ಆಂಧ್ರಪ್ರದೇಶದ ರಾಜಕಾರಣದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪ್ರಭಾವಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸುತ್ತಿದ್ದಾರೆ. ಇತ್ತೀಚಿಗೆ ತಮ್ಮ ಆಸ್ತಿ ಮೌಲ್ಯ ಪ್ರಕಟಿಸಿದ್ದು ಎಲ್ಲರೂ ಬೆರಗಾಗುವಂತೆ ಮಾಡಿದೆ.
ಆಂಧ್ರಪ್ರದೇಶದ ರಾಜಕಾರಣದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪ್ರಭಾವಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸುತ್ತಿದ್ದಾರೆ. ಇತ್ತೀಚಿಗೆ ತಮ್ಮ ಆಸ್ತಿ ಮೌಲ್ಯ ಪ್ರಕಟಿಸಿದ್ದಾರೆ. ಪವನ್ ಕಲ್ಯಾಣ್ 164 ಕೋಟಿ ಮೌಲ್ಯದ ಮೌಲ್ಯಯುತ ಆಸ್ತಿಯನ್ನು ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ.
ಭಾರತದ ಅತ್ಯಂತ ಯಶಸ್ವಿ ತಾರೆಗಳಲ್ಲಿ ಪವನ್ ಕಲ್ಯಾಣ್ ಸಹ ಒಬ್ಬರು. ಗಬ್ಬರ್ ಸಿಂಗ್, ವಕೀಲ್ ಸಾಬ್, ಬಾಲು, ಸುಸ್ವಾಗತಂ ಮತ್ತು ಪುಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ತಮ್ಮ ನಟನೆಯ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 2008ರಲ್ಲಿ, ಪವನ್ ತಮ್ಮ ನಟನಾ ವೃತ್ತಿಯನ್ನು ತೊರೆದರು ಮತ್ತು ಅವರ ಸಹೋದರ, ಚಿರಂಜೀವಿ ಕೊನಿಡೇಲ ಅವರ ಪಕ್ಷ, ಪ್ರಜಾರಾಜ್ಯಂನ ಯುವ ಘಟಕದ ಅಧ್ಯಕ್ಷರಾಗಿ ರಾಜಕೀಯಕ್ಕೆ ಸೇರಿದರು. ನಂತರ, ಅವರು 2014ರಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವಾದ ಜನಸೇನಾವನ್ನು ಸ್ಥಾಪಿಸಿದರು.
ಆಂಧ್ರದಲ್ಲಿ ಬಿಜೆಪಿ-ಟಿಡಿಪಿ-ಜನಸೇನಾ ಮೈತ್ರಿ ಫೈನಲ್..? ಜಗನ್‌ಮೋಹನ್ ರೆಡ್ಡಿಗೆ ಬಿಗ್ ಶಾಕ್..!
ಪವನ್ ಕಲ್ಯಾಣ್ ಆಸ್ತಿ ಮೌಲ್ಯ ಎಷ್ಟು?
ಏಪ್ರಿಲ್ 23, 2024 ರಂದು, ಪವನ್ ಕಲ್ಯಾಣ್ ಮುಂಬರುವ ಚುನಾವಣೆಯಲ್ಲಿ ಆಂಧ್ರ ಪ್ರದೇಶ ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿದರು. ಚುನಾವಣಾ ಅಧಿಕಾರಿಗಳಿಗೆ ನೀಡಿದ ಅಫಿಡವಿಟ್ ಪ್ರಕಾರ, ಜನಸೇನಾ ಪಕ್ಷದ ಸಂಸ್ಥಾಪಕರಾಗಿರುವ ಪವನ್ ಕಲ್ಯಾನ್ ತಾವು 164.53 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವುದನ್ನು ಬಹಿರಂಗಪಡಿಸಿದ್ದಾರೆ.
ಪವನ್ ಕಲ್ಯಾಣ್ ಅವರ ಆದಾಯದ ಮಾಹಿತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ 60 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ಸಲ್ಲಿಸಲಾಗಿದೆ. 2018–19ನೇ ಸಾಲಿನಲ್ಲಿ ಅವರ ಆದಾಯ ತೆರಿಗೆ ನಮೂನೆಗಳಲ್ಲಿ 1.10 ಕೋಟಿ ರೂ. ಎಂದು ತಿಳಿಸಲಾಗಿದೆ. ಇತ್ತೀಚಿನ ನವೀಕರಣದ ಪ್ರಕಾರ, ಕಲ್ಯಾಣ್ ತನ್ನ ನಾಲ್ಕು ಅವಲಂಬಿತ ಮಕ್ಕಳೊಂದಿಗೆ 46.17 ಕೋಟಿ ರೂ. ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಅವರ ಸ್ಥಿರ ಆಸ್ತಿ ಮೌಲ್ಯ ರೂ. 118.36 ಕೋಟಿ. ರಾಜಕಾರಣಿ-ನಟನ ವಿರುದ್ಧ ಎಂಟು ಕ್ರಿಮಿನಲ್ ದೋಷಾರೋಪಣೆಗಳಿವೆ. ಇದರಲ್ಲಿ ಕೆಟ್ಟ ಪದಗಳ ಬಳಕೆ ಮತ್ತು ಮೋಟಾರು ವಾಹನ ಕಾನೂನುಗಳನ್ನು ಉಲ್ಲಂಘಿಸಲಾಗಿದೆ.
Breaking: ಆಂಧ್ರಪ್ರದೇಶದಲ್ಲಿ ಟಿಡಿಪಿ-ಜನಸೇನಾ ಜೊತೆ ಬಿಜೆಪಿ ಮೈತ್ರಿ
14 ಕೋಟಿ ಮೌಲ್ಯದ ದುಬಾರಿ ವಾಹನ ಹೊಂದಿರುವ ನಟ
ಜನಸೇನಾ ಸಂಸ್ಥಾಪಕರು ರೇಂಜ್ ರೋವರ್ ಮತ್ತು ಹಾರ್ಲೆ ಡೇವಿಡ್‌ಸನ್ ಮೋಟಾರ್‌ಸೈಕಲ್ ಸೇರಿದಂತೆ 11 ದುಬಾರಿ ವಾಹನಗಳ ಮಾಲೀಕರಾಗಿದ್ದಾರೆ ಎಂದು ಅಫಿಡವಿಟ್ ಬಹಿರಂಗಪಡಿಸಿದೆ, ಇದರ ಮೌಲ್ಯ ರೂ. 14 ಕೋಟಿ. ಮೇ 13, 2024ರಂದು ಆಂಧ್ರಪ್ರದೇಶವು ತನ್ನ ಅಸೆಂಬ್ಲಿ ಮತ್ತು ಲೋಕಸಭೆ ಸ್ಥಾನಗಳಿಗೆ ಚುನಾವಣೆ ನಡೆಸುತ್ತಿದೆ. ಜೂನ್ 4, 2024 ರಂದು ಮತಗಳನ್ನು ಎಣಿಸಲಾಗುತ್ತದೆ. ಎನ್‌ಡಿಎ ಪಾಲುದಾರರ ನಡುವಿನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಜನಸೇನಾ ಎರಡು ಲೋಕಸಭೆಗೆ ಸ್ಪರ್ಧಿಸಲಿದೆ.
ಪವನ್ ಕಲ್ಯಾಣ್ ವೈಯಕ್ತಿಕ ಜೀವನ
ಪವನ್ ಕಲ್ಯಾಣ್ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಅವರು ಎರಡು ಬಾರಿ ಮದುವೆಯಾಗಿದ್ದಾರೆ. ಆದರೆ ಅವರ ಎರಡು ಮದುವೆಗಳು ಯಶಸ್ವಿಯಾಗಿ ಅಂತ್ಯಗೊಳ್ಳಲಿಲ್ಲ. 1997ರಲ್ಲಿ ನಂದಿನಿ ಎಂಬಾಕೆಯನ್ನು ಅರೇಂಜ್ಡ್ ಮ್ಯಾರೇಜ್‌ನಲ್ಲಿ ಮದುವೆಯಾದುರ. 2001 ರಲ್ಲಿ, ಪವನ್, ನಟಿ ರೇಣು ದೇಸಾಯಿಯನ್ನು ಮದ್ವೆಯಾಗಿ ಒಬ್ಬ ಗಂಡು ಮಗನೂ ಹೊಂದಿದ್ದಾನೆ. ಪವನ್ ಮತ್ತು ರೇಣು 2008ರಲ್ಲಿ ವಿಚ್ಛೇದನ ಪಡೆದರು. ನಂತರ, ನಟ ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರೊಂದಿಗೆ ಸೆಪ್ಟೆಂಬರ್ 30, 2013ರಂದು ಮದುವೆಯಾದರು. 2017ರಲ್ಲಿ, ದಂಪತಿ ಮಗು ಮಾರ್ಕ್ ಶಂಕರ್ ಪವನೋವಿಚ್, ಪೊಲೇನಾ ಅಂಜನಾ ಎಂಬ ಮಕ್ಕಳನ್ನು ಹೊಂದಿದ್ದಾರೆ.