
ಬೆಂಗಳೂರು,(ಜ.16): ಆಪರೇಷನ್ ಇಲ್ಲ ಇಲ್ಲ ಎನ್ನುತ್ತಲೇ ಬಿಜೆಪಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಆಪತ್ತು ತಂದೊಡ್ಡಿದೆ.
ಮೈತ್ರಿ ಸರ್ಕಾರ ರಚನೆ ಆದಗಿನಿಂದಲೇ ಸದ್ದಿಲ್ಲದೇ ಬಿಜೆಪಿ ಆಪರೇಷನ್ ಗೆ ಕೈ ಹಾಕುತ್ತಲೇ ಇದೆ. ಆದ್ರೆ ಅದ್ಯಾವುದಕ್ಕೂ ಸಮಯವಕಾಶಗಳು ಸಿಕ್ಕಿರಲಿಲ್ಲ.
ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮಹತ್ವದ ಆದೇಶ ನೀಡಿದ ಸಿದ್ದರಾಮಯ್ಯ
ಆದ್ರೆ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಬಳಿಕ ಬಿಜೆಪಿ ಸದ್ದಿಲ್ಲದೇ ಕಾಂಗ್ರೆಸ್ ನ ಅತೃಪ್ತ ಶಾಸಕರಿಗೆ ಆಪರೇಷನ್ ಮೂಲಕ ಸೆಳೆಯಲು ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸಿದೆ.
ಅಂದಿನ ಗುಪ್ತ್-ಗುಪ್ತ ಆಪರೇಷನ್ ಇದೀಗ ರಾಜ ರಾಜಕಾರಣದಲ್ಲಿ ದೊಡ್ಡ ಹಂತಕ್ಕೆ ತಲುಪಿದೆ. ಆದರೂ ಬಿಜೆಪಿ ನಾಯಕರು ಆಪರೇಷನ್ ಕಮಲವನ್ನು ತಳ್ಳಿಹಾಕುತ್ತಿದ್ದು, ಆಪರೇಷನ್ ಮಾಡುವ ಮಾತೇ ಇಲ್ಲ ಎನ್ನುತ್ತಲೇ ಬಿಜೆಪಿ ಈಗ ಮೈತ್ರಿಗೆ ಕಂಟಕ ತಂದೊಡ್ಡಿದೆ.
ರಾಜ್ಯ ರಾಜಕಾರಣದ ಸಮಗ್ರ ಬೆಳವಣಿಗೆಗಳು
ಆಪರೇಷನ್ ಸಿಕ್ರೇಟ್ ಬಿಚ್ಚಿಟ್ಟ JDS ಶಾಸಕ
ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಆಪರೇಷನ್ ಕಮಲದ ಮುಖವಾಡವನ್ನು ಬಟಾಬಯಲು ಮಾಡಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿನ್ನೆ (ಮಂಗಳವಾರ) ರಾತ್ರಿ ನಮ್ಮ ಪಕ್ಷದ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಗೆ ದೂರವಾಣಿ ಕರೆ ಮಾಡಿದ್ದು, 60 ಕೋಟಿ ದುಡ್ಡು, ಸಚಿವ ಸ್ಥಾನದ ಆಮೀಷ ಒಡ್ಡಿದ್ದಾರೆ ಎಂದು ಶಿವಲಿಂಗೇಗೌಡ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.