ಪಂಚಾಯಿತಿ ಕೆಲಸಗಳು ವಿಳಂಬವಾಗದಿರಲಿ: ಶಾಸಕ ಶರತ್‌ ಬಚ್ಚೇಗೌಡ

By Kannadaprabha NewsFirst Published Jun 5, 2023, 9:43 PM IST
Highlights

ಪಂಚಾಯತಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುತಿದ್ದು ಪಂಚಾಯತಿಗಳಲ್ಲಿ ಖಾಲಿ ಇರುವ ಎಲ್ಲಾ ಪಿಡಿಒ ಹುದ್ದೆಗಳನ್ನು ಇನ್ನು 15 ದಿನದಲ್ಲಿ ಭರ್ತಿ ಮಾಡಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ​ಧಿಕಾರಿಗೆ ಆದೇಶ ನೀಡಿದರು.

ಹೊಸಕೋಟೆ (ಜೂ.05): ಪಂಚಾಯತಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುತಿದ್ದು ಪಂಚಾಯತಿಗಳಲ್ಲಿ ಖಾಲಿ ಇರುವ ಎಲ್ಲಾ ಪಿಡಿಒ ಹುದ್ದೆಗಳನ್ನು ಇನ್ನು 15 ದಿನದಲ್ಲಿ ಭರ್ತಿ ಮಾಡಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ​ಧಿಕಾರಿಗೆ ಆದೇಶ ನೀಡಿದರು. ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ತಾಲೂಕಿನ 28 ಗ್ರಾಮ ಪಂಚಾಯತಿ ಪಿಡಿಒ ಹಾಗೂ ಅಧ್ಯಕ್ಷರ ಸಭೆ ಹಾಗೂ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯತಿಗಳಲ್ಲಿ ಒಬ್ಬ ಪಿಡಿಒಗೆ ಎರಡೆರಡು ಪಂಚಾಯತಿಗಳ ಜವಾಬ್ದಾರಿ ನೀಡಲಾಗಿದೆ. 

ಎಸ್‌ಡಿಎ ಕೊರತೆ, ಕಾರ್ಯದರ್ಶಿ ಕೊರತೆ, ನೀರುಗಂಟಿ ಕೊರತೆ ಹಾಗೂ ಬಿಲ್‌ ಕಲೆಕ್ಟರ್‌ ಕೊರತೆ ಎದ್ದು ಕಾಣುತ್ತಿದೆ. ಜಿಪಂ ಸಿಇಒ ಅವರನ್ನು ಬೇಟಿ ಮಾಡಿ 15 ದಿನದಲ್ಲಿ ಪಂಚಾಯತಿ ಅಭಿವೃದ್ಧಿ ಅ​ಧಿಕಾರಿಗಳ ನೇಮಕ ಹಾಗೂ ಒಂದು ತಿಂಗಳಲ್ಲಿ ಉಳಿದ ಎಲ್ಲಾ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು ಎಂದ ಹೇಳಿದರು. ಈಗಾಗಲೆ ತಾಲೂಕಿಗೆ ಬಸವ ವಸತಿ ಯೋಜನೆಯಡಿ 4439 ನಿವೇಶನಗಳನ್ನು ಫಲಾನುಭವಿಗಳಿಗೆ ಹಾಗೂ ಡಾ. ಅಂಬೇಡ್ಕರ್‌ ವಸತಿ ಯೋಜನೆಯಡಿ 1412 ನಿವೇಶನಗಳನ್ನು ವಿತರಿಸಲು ಆದೇಶ ಹೊರಡಿಸಲಾಗಿದೆ. ಒಟ್ಟು 5851 ನಿವೇಶನಗಳ ವಿತರಣೆಗೆ ಆದೇಶ ಹೊರಡಿಸಲಾಗಿದೆ. 

ಇಂದಿನಿಂದಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ: ಮಾಜಿ ಸಿಎಂ ಬೊಮ್ಮಾಯಿ

ಈ ಪ್ರಕ್ರಿಯೆಯಲ್ಲಿ ಕೆಲ ಪಂಚಾಯತಿಗಳಲ್ಲಿ ಖಾಲಿ ನಿವೇಶನಗಳನ್ನು ಗುರುತಿಸಿ ಪಂಚಾಯತಿ ಸುಪರ್ದಿಗೆ ಪಡೆದು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ. ವಿತರಿಸಿರುವ ನಿವೇಶನಗಳಲ್ಲಿ ಮನೆ ನಿರ್ಮಾಣ ಪ್ರಗತಿಯಲಿದ್ದರೆ ಒಂದು ವರ್ಷದಲ್ಲಿ ಎಲ್ಲಾ ಫಲಾನುಭವಿಗಳು ಮನೆ ನಿರ್ಮಾಣ ಮಾಡಬೇಕು. ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆ ಆಗಬೇಕು. ಹಂಚಿಕೆಯಾಗದೆ ಇರುವ ಖಾಲಿ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಲು ಗ್ರಾಮ ಸಭೆಗಳನ್ನು ಕರೆದು ನ್ಯಾಯ ಸಮ್ಮತವಾಗಿ, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಂಚಿಕೆ ಮಾಡಬೇಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ ಚಂದ್ರಶೇಖರ್‌, ತಾಲೂಕಿನ 28 ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅ​ಧಿಕಾರಿ ಹಾಗೂ ಅಧ್ಯಕ್ಷರು ಪಾಲ್ಗೊಂಡಿದ್ದರು.

ತಾಲೂಕಿನ ಜಲ್‌ ಜೀವನ್‌ ಕಾರ್ಯಕ್ರಮದಲ್ಲಿ ಸಮಸ್ಯೆಗಳು ಕಂಡು ಬರುತಿದ್ದು, ಈ ಮೊದಲೇ ನಿರ್ಮಾಣ ಮಾಡಿರುವ ಓವರ್‌ ಹೆಡ್‌ ಟ್ಯಾಂಕರ್‌ಗೆ ಸುಣ್ಣ ಬಣ್ಣ ಬಳಿದು ಜಲಜೀವನ್‌ ಮಿಷನ್‌ ಯೋಜನೆ ಎಂದು ನಮೂದಿಸಲಾಗುತ್ತಿದೆ. ಅದು ಸಲ್ಲದು ಪಂಚಾಯತಿಗಳಿಗೆ ಮಾಹಿತಿ ಇಲ್ಲದೆ ನೂತನವಾಗಿ ನಿರ್ಮಾಣ ಮಾಡಿರುವ ರಸ್ತೆಗಳನ್ನು ಸಂಪೂರ್ಣ ಅಗೆದು ಹಾಳು ಮಾಡಲಾಗಿದೆ. ಯೋಜನೆ ಮುಗಿದ ನಂತರ ಪಂಚಾಯತಿಗಳಿಂದ ಕ್ಲಿಯರೆನ್ಸ್‌ ಲೆಟರ್‌ಗಳನ್ನು ಪಂಚಾಯತಿಯಿಂದ ವಿತರಣೆ ಮಾಡುವಾಗ ಸಂಪೂರ್ಣ ಕಾಮಗಾರಿ ಮುಗಿದಿರಬೇಕು. ಅಗೆದ ರಸ್ತೆಗಳನ್ನು ಪುನರ್‌ ನಿರ್ಮಾಣ ಮಾಡಿರಬೇಕು. ಈ ಬಗ್ಗೆ ಪಂಚಾಯತಿ ಅ​ಧಿಕಾರಿಗಳು ಸೂಕ್ತ ಚಕ್‌ ಲಿಸ್ಟ್‌ ತಯಾರಿ ಮಾಡಿಕೊಂಡು ಸಂಪೂರ್ಣ ತನಿಕೆ ನಂತರ ಕ್ಲಿಯರೆನ್ಸ್‌ ಲೆಟರ್‌ ನೀಡಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ಸೂಚಿಸಿದರು.

Ramanagara: ಕಾಡಂಚಿನ ಗ್ರಾಮ​ಗ​ಳಲ್ಲಿ ಕಲ್ಲಿನ ತಡೆ​ಗೋಡೆಗೆ ಚಿಂತನೆ: ಸಚಿವ ಈಶ್ವರ ಖಂಡ್ರೆ

ಪ್ರತಿ ಪಂಚಾಯತಿಗಳಿಗೆ ಅಧ್ಯಕ್ಷರು ಹಾಗೂ ಪಿಡಿಒಗಳೇ ಪ್ರಮುಖರಾಗಿದ್ದು ಕೆಲ ವೈಟ್‌ ಕಾಲರ್‌ ವ್ಯಕ್ತಿಗಳು ತಮ್ಮ ಕೆಲಸ ಮಾಡಿಸಿಕೊಳ್ಳಲು ಪಂಚಾಯತಿ ಸಿಬ್ಬಂದಿಗಳನ್ನು ತಮ್ಮ ರಾಜಕೀಯ ಅಥವಾ ಹಣದ ಪ್ರಭಾವಕ್ಕೆ ಯಾರಾದರೂ ಒಳಗಾಗಿ ಅಕ್ರಮ ಎಸಗಿದಲ್ಲಿ ಮುಲಾಜಿಲ್ಲದೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
-ಶರತ್‌ ಬಚ್ಚೇಗೌಡ. ಶಾಸಕ, ಹೊಸಕೋಟೆ

click me!