ಹೊಸಬರಿಗೆ ಅವಕಾಶ ಸರಿಯಾದ ಕ್ರಮ: ನಡ್ಡಾ

By Kannadaprabha News  |  First Published Apr 19, 2023, 4:15 AM IST

ಕಾಂಗ್ರೆಸ್‌ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ‘ಪ್ರತಿಪಕ್ಷಕ್ಕೆ ನಾವು ದೃಷ್ಟಿಯನ್ನು (ಐ ಸೈಟ್‌) ನೀಡಬಲ್ಲೆವು; ಆದರೆ ದೂರದೃಷ್ಟಿಯನ್ನು (ವಿಷನ್‌) ನೀಡಲು ಸಾಧ್ಯವಿಲ್ಲ ಎಂದು ಕಟುಕಿದ ಜೆ.ಪಿ.ನಡ್ಡಾ. 


ಹುಬ್ಬಳ್ಳಿ(ಏ.19): ಬಿಜೆಪಿಯಿಂದ ಈ ಬಾರಿ ಕೆಲಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಪಕ್ಷದ ಈ ಕ್ರಮ ಸರಿಯಾಗಿಯೇ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನಿರಾಕರಣೆ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಬಿವಿಬಿ ಕಾಲೇಜಿನಲ್ಲಿ ಪಕ್ಷ ಹಮ್ಮಿಕೊಂಡಿದ್ದ ಪ್ರಬುದ್ಧರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಂಗಳವಾರ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಶೆಟ್ಟರ್‌ ಪಕ್ಷ ತೊರೆದಿರುವುದರಿಂದ ಎದುರಾಗಿರುವ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ನಡ್ಡಾ 2 ದಿನ ಹುಬ್ಬಳ್ಳಿಯಲ್ಲೇ ಠಿಕಾಣಿ ಹೂಡಿದ್ದಾರೆ. ಇದರ ಭಾಗವಾಗಿ ಬಿವಿಬಿ ಕಾಲೇಜ್‌ನಲ್ಲಿ ಪ್ರಬುದ್ಧರ ಜೊತೆಗೆ ಸಂವಾದ ಆಯೋಜಿಸಿತ್ತು.

Tap to resize

Latest Videos

ಬಿಜೆಪಿಯಲ್ಲಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ್ ನೇರ ಕಾರಣ, ಶೆಟ್ಟರ್ ಗಂಭೀರ ಆರೋಪ!

ಸಂವಾದದಲ್ಲಿ ಶರತ್‌ ದೇಶಪಾಂಡೆ ಎನ್ನುವವರು ಇತ್ತೀಚಿಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪಾಲಿಕೆಯ 16 ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ಕೊಟ್ಟರು. ಶಿಸ್ತಿನ ಪಕ್ಷವಾಗಿರುವ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಸತ್ತಾತ್ಮಕವಾಗಿ ಕೆಲವೊಂದಿಷ್ಟುನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಅದೇ ರೀತಿ ಈ ವಿಷಯದಲ್ಲಿ ಪಕ್ಷ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದರು.
ಇದಕ್ಕೂ ಮುನ್ನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ‘ಪ್ರತಿಪಕ್ಷಕ್ಕೆ ನಾವು ದೃಷ್ಟಿಯನ್ನು (ಐ ಸೈಟ್‌) ನೀಡಬಲ್ಲೆವು; ಆದರೆ ದೂರದೃಷ್ಟಿಯನ್ನು (ವಿಷನ್‌) ನೀಡಲು ಸಾಧ್ಯವಿಲ್ಲ ಎಂದು ಕಟುಕಿದರು.

ಆ ಪಕ್ಷಕ್ಕೆ ಹೊಣೆಗಾರಿಕೆಯೂ ಇಲ್ಲ, ಪ್ರಜಾಸತ್ತಾತ್ಮಕ ಧೋರಣೆಯೂ ಇಲ್ಲ. ಕೇವಲ ಒಡೆದು ಆಳುವುದು ಅದರ ನೀತಿ. ಹೀಗೆ ಮಾಡುವ ಭರದಲ್ಲಿ ಈಗ ದೇಶದಲ್ಲಿ ಈ ಪಕ್ಷವೇ ಒಡೆದು ಹೋಗಿದೆ. ಕರ್ನಾಟಕದಲ್ಲೂ ಬರುವ ಚುನಾವಣೆಯಲ್ಲಿ ಆ ಪಕ್ಷ ನಿರ್ನಾಮವಾಗಲಿದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಇನ್ನಷ್ಟುಪ್ರಯೋಜನ ದೊರೆಯಲಿದೆ ಎಂದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!