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ 46 ವರ್ಷ. ನಾನು 7 ಬಾರಿ ಆಯ್ಕೆಯಾಗಿದ್ದೇನೆ. ಅವರು ಒಮ್ಮೆಯೂ ಆಯ್ಕೆಯಾಗಿಲ್ಲ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಜತೆಗೆ ನನ್ನನ್ನು ಹೋಲಿಸಬೇಡಿ ಎಂದು ಮಾಡಿದರು.

2023ಕ್ಕೆ ಹೇಗೂ ಚುನಾವಣೆ ಬರುತ್ತೆ. ಹೈಕಮಾಂಡ್ ಟಿಕೆಟ್ ಕೊಡಬೇಕು. ಯಾರ ಹಣೆಬರಹ ಏನಿದೆಯೋ ಹಾಗೆಯೇ ಆಗುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಅದಕ್ಕಾಗಿ ನಾವೆಲ್ಲರೂ ಪರಿಶ್ರಮ ಹಾಕಬೇಕು. ವಿಜಯೇಂದ್ರ ಒಂದು ಬಾರಿಯು ಆಯ್ಕೆಯಾಗಿಲ್ಲ. ಆಗ್ಲಿ ಬಿಡ್ರಪ್ಪ. ಡಬಲ್ ಇಂಜಿನ್‌ ಸರ್ಕಾರ ಬರಬೇಕು ಎಂಬುದು ನನ್ನಾಸೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಆಯ್ತು, ಈಗ ಬಿಜೆಪಿಯಲ್ಲಿ ಮುಂದಿನ ಸಿಎಂ ಕೂಗು

ಬೆಂಗಳೂರು ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾಡಪ್ರಭು ಕೆಂಪೇಗೌಡರು ವಿಶಾಲ ಮನೋಭಾವದಿಂದ ಬೆಂಗಳೂರು ನಿರ್ಮಿಸಿದರು. ಎಲ್ಲ ಜಾತಿಯವರಿಗೂ ಮಾನ್ಯತೆ ಕೊಟ್ಟರು. ಮೊಹಮದ್ ಪೇಟೆ, ಕುಂಬಾರ ಪೇಟೆ, ಮಾಮೂಲ್ ಪೇಟೆಗಳು ಬೆಂಗಳೂರಿನಲ್ಲಿ ಇವೆ. ಇಲ್ಲಿ ಎಲ್ಲ ಥರದ ಜನರೂ ವಾಸ ಮಾಡುತ್ತಿದ್ದಾರೆ. ಬೆಂಗಳೂರಿನ ಮಣ್ಣಿನ ಗುಣ, ಸಾಂಸ್ಕೃತಿಕ ನಗರದ ಗುಣ ಎಲ್ಲವೂ ಸ್ವಾಭಿಮಾನಕ್ಕೆ ಮತ್ತೊಂದು ಹೆಸರು. ನಮ್ಮ ಪೊಲೀಸ್ ಇಲಾಖೆ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದೆ. ಸೇರಿಸಬೇಕಾದವರನ್ನು ಸೇರಿಸಬೇಕಾದ ಕಡೆಗೆ ಪೊಲೀಸರು ಸೇರಿಸುತ್ತಿದ್ದಾರೆ ಎಂದು ಪೊಲೀಸರ ಕೆಲಸವನ್ನು ಸಚಿವ ಸೋಮಣ್ಣ ಮುಕ್ತ ಕಂಠದಿಂದ ಶ್ಲಾಘಿಸಿದರು.

ಸಿಎಂ ಕೂಗಿಗೆ ವಿಜಯೇಂದ್ರ ಪ್ರತಿಕ್ರಿಯೆ
ಹಾಸನ: ಪಕ್ಷದ ಸಂಘಟನೆ ಹೊರತುಪಡಿಸಿ, ನನ್ನ ಮನಸ್ಸಿನಲ್ಲಿ ಬೇರೆ ಏನೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಈಗ ಪಕ್ಷದ ಸಂಘಟನೆಯ ಕಡೆಗೆ ಗಮನ ಕೊಡುತ್ತಿದ್ದೇನೆ. ಅದರ ಹೊರತು ಶಾಸಕ, ಸಚಿವ, ಸಿಎಂ ಆಗಬೇಕೆಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇಂಥ ಚರ್ಚೆಗಳು ಅನಗತ್ಯ ಎಂದರು. ಮುರುಗೇಶ್ ನಿರಾಣಿ ಮತ್ತು ನಾರಾಯಣಗೌಡರು ದೊಡ್ಡ ಮಾತು ಹೇಳಿದ್ದಾರೆ. ಹಣೆಬರಹದಲ್ಲಿ ಇರುವುದನ್ನು ಬದಲಿಸಲು ಆಗುವುದಿಲ್ಲ ಎಂದು ಹೇಳಿದರು.

ಪಕ್ಷದಲ್ಲಿ ನಾನು ಇನ್ನೂ ಒಬ್ಬ ಸಾಮಾನ್ಯ ಕಾರ್ಯಕರ್ತನಷ್ಟೇ. ಕಳೆದ ಐದಾರು ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ರಾಜ್ಯ ಯುವ ಮೋರ್ಚಾದ ಪ್ರದಾನ ಕಾರ್ಯದರ್ಶಿಯಾಗಿದ್ದೆ. ಈಗ ರಾಜ್ಯ ಉಪಾದ್ಯಕ್ಷನಾಗಿ ಕೆಲಸ ಮಾಡುತ್ತಿಧ್ದೇನೆ. ನಮ್ಮ ರಾಜ್ಯದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರು ಯಾವುದೇ ಸ್ಥಾನಮಾನ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಸ್ಥಾನಮಾನದ ಬಗ್ಗೆ ಇಂತಹ ಚರ್ಚೆಗಳು ಅನವಶ್ಯಕ. ನಾನು ಮುಂದೆ ಯಾವ ರೀತಿ ಹೋಗಬೇಕು, ಯಾವ ರೀತಿ ಪಕ್ಷಕ್ಕೆ ಬಲ ಕೊಡಬೇಕು ಎಂಬ ಬಗ್ಗೆ ನನ್ನಲ್ಲಿ ಸ್ಪಷ್ಟತೆ ಇದೆ. ಅದನ್ನ ಕಣ್ಣಮುಂದೆ ಇರಿಸಿಕೊಂಡು ನಾನು ಕೆಲಸ ಮಾಡುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ವ್ಯಾಪಕ ಪ್ರವಾಸ ಮಾಡಬೇಕು. ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಯೋಚಿಸಿದ್ದೇನೆ. ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಆಗುವುದಿಲ್ಲ. ಹಾಗಾಗಿಯೇ ಯಡಿಯೂರಪ್ಪ ಇಷ್ಟು ಎತ್ತರಕ್ಕೆ ಬೆಳೆದದ್ದು. ನಾನೂ ಅಷ್ಟೇ, ಕೂಡ ಕಾರ್ಯಕರ್ತರ ಪ್ರೀತಿ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್