ವಚನಾನಂದ ಶ್ರೀಗಳ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗುತ್ತಿದೆ. ಮುಖ್ಯಮಂತ್ರಿಯನ್ನೇ ಬೆದರಿಸಿದರೆ ಏನು ಫಲ ಸಿಗುವುದಯ್ಯಾ? ಮನವಿ ಮಾಡುವುದು ಓಕೆ..ಬೆದರಿಕೆ ಹಾಕುವುದು ಯಾಕೆ ಎನ್ನುವ ಚರ್ಚೆ ರಾಜ್ಯ ರಾಜಕಾರನದಲ್ಲಿ ನಡೆದಿದೆ. ಇದರ ಮಧ್ಯೆ ಈ ಬಗ್ಗೆ ಮತ್ತೆ ವಚನಾನಂದ ಶ್ರೀಗಳು ಮಾತನಾಡಿದ್ದಾರೆ. ಹಾಗಾದ್ರೆ, ಇವತ್ತು ಏನಂದ್ರು? ಮುಂದೆ ನೋಡಿ..
ದಾವಣಗೆರೆ, (ಜ.15): ದಾವಣಗೆರೆಯ ಹರಿಹರ ಹರಜಾತ್ರೆಯಲ್ಲಿ ವಚನಾನಂದ ಶ್ರೀಗಳು, ಪಂಚಮಸಾಲಿ ಶಾಸಕರಿಗೆ ಸಿಎಂ ಬಳಿ ಮಂತ್ರಿಗಿರಿ ಕೇಳಿದ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.
ಸಿಎಂ ಬಳಿ ಸಾರ್ವಜನಿಕವಾಗಿ ಬೇಡಿಕೆ ಇಡುವುದು, ಧಮ್ಕಿ ಹಾಕುವುದು ಸರಿಯಲ್ಲ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ರೆ, ಕೆಲವರು ಸ್ವಾಮೀಜಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ನಾವಿರೋದೆ ಹೀಗೆ ಕಣ್ರಿ: ಬೇಡಿಕೆ-ಬೆದರಿಕೆಯ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ವಚನಾನಂದ ಸ್ವಾಮಿ
ಕ್ಷಮೆಯಾಚಿದ ಸ್ವಾಮೀಜಿ
ಹೌದು...ಮಂಗಳವಾರ ಬಹಿರಂಗ ವೇದಿಕೆಯಲ್ಲಿ ಸಿಎಂ ಆಗಿ ಆಡಿರುವ ಮಾತುಗಳಿಗೆ ವಚನಾನಂದ ಶ್ರೀಗಳು ಬುಧವಾರ ಕ್ಷಮೆಯಾಚಿಸಿದ್ದಾರೆ. ನಾನು ಆಡಿದ ಮಾತಿನಲ್ಲಿ ತಪ್ಪಾಗಿದ್ದರೆ ಅದನ್ನ ಹೊಟ್ಟೆಯಲ್ಲಿ ಹಾಕಿಕೊಂಡು ಕ್ಷಮಿಸಿ ಎಂದು ಹೇಳುವ ಮೂಲಕ ಯಡಿಯೂರಪ್ಪಗೆ ಕ್ಷಮೆಕೋರಿದರು.
ಬಹಿರಂಗ ವೇದಿಕೆಯಲ್ಲೇ ಪಂಚಮಸಾಲಿ ಸ್ವಾಮೀಜಿ-BSY ನಡುವೆ ಮಾತಿನ ಚಕಮಕಿ
ಬುಧವಾರ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಇರುವ ವೀರಶೈವ ಪಂಚಮಸಾಲಿ ಗುರುಪೀಠ ದಲ್ಲಿ ನಡೆದ ಹರಜಾತ್ರೆ ಯಲ್ಲಿ ಪ್ರಸ್ತಾಪಿಸಿದ ವಚನಾನಂದ ಸ್ವಾಮೀಜಿ, ನನ್ನ ಜತೆ ಸಮಾಜವಿದೆ. ಸಮಾಜಕ್ಕಾಗಿ ನಾನು ಇನ್ನು ಸಣ್ಣವನಾಗಿದ್ದೇನೆ. ನಾನು ಮನಸ್ಸು ಮಾಡಿದ್ದರೆ ಯಾವುದೋ ದೇಶದಲ್ಲಿ ವಾಸವಾಗಬಹುದಿತ್ತು.
ಆದ್ರೆ ಸಮಾಜಕ್ಕೆ ಒಳ್ಳೆಯದನ್ನ ಮಾಡಬೇಕು ಎಂದು ಬಂದಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ವಿರುದ್ಧ ಮಾತಾಡಿದನ್ನ ಪ್ರಸ್ತಾಪಿಸಿದ ಸ್ವಾಮೀಜಿ, ನನ್ನಿಂದ ತಪ್ಪಾಗಿದ್ದರೆ ಅದನ್ನ ಹೊಟ್ಟೆಯಲ್ಲಿ ಹಾಕಿಕೊಳ್ಳಿ ಎಂದು ವಿನಂತಿಮಾಡಿದರು. ಈ ಮೂಲಕ ಎಲ್ಲಾ ಅಂತ್ಯ ಕಂತೆಗಳಿಗೆ ಫುಲ್‌ಸ್ಟಾಪ್ ಇಟ್ಟರು.
ಮಂಗಳವಾರ ಹರಜಾತ್ರೆಯಲ್ಲಿ ವೇದಿಕೆಯಲ್ಲೇ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕು. ಇವಲ್ಲವಾದಲ್ಲಿ ನಮ್ಮ ಸಮಾಜ ನಿಮ್ಮನ್ನು ಕೈಬಿಡುತ್ತೆ ಎಂದು ಪರೋಕ್ಷವಾಗಿ ವಾರ್ನಿಂಗ್ ಕೊಟ್ಟಿದ್ದರು. ಸ್ವಾಮೀಜಿಯ ವರ್ತನೆಯಿಂದ ಆಕ್ರೋಶಗೊಂಡ ಸಿಎಂ ಬಿಎಸ್‌ವೈ ಆಕ್ಷೇಪ ವ್ಯಕ್ತಪಡಿಸಿ ವೇದಿಕೆಯಿಂದ ಹೊರಟು ಹೋಗಲು ಮುಂದಾಗಿದ್ದರು.
ಇದಕ್ಕೆ ಸ್ವಾಮೀಜಿ, ನೀವೂ ಇಲ್ಲಿ ಕುಳಿತುಕೊಳ್ಳಿ ಅಂತೆಲ್ಲ ಎರಡ್ಮೂರು ಬಾರಿ ಜೋರು ಧ್ವನಿಯಲ್ಲಿ ಹೇಳಿದ್ದರು. ಬಳಿಕ ಯಡಿಯೂರಪ್ಪ ಕುರ್ಚಿ ಮೇಲೆ ಕುಳಿತುಕೊಂಡಿದ್ದರು.