2023ಕ್ಕೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅ​ಧಿಕಾರಕ್ಕೆ: ಸಿಎಂ ಬೊಮ್ಮಾಯಿ

By Kannadaprabha News  |  First Published Jun 8, 2022, 1:51 PM IST

*  ಮತ್ತೊಮ್ಮೆ ಎಂಟಿಬಿ ನಾಗರಾಜ್‌ ಅಭಿಯಾನಕ್ಕೆ ಸೂಚನೆ
*  ಮೋದಿಯವರ ಕೈಬಲಪಡಿಸಲು ರಾಜ್ಯದಲ್ಲಿ ಬಿಜೆಪಿ ಅ​ಧಿಕಾರಕ್ಕೆ ಬರಬೇಕು
*  ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು ಹಾಕುತ್ತಿದೆ
 


ಹೊಸಕೋಟೆ(ಜೂ.08):  ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಬಡವರ ಅಭಿವೃದ್ಧಿ ಪರ ಆಡಳಿತ ನೀಡುವ ಮೂಲಕ ಹಲವು ಹೊಸ ಯೋಜನೆ ಜಾರಿಗೆ ತಂದಿದೆ. ಈ ಹಿನ್ನೆಲೆ 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಅ​ಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿಯವರ ಕನಸಾದ ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮೋದಿಯವರ ಕೈಬಲಪಡಿಸಲು ರಾಜ್ಯದಲ್ಲಿ ಬಿಜೆಪಿ ಅ​ಧಿಕಾರಕ್ಕೆ ಬರಬೇಕು. ಬರಲಿದೆ ಕೂಡ. ಆದ್ದರಿಂದ ಕಾರ್ಯಕರ್ತರು ವಿಶ್ರಮಿಸದೆ ಬಿಜೆಪಿ ಅ​ಧಿಕಾರಕ್ಕೆ ಬರುವವರೆಗೂ ಕೆಲಸ ಮಾಡಬೇಕು. ಹೊಸಕೋಟೆಯಲ್ಲಿ ಮತ್ತೊಮ್ಮೆ ಎಂಟಿಬಿ ಎಂಬ ಅಭಿಯಾನ ಪ್ರಾರಂಭಿಸಿ ಕೆಲಸ ಮಾಡಿ ಎಂದರು. ಈ ಬಾರಿಯ ಆಯವ್ಯಯದಲ್ಲಿ ಎಲೆಮಲ್ಲಪ್ಪನ ಕೆರೆ ಸಂಪೂರ್ಣ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಿದೆ. ಹೊಸಕೋಟೆಗೆ ಕೆರೆ ತುಂಬಿಸುವ ಯೋಜನೆ ಹಾಗೂ ಕುಡಿವ ನೀರಿನ ಯೋಜನೆಗಳಿಗೆ ಈ ವರ್ಷದಲ್ಲಿ ಮಂಜೂರಾತಿಯನ್ನು ನೀಡಲಾಗುವುದು. ಆನಗೊಂಡ ಹೋಬಳಿಯಲ್ಲಿ 39 ಕೆರೆ ತುಂಬುವ ಯೋಜನೆಯ ಕಾಮಗಾರಿ ನಡೆದಿದೆ. ಅದಕ್ಕೆ ಹೆಚ್ಚುವರಿಯಾಗಿ 50 ಕೋಟಿ ರು. ಒದಗಿಸಲಾಗಿದೆ. ಆದಷ್ಟುತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು ಹಾಕುತ್ತಿದೆ ಎಂದರು.

ಬೊಮ್ಮಾಯಿ ನೇಮಕಗೊಂಡ ಮುಖ್ಯಮಂತ್ರಿ: ಸಿದ್ದರಾಮಯ್ಯ

Latest Videos

undefined

ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ನನಗೆ ಹೊಸಕೋಟೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಎಸ್‌ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಇದುವರೆಗೂ 250 ಕೋಟಿ ಅ​ಧಿಕ ಅನುದಾನ ನೀಡಿದ್ದಾರೆ. ಪ್ರಮುಖವಾಗಿ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಕೆಲಸ ಮಾಡಬೇಕು. ಅಲ್ಲದೆ ಕಾವೇರಿ ನೀರು, ಮೆಟ್ರೋ ಸಂಪರ್ಕ ನಗರಕ್ಕೆ ಕೊಡುವ ಕೆಲಸವನ್ನು ನಿಮ್ಮ ಅವ​ಯಲ್ಲಿ ಆಗಲೇಬೇಕು ಎಂದು ಮನವಿ ಮಾಡಿದರು.

ಸಚಿವರಾದ ಡಾ.ಕೆ.ಸುಧಾಕರ್‌, ಸಿಸಿ ಪಾಟೀಲ್‌, ಭೈರತಿ ಬಸವರಾಜ್‌, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌, ನಗರ ಬಿಜೆಪಿ ಅಧ್ಯಕ್ಷ ಡಾ.ಸಿ.ಜಯರಾಜ್‌, ತಾಲೂಕು ಅಧ್ಯಕ್ಷ ಸತೀಶ್‌, ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್‌ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
 

click me!