ಶ್ರೀರಾಮ ರಜೆ ಕೇಳಿಲ್ಲ, ಕಷ್ಟಪಟ್ಟು ದುಡಿಯಿರಿ ಅಂದಿದ್ದಾರೆ: ಸಚಿವ ಚಲುವರಾಯಸ್ವಾಮಿ

By Kannadaprabha NewsFirst Published Jan 22, 2024, 9:44 AM IST
Highlights

ಶ್ರೀರಾಮ, ಈಶ್ವರ, ವೆಂಕಟೇಶ್ವರ ಇವರ್‍ಯಾರೂ ರಜೆ ಕೇಳಿಲ್ಲ. ಕಷ್ಟಪಟ್ಟು ದುಡಿಮೆ ಮಾಡಿ ಒಳ್ಳೆಯದಾಗುತ್ತೆ ಎಂದಿದ್ದಾರೆ. ಬಹುಶಃ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರಿಗೆ ರಜೆ ಬೇಕಿತ್ತು ಅಂತ ಕಾಣಿಸುತ್ತದೆ. ಅದಕ್ಕಾಗಿ ರಜೆ ಕೇಳಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಲೇವಡಿ ಮಾಡಿದರು. 

ನಾಗಮಂಗಲ (ಜ.22): ಶ್ರೀರಾಮ, ಈಶ್ವರ, ವೆಂಕಟೇಶ್ವರ ಇವರ್‍ಯಾರೂ ರಜೆ ಕೇಳಿಲ್ಲ. ಕಷ್ಟಪಟ್ಟು ದುಡಿಮೆ ಮಾಡಿ ಒಳ್ಳೆಯದಾಗುತ್ತೆ ಎಂದಿದ್ದಾರೆ. ಬಹುಶಃ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರಿಗೆ ರಜೆ ಬೇಕಿತ್ತು ಅಂತ ಕಾಣಿಸುತ್ತದೆ. ಅದಕ್ಕಾಗಿ ರಜೆ ಕೇಳಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಲೇವಡಿ ಮಾಡಿದರು. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೂ ಶ್ರೀರಾಮನ ಭಕ್ತರು. ರಜೆ ಕೊಟ್ಟರೆ ಮಾತ್ರ ರಾಮನ ಭಕ್ತರು, ಇಲ್ಲದಿದ್ದರೆ ಇಲ್ಲ ಎನ್ನುವುದು ಸರಿಯಲ್ಲ ಎಂದರು.

ಕೃಷಿ ಮೂಲಸೌಕರ್ಯ ನಿಧಿ ಸದ್ಭಳಕೆ ಮಾಡಿಕೊಳ್ಳಿ: ಕೊಯ್ಲೋತ್ತರ ಚಟುವಟಿಕೆಯಲ್ಲಿ ರೈತರ ಸಬಲೀಕರಣಕ್ಕೆ ಕೇಂದ್ರ ಸರ್ಕಾರವು 4500 ಕೋಟಿ ರು. ಅನುದಾನ ನೀಡಲಿದ್ದು, ಇದನ್ನು ಸಂಪೂರ್ಣ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು. ಕೃಷಿ ಆಯುಕ್ತಾಲಯದಲ್ಲಿ ಏರ್ಪಡಿಸಿದ್ದ ಕೃಷಿ ಮೂಲಭೂತ ಸೌಕರ್ಯ ನಿಧಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೊಯ್ಲೋತ್ತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ಗ್ಯಾರಂಟಿ ಇಲ್ಲದೆ 2 ಕೋಟಿ‌ ರುಪಾಯಿವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ. ಇದರ ಅನುಷ್ಠಾನ ಚುರುಕಾಗಬೇಕಿದ್ದು ಅಧಿಕಾರಿಗಳು ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

Latest Videos

ಅಂಬಿಗರ ಸಮುದಾಯ ಎಸ್ಟಿಗೆ ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸ್ಸು: ಸಚಿವ ತಿಮ್ಮಾಪೂರ

ಕನ್ನಡ ಭಾಷೆಗೆ ಸಾವಿಲ್ಲ ಎಂಬುದನ್ನು ತೋರಿಸಿಕೊಟ್ಟ ಕೆ.ಎಸ್. ನರಸಿಂಹಸ್ವಾಮಿ: ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಸಾವಿಲ್ಲ ಎಂದು ತೋರಿಸಿಕೊಟ್ಟ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಬಣ್ಣಿಸಿದರು. ಕಿಕ್ಕೇರಿಯ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ಗೆ ಭೇಟಿ ನೀಡಿ ಟ್ರಸ್ಟ್ ಪ್ರಕಟಿಸಿರುವ ಹಲವು ಪುಸ್ತಕಗಳನ್ನು ವೀಕ್ಷಣೆ ಮಾಡಿ, ಕೆಎಸ್‌ಎನ್‌ ನಮ್ಮ ಜಿಲ್ಲೆಯವರು ಎನ್ನುವುದೇ ಬಲುದೊಡ್ಡ ಹೆಮ್ಮೆ. ಇವರ ಹೆಸರಿನಲ್ಲಿ ಶಾಶ್ವತ ಕೆಲಸಗಳು ಆಗಬೇಕಿದೆ ಎಂದರು.

ಕವಿಯ ಮನಸ್ಸು ಮಲ್ಲಿಗೆಯಂತಿದ್ದು, ನಾಡಿನ ಪರಿವರ್ತನೆಗೆ ನಾಂದಿಯಾಗಿರಬೇಕು ಎನ್ನುವುದರಲ್ಲಿ ಮೊದಲಿಗರಾದ್ದ ಮೈಸೂರ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಸುಗಮ ಸಂಗೀತಕ್ಕೆಗಟ್ಟಿಯಾದ ನೆಲೆಯನ್ನು ಕಟ್ಟಿಕೊಟ್ಟರು ಎಂದರು. ಕನ್ನಡತನ, ಭಾಷೆಗೆ ಮಬ್ಬುಕವಿಯುವಂತಹ ಸ್ಥಿತಿಯಲ್ಲಿ ಕಾವ್ಯದ ಮೂಲಕ ಅಸ್ಮಿತೆ ಕಾಪಾಡಿದ ಶ್ರೇಷ್ಟಕವಿಗಳಲ್ಲಿ ಇವರು ಒಬ್ಬರು. ಪಾಶ್ಚಾತ್ಯ ಗೀತೆ, ಗಾಯನದ ಅಬ್ಬರದಲ್ಲಿ ಯುವಕರು ಕೊಚ್ಚಿ ಹೋಗುವಂತಹ ಕಾಲಘಟ್ಟದಲ್ಲಿ ಸುಗಮ ಸಂಗೀತದ ಮೂಲಕ ಕವಿಗಳ ಕಾವ್ಯ ಉಸಿರಾಡುವಂತಾಗಿ ಕನ್ನಡ ಭಾಷೆಗೆ ಸಾವಿಲ್ಲ ಎಂದು ತೋರಿಸಿದರು ಎಂದರು.

ಇಂದು ಮಧ್ಯಾಹ್ನದವರೆಗೆ ನನ್ನುಸಿರಿದ್ದರೆ ಸಾರ್ಥಕ ಬದುಕು ನನ್ನದು: ಆರಗ ಜ್ಞಾನೇಂದ್ರ!

ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಸಾವು ಕಂಡರೂ ನಾಡಿಗೆ ಕಾವ್ಯ ಶ್ರೀಮಂತಿಕೆಯನ್ನು ಉಣಬಡಿಸಿದ ಮಹಾನ್ ಕವಿ ಕೆಎಸ್‌ಎನ್‌ ಹೆಸರಿನಲ್ಲಿ ಸ್ಮಾರಕ, ಉದ್ಯಾನವನ, ಬಳಸಿದ ವಸ್ತುಗಳ ಸಂಗ್ರಹಾಲಯ, ಥೀಮ್ ಪಾರ್ಕ್‌ನಂತಹ ಹಲವು ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಲಾಗುವುದು ಎಂದರು. ಕವಿಗಳ ಹೆಸರಿನಲ್ಲಿ ಕಮ್ಮಟ, ಶಾಲಾ ಕಾಲೇಜುಗಳಲ್ಲಿ ಕಾವ್ಯಗಾಯನದಂತಹ ಕೆಲಸವಾಗಬೇಕು. ಪಟ್ಟಣದ ಹೆಬ್ಬಾಗಿಲಿನಲ್ಲಿರುವ ಕೆ.ಎಸ್.ನರಸಿಂಹಸ್ವಾಮಿ ಅವರ ಸ್ವಾಗತ ಕಮಾನು ಪಟ್ಟಣದ ಘನತೆಗೆ ಕಿರೀಟದಂತಿದೆ. ಕವಿಯಿಂದ ಕಾಣಬೇಕಿರುವುದು ಉತ್ತಮ ಸಂದೇಶ. ಕಾವ್ಯ ಶ್ರೀಮಂತಿಕೆಯನ್ನು ಇಡೀ ವಿಶ್ವಕ್ಕೆ ನೀಡಿದ್ದಾರೆ ಎಂದರು.

click me!