ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮಹತ್ವದ ಆದೇಶ ನೀಡಿದ ಸಿದ್ದರಾಮಯ್ಯ

By Web DeskFirst Published Jan 16, 2019, 3:43 PM IST
Highlights

ರಾಜ್ಯ ರಾಜಕಾರಣದಲ್ಲಿದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದು, ಜ. 18ರಂದು ಈ ಎಲ್ಲ ಬೆಳವಣಿಗೆಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

ಬೆಂಗಳೂರು, (ಜ.16): ರಾಜ್ಯ ರಾಜಕೀಯಲ್ಲಿ ಸಾಕಷ್ಟು ಕ್ಷಿಪ್ರ ಬೆಳವಣಿಗೆಗಳು  ಜೋರು ಆಗುತ್ತಿದ್ದಂತೆಯೇ ಕೊನೆಗೂ ರಾಜ್ಯ ಕಾಂಗ್ರೆಸ್​ ಎಚ್ಚೆತ್ತುಕೊಂಡಿದೆ.

ಇಬ್ಬರು ಪಕ್ಷೇತರ ಶಾಸಕರು ರಾಜ್ಯ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದು, ಬಿಜೆಪಿಯ ಮೊದಲ ಪ್ಲ್ಯಾನ್ ಸಕ್ಸಸ್ ಆಗಿದ್ದು ಪರಿಸ್ಥಿತಿ ಕೈಮೀರಿ ಹೋಗುವಷ್ಟರಲ್ಲೇ ಕಾಂಗ್ರೆಸ್ ಹೈಅಲರ್ಟ್ ಆಗಿದೆ.

ಆಪರೇಷನ್ ಭೀತಿ: ಅಲರ್ಟ್ ಆದ ಕಾಂಗ್ರೆಸ್ಸಿನಿಂದ ಮಾಸ್ಟರ್ ಪ್ಲ್ಯಾನ್..!

ಬಿಜೆಪಿಯ ಆಪರೇಷನ್ ಭೀತಿಯಿಂದ ತಮ್ಮೆಲ್ಲ ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸಿದ್ದು, ಜನವರಿ 18ಕ್ಕೆ ಶಾಸಕಾಂಗ ಸಭೆ ಕರೆದಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆ ಕರೆದಿದ್ದು, ಎಲ್ಲಾ ನಾಯಕರೂ ಕಡ್ಡಾಯವಾಗಿ ಹಾಜರಾಗುವಂತೆ ಖಡಕ್ ಸೂಚನೆ ನೀಡಿದ್ದಾರೆ. ಜ. 18ರ ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಶಾಸಕಾಂಗ ಸಭೆ ನಡೆಯಲಿದೆ.

ರಾಜ್ಯ ರಾಜಕಾರಣದ ಸಂ'ಕ್ರಾಂತಿ'ಯ ಹೈಡ್ರಾಮ

ಈ ಸಭೆ ಮೂಲಕ ಮೈತ್ರಿ ಸರ್ಕಾರ ಸುಭದ್ರವಗಿದೆ ಎಂದು ಸಾಬೀತು ಪಡಿಸಲು ಕಾಂಗ್ರೆಸ್ ಮುಂದಾಗಿದೆ. ಯಾವ ಶಾಸಕರು ಬಿಜೆಪಿ ಸೆಳೆತಕ್ಕೊಳಗಾಗಿದ್ದಾರೆ ಎನ್ನುವುದು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಒಂದು ವೇಳೆ ಕಾಂಗ್ರೆಸ್ ಸಭೆಗೆ ಎಷ್ಟು ಶಾಸಕರು ಹಾಜರಾಗುತ್ತಾರೋ ಅದರ ಮೇಲೆ ಮೈತ್ರಿ ಸರ್ಕಾರ ಭವಿಷ್ಯ ನಿರ್ಧಾರವಾಗಲಿದೆ.

ಒಟ್ಟಿನಲ್ಲಿ ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕರು ಕಾಂಗ್ರೆಸ್ ಸಭೆಗೆ ಯಾರೆಲ್ಲ ಹಾಜರಾಗ್ತಾರೆ? ಯಾರೆಲ್ಲ ಗೈರಾಗಲಿದ್ದಾರೆ? ಎನ್ನುವುದ ಮಾತ್ರ ಕುತೂಹಲ ಕೆರಳಿಸಿದೆ.

click me!