ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗಳಿಸಿದರೆ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಹೇಳಿಕೆ ಅದು ಅವರ ಅಭಿಪ್ರಾಯ.
ಬಾಗಲಕೋಟೆ (ಜ.22): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗಳಿಸಿದರೆ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಹೇಳಿಕೆ ಅದು ಅವರ ಅಭಿಪ್ರಾಯ. ಆಪ್ತರಿಗೆ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎಂದು ಸಂದೇಶ ಕಳಿಸಿ ಚುನಾವಣೆಯಲ್ಲಿ ಹುರುಪಿನಿಂದ ಕೆಲಸ ಮಾಡಲಿ ಎಂಬುದು ಅವರ ಮಾತಿನ ಅರ್ಥ. ಅದಕ್ಕೆ ಯಾಕಿಷ್ಟು ಬಣ್ಣ ಹಚ್ಚಲಾಗುತ್ತಿದೆಯೋ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವೊಂದರಲ್ಲಿ ಒಬ್ಬ ಯುವಕ ಹೀಗಂತ ಹೇಳಿದ್ದು, ಎಲ್ಲರೂ ಕೂಡಿ ಮಾಡ್ರಪ್ಪಾ ಸಿದ್ದರಾಮಯ್ಯ ಮುಂದೆ ೫ ವರ್ಷ ಸಿಎಂ ಆಗಿರ್ತಾರೆ ಎಂದಿದ್ದಾರೆ. ಅದೇನು ಹೈಕಮಾಂಡ್ ತೀರ್ಮಾನ ಅಲ್ಲ, ಅದಕ್ಕ್ಯಾಕೆ ಅಷ್ಟು ಮಹತ್ವ ಕೊಡುತ್ತಿದ್ದೀರಿ. ಸಿದ್ದರಾಮಯ್ಯನವರೇ ಸಮರ್ಥನೆ ನೀಡಿದ್ದಾರೆ. ಸ್ಟ್ರಾಂಗ್ ಆದ ಪಕ್ಷ ಇದೆ. ಎಲ್ಲ ನಿರ್ಧಾರ ಮಾಡುತ್ತಾರೆ. ಅದಕ್ಕೆ ಕಲರ್ ಕೊಡುವ ಕೆಲಸ ಆಗಬಾರದು ಎಂದರು. ರಾಜ್ಯದಲ್ಲಿ ಸಾರ್ವತ್ರಿಕ ರಜೆ ಘೋಷಣೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ಬಿಜೆಪಿಯವರ ಬೇಡಿಕೆ ಬಗ್ಗೆ ಸಿಎಂ ಹೇಳಿದ್ದಾರೆ.
ನಾವೂ ಕೇಳಿದ್ದೀವಿ ತಪ್ಪೇನಿದೆ, ಅವರು ಕೇಳಬಾರದಂತಿಲ್ಲ, ನಾವು ಹೇಳಬಾರದಂತಿಲ್ಲ. ಬಿಜೆಪಿಗರು ತಮ್ಮ ಅಭಿಪ್ರಾಯ ಹೇಳಿದ್ದಾರೆ, ಅದರಲ್ಲೇನು ತಪ್ಪಿದೆ. ಬಿಜೆಪಿಗರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಈ ವಿಚಾರಗಳಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಲ್ಲ. ರಜೆ ಕೊಡುವ ಬಗ್ಗೆ ಎಲ್ಲಾ ಹೇಳೋದೆ ಬಿಜೆಪಿಯವರು. ಕಾಂಗ್ರೆಸ್ ನವರು ಹಿಂದುಗಳಲ್ಲ, ಹಿಂದು ವಿರೋಧಿಗಳು ಅಂತಾರೆ. ಮಾಡೋರು ಅವರೇ, ಅಲ್ಪಸಂಖ್ಯಾತ ವಿರೋಧಿಗಳು ಅಂತ ಹೇಳೋರು ಅವರೇ. ನಾನು ಹಿಂದು ಅಲ್ವಾ, ಇವತ್ತು ನಾನು ಮಂದಿರಕ್ಕೆ ಬಂದಿಲ್ವಾ, ನಾವು ಹಿಂದುಗಳು ಅಲ್ವಾ, ನಾನ್ಯಾಕೆ ಹಿಂದು ಆಗಬಾರದು, ನನಗ್ಯಾಕೆ ಹಿಂದು ವಿರೋಧಿ ಅಂತಾರೆ, ಅವರಿಲ್ಲ, ಇವರಿಲ್ಲ ಎಂದು ಜಗಳಾ ಹಚ್ಚಿ ನಾವು ಅಷ್ಟ ಹಿಂದುಗಳು ಎಂದು ಹೇಳ್ತಾರಲ್ಲಾ, ಎಲ್ಲರೂ ಹಿಂದುಗಳು ಅನ್ನೋದು ಮೊದಲು ಬಿಜೆಪಿಗರು ಕಲಿಯಲಿ ಎಂದು ತಿರುಗೇಟು ನೀಡಿದರು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ, ದೇಗುಲಗಳಲ್ಲಿ ವಿಶೇಷ ಪೂಜೆ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಹೈಕಮಾಂಡ್ ಸಮರ್ಥವಿದೆ: ರಾಜ್ಯದಲ್ಲಿ ಡಿಸಿಎಂ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾರನ್ನ ಮಾಡಬಾರದು, ಯಾರನ್ನ ಮಾಡಬೇಕು ಅನ್ನೋದು ನಮ್ಮ ನಾಯಕರಿಗೆ ಗೊತ್ತು. ಎಐಸಿಸಿ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಜಿ, ಸೋನಿಯಾ ಮೇಡಂ ನಿರ್ಣಯ ಮಾಡುತ್ತಾರೆ. ಹೈಕಮಾಂಡ್ ಸಮರ್ಥವಿದೆ. ಯಾರನ್ನಾದರೂ ಮಾಡಬೇಕು ಅಂದ್ರೆ ಮಾಡುತ್ತಾರೆ, ಇಲ್ಲಾ ಅಂದ್ರೆ ಬಿಡ್ತಾರೆ. ಇನ್ನರ್ ಪಾಲಿಟಿಕಲ್ ಚರ್ಚೆ ಆಗುತ್ತೆ ಎಂದು ತಿಳಿಸಿದರು.