ಚುನಾವಣೆ ಅಕಾಡದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಎದುರಿಸಲು ಸಜ್ಜಾಗುತ್ತಿರುವ ಜೆಡಿಎಸ್ ಪಕ್ಷ ಶಿವಮೊಗ್ಗ ಜಿಲ್ಲೆಯಲ್ಲೂ ಚುನಾವಣೆ ಸಿದ್ಧತೆಯನ್ನು ಪಂಚರತ್ನ ಯಾತ್ರೆ ಮೂಲಕ ಜೋರಾಗಿಯೇ ನಡೆಸುತ್ತಿದೆ. ಜಿಲ್ಲೆಯಲ್ಲಿ ಗುರುವಾರ ಪಂಚರತ್ನ ಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೂರನೇ ದಿನವೂ ಯಾತ್ರೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ.
ಶಿವಮೊಗ್ಗ (ಫೆ.24) : ಚುನಾವಣೆ ಅಕಾಡದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಎದುರಿಸಲು ಸಜ್ಜಾಗುತ್ತಿರುವ ಜೆಡಿಎಸ್ ಪಕ್ಷ ಶಿವಮೊಗ್ಗ ಜಿಲ್ಲೆಯಲ್ಲೂ ಚುನಾವಣೆ ಸಿದ್ಧತೆಯನ್ನು ಪಂಚರತ್ನ ಯಾತ್ರೆ ಮೂಲಕ ಜೋರಾಗಿಯೇ ನಡೆಸುತ್ತಿದೆ. ಜಿಲ್ಲೆಯಲ್ಲಿ ಗುರುವಾರ ಪಂಚರತ್ನ ಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೂರನೇ ದಿನವೂ ಯಾತ್ರೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ.
ನೂರಾರು ಸಂಖ್ಯೆಯ ಕಾರ್ಯಕರ್ತರು ಯಾತ್ರೆಯನ್ನು(Pancharatna rathayatre) ಹಿಂಬಾಲಿಸುತ್ತಿದ್ದಾರೆ. ತರಾವರಿ ಹಣ್ಣು, ಹೂಗಳ ಹಾರ ಹಾಕಿ, ಜಯಘೋಷ ಮೊಳಗಿಸಿದರು. ಮೂರನೇ ದಿನವಾದ ಗುರುವಾರ ಸೂಳೆಬೈಲುನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭಗೊಂಡಿದ್ದು, ಕಾರ್ಯಕರ್ತರು ಬೃಹತ್ ತುಳಸಿ ಹಾರ ಹಾಕಿ, ಸ್ವಾಗತ ಕೋರಿದರು. ಸೂಳೆಬೈಲು ಈದ್ಗಾ ಮೈದಾನಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ, ಮುಸ್ಲಿಂ ಬಾಂಧವರೊಂದಿಗೆ ಚರ್ಚೆ ನಡೆಸಿದರು.
HD Kumaraswamy: ಇಂದು ತೀರ್ಥಹಳ್ಳಿಗೆ ಎಚ್‌ಡಿಕೆ: ಹಸಿ ಅಡಕೆ ಬೃಹತ್ ಹಾರ, ಟೋಪಿ ರೆಡಿ!
ನವಜೋಡಿಗೆ ಆಶೀರ್ವಾದ, ದೇವಸ್ಥಾನಕ್ಕೆ ಭೇಟಿ:
ಈ ನಡುವೆ ಯಲವಟ್ಟಿಯಲ್ಲಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಯಾತ್ರೆ ಯಶಸ್ವಿಯಾಗಲಿ ಎಂದು ವೀರಭದ್ರೇಶ್ವರ ದೇವರಲ್ಲಿ ಪ್ರಾರ್ಥಿಸಿದರು. ಪಿಳ್ಳಂಗಿರಿ ಗ್ರಾಮದಲ್ಲಿ ಶ್ರೀ ಲಕ್ಷ್ಮೇ ವೆಂಕಟೇಶ್ವರಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆದರು. ಈ ನಡುವೆ ಹೊಳೆಬೆನವಳ್ಳಿಯಲ್ಲಿ ನವ ಜೋಡಿಗಳು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ತರಾವರಿ ಹಾರ ಹಾಕಿ ಸ್ವಾಗತ:
ಹಸೂಡಿ ಗ್ರಾಮದಲ್ಲಿ ಪಂಚರತ್ನ ಯಾತ್ರೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪೈನಾಪಲ್ ಹಣ್ಣಿನ ಹಾರ ಹಾಕಿದರು. ಯಲವಟ್ಟಿಯಲ್ಲಿ ಬೃಹತ್ ಮೂಸಂಬಿ ಹಾರವನ್ನು ಹಾಕಿ ಅಭಿಮಾನ ಮೆರೆದರು. ಹಸೂಡಿ ಫಾಮ್‌ರ್‍ನಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಕಾರ್ಯಕರ್ತರಿಂದ ಮಲ್ಲಿಗೆ ಹಾರ ಹಾಕಿ ಪಂಚರತ್ನ ರಥಯಾತ್ರೆಗೆ ಸ್ವಾಗತ ಕೋರಿದರು. ಶೆಟ್ಟಿಹಳ್ಳಿ ಗ್ರಾಮದಲ್ಲಿ ಸುಗಂಧರಾಜ ಹೂವಿನ ಬೃಹತ್ ಹಾರ ಹಾಕಿ ಸ್ವಾಗತ ಕೋರಿದರು. ಕಾಟಿಕೆರೆಯಲ್ಲಿ ರೆಡ್‌ರೋಸ್ ಬೃಹತ್ ಹಾರ ಹಾಕಿ ಸ್ವಾಗತಿಸಿದರೆ, ಪಿಳ್ಳೆಂಗೆರೆ ಗ್ರಾಮದಲ್ಲಿ ಬಾಳೆಕಾಯಿ ಗೊನೆಯ ವಿಶೇಷ ಹಾರ ಹಾಕಿ ಸ್ವಾಗತ ಕೋರಿದರು. ಬಿ.ಬೀರನಹಳ್ಳಿಯಲ್ಲಿ ಸುಗಂಧರಾಜ ಬೃಹತ್ ಹಾರ ಹಾಕಲಾಯಿತು. ಹಾರೋಬೆನಹಳ್ಳಿಯಲ್ಲಿ ಎಳನೀರು ಹಾರ, ಹೊಳೆಬೆನವಹಳ್ಳಿಯಲ್ಲಿ ಬೃಹತ್ ಮೂಸಂಬೆ ಹಣ್ಣಿನ ಹಾರ ಹಾಕಿ ಭರ್ಜರಿ ಸ್ವಾಗತ ಕೋರಿದರು.
Shivaji Maharaj statue: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶಾಕ್ ಕೊಟ್ಟ ರಮೇಶ್ ಜಾರಕಿಹೊಳಿ!
‘3 ತಿಂಗಳು ತಡೀರಿ, ಸೈಕಲ್ ಕೊಡುತ್ತೇನೆ’
ಶಿವಮೊಗ್ಗ(Shivamogga) ತಾಲೂಕಿನ ಬಿ.ಬೀರನಹಳ್ಳಿಯ ಮಾರುತಿ ಪ್ರೌಢಶಾಲೆ ಆವರಣದಲ್ಲಿ ಮಧ್ಯಾಹ್ನ ಭೋಜನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೋಜನದ ಬಳಿಕ ಶಾಲಾ ಮಕ್ಕಳ ಜೊತೆ ಸಂವಾದ ನಡೆದರು. ಈ ವೇಳೆ ನಮಗೆ ಸೈಕಲ್ ಕೊಟ್ಟಿಲ್ಲ, ನಮಗೆ ಸೈಕಲ್ ಕೊಡಿ ಎಂದು ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ ಇನ್ನೂ ಮೂರು ತಿಂಗಳು ಕಾಯಿರಿ. ನಮ್ಮ ಸರ್ಕಾರ ಬಂದ ಕೂಡಲೇ ನಿಮಗೆ ಸೈಕಲ್ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಮಾಜಿ ಶಾಸಕಿ ಶಾರದಾ ಪೂರಾರಯನಾಯ್‌್ಕ, ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಮತ್ತಿತರರು ಮುಖಂಡರು ಇದ್ದರು.