ಸೋಲಿನಿಂದ ಕೆಲವು ವ್ಯಕ್ತಿಗಳು ವಿಚಲಿತರಾಗಿದ್ದಾರೆ. ಯಾವುದೇ ಹೇಳಿಕೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಹೇಳಬೇಕು. ಮಾಧ್ಯಮದ ಮುಂದೆ ಮಾತನಾಡಬಾರದು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಅವರಿಗೆ ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು.
ಶಿವಮೊಗ್ಗ (ಜು.01): ಸೋಲಿನಿಂದ ಕೆಲವು ವ್ಯಕ್ತಿಗಳು ವಿಚಲಿತರಾಗಿದ್ದಾರೆ. ಯಾವುದೇ ಹೇಳಿಕೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಹೇಳಬೇಕು. ಮಾಧ್ಯಮದ ಮುಂದೆ ಮಾತನಾಡಬಾರದು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಅವರಿಗೆ ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನಿತರನ್ನು ಕೂರಿಸಿ ನಮ್ಮ ನಾಯಕರು ಇಂದು ಮಾತನಾಡುತ್ತಿದ್ದಾರೆ. ಬಿಜೆಪಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡುತ್ತದೆ. ಸೋಲಿನಿಂದ ಬಹಿರಂಗವಾಗಿ ಟೀಕೆ ಮಾಡೋದು ಸರಿಯಲ್ಲ.
ಇದರಿಂದ ಸಾವಿರಾರು ಮಂದಿ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಸಹನೆಯಿಂದ ಪಕ್ಷ ಕಟ್ಟುವ ಕೆಲಸ ಮಾಡಬೇಕು ಹೇಳಿದರು. ಚುನಾವಣೆ ಉಸ್ತುವಾರಿಗಳನ್ನು ಬೇರೆ ಬೇರೆಯವರನ್ನು ನೇಮಕ ಮಾಡುತ್ತಾರೆ. ಬಹಳಷ್ಟು ಜನ ಗೆಲ್ಲದಿದ್ದವರು ಇದ್ದಾರೆ. ಸಂಘಟನೆ ಕೆಲಸ ಮಾಡಲ್ಲ ಅಂತಾ ಇಲ್ಲ. ಯಾರಿಗೆ ಕೆಲಸ ಮಾಡುವ ಅರ್ಹತೆ ಇದೆಯೋ ಅವರನ್ನು ಮಾಡುತ್ತಾರೆ. ಏನೇ ಗೊಂದಲಗಳಿದ್ದರೂ ಪಕ್ಷದ ಚೌಕಟ್ಟಿನೊಳಗೆ ತೀರ್ಮಾನ ಮಾಡಿಕೊಳ್ಳಬೇಕು. ಯಾರು ಕೂಡ ಗೊಂದಲ ಮೂಡಿಸುವ ಹೇಳಿಕೆ ನೀಡಬಾರದು ಎಂದರು.
undefined
ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಹೊಣೆಯಲ್ಲ: ಸಂಸದ ಮುನಿಸ್ವಾಮಿ
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ: ಆಡಿದ ನಾಲಿಗೆಗೆ ತದ್ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ಇದು ನಿಜಕ್ಕೂ ಅನ್ಯಾಯ. ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಹಣ ಕೊಡುವ ವಿಚಾರ. ನಾವು ಹಣ ಕೊಡಿ ಅಂದಾಗ ಅಕ್ಕಿ ಕೊಡೋದು ಊಟಕ್ಕೆ. ದುಡ್ಡು ಊಟ ಮಾಡೋಕೆ ಆಗಲ್ಲ ಅಂದಿದ್ದರು ಸಿದ್ದರಾಮಯ್ಯ. ಈಗ ಹಣ ಕೊಡ್ತೀವಿ ಅಂತಿದ್ದಾರೆ. 10 ಕೆಜಿ ಅಕ್ಕಿ ಕೊಡ್ತೀವಿ ಅಂದವರು 5 ಕೆಜಿಗೆ ಹಣ ಕೊಡ್ತೀವಿ ಅಂತಿದ್ದಾರೆ. ಒಂದೊಂದು ಬಾರಿ ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಯೋಗ ಬಲ್ಲವನಿಗೆ ರೋಗವಿಲ್ಲ: ‘ಯೋಗ ಬಲ್ಲವನಿಗೆ ರೋಗ ವಿಲ್ಲ’ ಎಂಬ ಗಾದೆ ಮಾತಿನಂತೆ ಮನುಷ್ಯನನ್ನು ದೈವತ್ವದ ಕಡೆಗೆ ಕೊಂಡೊಯ್ಯಬಲ್ಲ ಯೋಗಾಸನದ ಅಭ್ಯಾಸ ಜೀವನದಲ್ಲಿ ನಿತ್ಯದ ಆಚರಣೆ ಆಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಪರಂಪರೆಯ ಯೋಗ ಇಂದು ಜಗತ್ತಿನ 173 ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ.
ವಿಶ್ವಗುರು ಸ್ಥಾನದಲ್ಲಿರುವ ಭಾರತ ಮನುಷ್ಯನನ್ನು ದೈವತ್ವದವರೆಗೂ ಕೊಂಡೊಯ್ಯಬಲ್ಲ ಯೋಗದ ಮೂಲಕ ಜಗತ್ತಿನ ತಾಯಿಯೂ ಆಗಬೇಕಿದ್ದು, ನಮ್ಮ ಮೌಲ್ಯಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡುವಲ್ಲಿ ಸ್ವಾಮಿ ವಿವೇಕಾನಂದರ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ಕಾರ್ಯ ಮುಂದುವರಿದಿದೆ ಎಂದರು.
ಕೋಲಾರ ಜನತೆಗೆ ಸಿದ್ದರಾಮಯ್ಯ ನೀಡಿದ್ದ ಭರವಸೆ ಈಡೇರಿಸಿ: ಸುದರ್ಶನ್ ಮನವಿ
ಯೋಗದಿಂದಾಗುವ ಲಾಭದ ಕುರಿತಂತೆ ಸರ್ಕಾರಿ ಜೆಸಿ ಆಸ್ಪತ್ರೆಯ ಡಾ.ಅರವಿಂದ್ ಹಾಗೂ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್‌ನ ಮಾರ್ಗದರ್ಶಕ ಎಚ್.ಎಂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಂತರ ಪಟ್ಟಣದ ಡಾ. ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಾಲೂರು ಆಯುಷ್ ಚಿಕಿತ್ಸಾ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರಿಗೆ ಆಯೋಜಿಸಲಾಗಿದ್ದ 10 ದಿನಗಳ ಯೋಗಾಸನ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಕೂಡ ಪಾಲ್ಗೊಂಡಿದ್ದರು.