ನಮ್ಮದು ಸಂವಿಧಾನದಡಿ ನಡೆಯುವ ಸರ್ಕಾರ: ಸಚಿವ ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Dec 28, 2023, 4:23 AM IST

ರಾಜ್ಯದಲ್ಲಿರುವುದು ಸಂವಿಧಾನ, ಬಸವ ಹಾಗೂ ಅಂಬೇಡ್ಕರ್‌ ತತ್ವದ ಮೇಲೆ ನಡೆಯುತ್ತಿರುವ, ಎಲ್ಲರನ್ನೂ ಒಳಗೊಂಡ ಸರ್ಕಾರ. ಆದರೆ ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ ಬದಿಗೊತ್ತಿ ಹಿಂದುತ್ವದ ಅಡಿ ನಡೆಯುತ್ತಿತ್ತು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 


ಹುಬ್ಬಳ್ಳಿ (ಡಿ.28): ರಾಜ್ಯದಲ್ಲಿರುವುದು ಸಂವಿಧಾನ, ಬಸವ ಹಾಗೂ ಅಂಬೇಡ್ಕರ್‌ ತತ್ವದ ಮೇಲೆ ನಡೆಯುತ್ತಿರುವ, ಎಲ್ಲರನ್ನೂ ಒಳಗೊಂಡ ಸರ್ಕಾರ. ಆದರೆ ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ ಬದಿಗೊತ್ತಿ ಹಿಂದುತ್ವದ ಅಡಿ ನಡೆಯುತ್ತಿತ್ತು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಆಗ ಸ್ಪೀಕರ್‌ ಹುದ್ದೆಯಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾನು ಆರೆಸ್ಸೆಸ್‌ನಿಂದ ಬಂದವನು ಎಂದು ಪದೇ ಪದೆ ಹೇಳುತ್ತಿದ್ದರು. 

ಸರ್ಕಾರಗಳು ನಡೆಯುವುದು ಭಗವದ್ಗೀತೆ, ಬೈಬಲ್‌, ಕುರಾನ್‌ ಆಧಾರದ ಮೇಲಲ್ಲ. ಸಂವಿಧಾನದ ಅಡಿ. ಆ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ ಎನ್ನುವ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ಮೊದಲು ತಮ್ಮ ಮಗನಿಗೆ ಟಿಕೆಟ್ ಕೊಡಿಸಲಿ’ ಎಂದು ತಿರುಗೇಟು ನೀಡಿದರು.

Latest Videos

undefined

ಚಲುವರಾಯಸ್ವಾಮಿಗೆ ಲೋಕಸಭೆ ಚುನಾವಣೆ ಸವಾಲು: ಫಲಿತಾಂಶ ವ್ಯತ್ಯಾಸವಾದರೆ ಸಚಿವ ಸ್ಥಾನ ಹೋಗುತ್ತಾ?

ಕನ್ನಡಿಗರು ಪ್ರಧಾನಿ ಆಗೋದು ಒಳ್ಳೆ ಬೆಳವಣಿಗೆ: ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ''ಇಂಡಿಯಾ” ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಪ್ರಸ್ತಾವನೆಯನ್ನು ಪುತ್ರ, ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸ್ವಾಗತಿಸಿದ್ದಾರೆ. ಪ್ರಧಾನಿ ಹುದ್ದೆಗೆ ಕನ್ನಡಿಗರ ಹೆಸರು ಪ್ರಸ್ತಾಪವಾಗಿರೋದು ಒಳ್ಳೆಯ ಬೆಳವಣಿಗೆ, ಕನ್ನಡಿಗರೊಬ್ಬರು ಪ್ರಧಾನಿ ಆಗುತ್ತಾರೆ ಅಂದ್ರೆ ಬೇಡ ಅಂತೀರಾ? ಆಗುವುದೆಲ್ಲವೂ ಒಳ್ಳೆಯದು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಈಗ ನಮ್ಮ ಮುಂದೆ ಇರುವ ಸವಾಲುಗಳು ಏನೆನ್ನುವುದನ್ನು ಗಮನಿಸಬೇಕು, ಸುಮ್ಮನೆ ಹಗಲುಗನಸು ಕಾಣುವುದಲ್ಲ. ನಮ್ಮ ಮುಂದೆ ಈಗಿರುವ ಸವಾಲು ಆದಷ್ಟು ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ದೆಹಲಿಗೆ ಕಳಿಸುವುದು ಎಂದು ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ. ಬಹುಮತಕ್ಕಾಗಿ ಏನೇನು ಮಾಡಬೇಕು, ಅದನ್ನು ಮಾಡುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾರ್ಗದರ್ಶನದಂತೆ ನಾವು ಕೆಲಸ ಮಾಡುತ್ತೇವೆ ಎಂದರು. ಮೊದಲು ಕಾಂಗ್ರೆಸ್ ಮತ್ತು ಮೈತ್ರಿಕೂಟ 200-250 ಸ್ಥಾನ ಗೆಲ್ಲಬೇಕು. ಇವೆಲ್ಲವೂ ಮುಗಿದ ಮೇಲೆ ಮುಂದಿನ ಪ್ರಶ್ನೆಗಳು ಎಂದು ಸಚಿವರು ಹೇಳಿದರು.

ರಾಜಕೀಯ ಬಣ್ಣ ಬಳಿಯುತ್ತಿರುವ ಬಿಜೆಪಿ: ಸಂಸತ್‍ನಲ್ಲಿ ನಡೆದ ದಾಳಿಯ ಕುರಿತು ತನಿಖೆ ನಡೆಸದ ಬಿಜೆಪಿ ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರಿಗೆ ಅರಿವು ಇದೆಯೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರದ ಅಂಕಿಅಂಶಗಳೇ ಇದನ್ನು ಹೇಳುತ್ತಿವೆ.

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದರು ಎಂದು ಅವರ ಪೋಷಕರು ಹೇಳಿದ್ದಾರೆ. ಸಿಕ್ಕಾಕಿಕೊಂಡ ಸಂದರ್ಭದಲ್ಲಿ ಅವರು ಅದೇ ಘೋಷಣೆ ಕೂಗಿದ್ದಾರೆ. ಈ ಘಟನೆ ಯಾಕೆ ಆಯಿತು? ಹೇಗೆ ಆಯಿತು? ಅಂತ ತಿಳಿಯೋದುಬಿಟ್ಟು ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಶಾ, ಅಜೀತ್ ದೋಹಲ್ ಎಲ್ಲಿದ್ದಾರೆ? ಪ್ರಧಾನಿ ಮಂತ್ರಿಗಳು ಇದು ಬಹಳ ಗಂಭೀರ ವಿಷಯ ಎಂದು ಒಪ್ಪಿಕೊಂಡಿದ್ದಾರೆ. ಹೋಮ್ ಮಿನಿಸ್ಟರ್ ಇಲ್ಲಿಯವರೆಗೂ ಯಾಕೆ ಸ್ಟೇಟಮೆಂಟ್ ಕೊಟ್ಟಿಲ್ಲ, ಹೋಂ ಮಿನಿಸ್ಟರ್ ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಕೊಳ್ಳೆ ಹೊಡೆದು ಖಜಾನೆಯನ್ನೇ ಖಾಲಿ ಮಾಡಿದ ಬಿಜೆಪಿ: ಶಾಸಕ ಸಿ.ಎಸ್.ನಾಡಗೌಡ

ಮೈಸೂರು ಎಂಪಿ ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದಕ್ಕೆ ಇದನ್ನು ಮುಚ್ಚಿ ಹಾಕುತ್ತಿದ್ದಾರೆ. ಮಾತು ಎತ್ತಿದರೆ ನಮ್ಮ ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಬಗ್ಗೆ ಮಾತಾನಾಡಲಿಕ್ಕೆ ಕ್ಯಾಮೆರಾ ಮುಂದೆ ಬರುತ್ತಿದ್ದ ಪ್ರತಾಪ್ ಸಿಂಹ ಈಗ ಎಲ್ಲಿ ಕಾಣೆ ಆಗಿದ್ದಾರೆ. ಇವರು ಪಾಸ್ ಕೊಟ್ಟಿದ್ದರಿಂದ ಇಡೀ ದೇಶ ತಲೆ ತಗ್ಗಿಸುವಂತೆ ಆಗಿದೆ. ಪ್ರತಾಪ್ ಸಿಂಹ ಈ ಬಗ್ಗೆ ಏನಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದರು.

click me!