ಮನುಷ್ಯತ್ವ ಇರುವ ಭಾವ ಜೀವಿಗಳಿಗಷ್ಟೇ ಕಣ್ಣೀರು ಬರುತ್ತೆ: ನಿಖಿಲ್ ಕುಮಾರಸ್ವಾಮಿ

By Kannadaprabha News  |  First Published Nov 6, 2024, 8:25 AM IST

ಮನುಷ್ಯತ್ವ ಇರುವ ಭಾವನಾತ್ಮಕ ಜೀವಿಗಳಿಗೆ ಮಾತ್ರ ಕಣ್ಣೀರು ಬರೋದು. ಕಟುಕರಿಗೆ ಕಣ್ಣೀರು ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಎನ್‌ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವನಾತ್ಮಕವಾಗಿಯೇ ವಾಗ್ದಾಳಿ ನಡೆಸಿದರು. 


ಚನ್ನಪಟ್ಟಣ (ನ.06): ಮನುಷ್ಯತ್ವ ಇರುವ ಭಾವನಾತ್ಮಕ ಜೀವಿಗಳಿಗೆ ಮಾತ್ರ ಕಣ್ಣೀರು ಬರೋದು. ಕಟುಕರಿಗೆ ಕಣ್ಣೀರು ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಎನ್‌ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವನಾತ್ಮಕವಾಗಿಯೇ ವಾಗ್ದಾಳಿ ನಡೆಸಿದರು. ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ವಿರುಪಾಕ್ಷಿಪುರ ಗ್ರಾಮದಲ್ಲಿ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕಣ್ಣೀರಿನ ಬಗ್ಗೆ ವಿರೋಧಿಗಳು ವ್ಯಂಗ್ಯ ಮಾಡುತ್ತಾರೆ. ನಾನು ಸಾಕಷ್ಟು ಸಲ ಸಹಿಸಿಕೊಂಡಿದ್ದೇನೆ ಎಂದು ಕೈ ಮುಗಿದು ಭಾವುಕರಾದರು. ನನ್ನನ್ನು ಅಭಿಮನ್ಯು ಪಾತ್ರವನ್ನಾಗಿ ಮಾಡಿದ್ದಾರೆ. ಆತನಿಗೆ ಹಣೆಬರಹ, ಅದೃಷ್ಟ ಇಲ್ಲ ಅಂತಾರೆ. ನನ್ನ ಹಣೆಬರಹ ಬರೆಯುವವರು ಈ ಕ್ಷೇತ್ರದ ಜನರು. ನಾನು ಮಂಡ್ಯದಲ್ಲಿ ಸೋತಿದ್ದೇನೆ. ಆ ಜಿಲ್ಲೆಯ ಜನ ನನಗೆ ಹೆಚ್ಚಿನ ಮತ ಕೊಟ್ಟು ಆಶೀರ್ವದಿಸಿದ್ದಾರೆ. ಈ ಕ್ಷೇತ್ರದ ಜನರು ನನ್ನ ಕೈ ಬಿಡಲ್ಲ ಎಂಬ ವಿಶ್ವಾಸವಿದೆ ಎಂದರು.

ಅಜ್ಜ, ತಂದೆಯ ದಾರಿಯಲ್ಲೇ ಸಾಗುವೆ: 40 ವರ್ಷದಿಂದ ನೀವು ನಮ್ಮ ಕುಟುಂಬವನ್ನ ಬೆಳೆಸಿದ್ದೀರಿ. ನಿರುದ್ಯೋಗ ಸಮಸ್ಯೆ ನಿವಾರಿಸಲು ಕುಮಾರಣ್ಣನ ನೇತೃತ್ವದಲ್ಲಿ ಮಂಡ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. 158 ಕಂಪನಿ ಕರೆತಂದು 1200 ಜನಕ್ಕೆ ಉದ್ಯೋಗ ಕೊಡಿಸಿದರು. ಚನ್ನಪಟ್ಟಣ ಕ್ಷೇತ್ರಕ್ಕೆ ಒಂದೂವರೆ ಸಾವಿರ ಕೋಟಿಯಷ್ಟು ಅನುದಾನ ತಂದಿದ್ದು ಕುಮಾರಣ್ಣ ಅವರು, ಕುಮಾರಣ್ಣ ಏನು ಮಾಡಿದರು ಅಂತ ವಿರೋಧಿಗಳು ಕೇಳ್ತಾರೆ. ಪ್ರತಿ ಹಳ್ಳಿಗಳಲ್ಲಿ ಸಿಸಿ ರಸ್ತೆ, ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ನಿರ್ಮಿಸಿದ್ದಾರೆ. ಮಾವು ಶೇಖರಣ ಘಟಕ ಮಾಡ್ತಿದ್ದಾರೆ. 107 ಕೆರೆ ತುಂಬಿಸಿದ್ದೇವೆ. ಎಲ್ಲದಕ್ಕೂ ದಾಖಲೆಗಳಿವೆ ಎಂದು ನಿಖಿಲ್ ಹೇಳಿದರು. ಮಾಜಿ ಪ್ರಧಾನಿ ದೇವೇಗೌಡ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಗೋಪಾಲಯ್ಯ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಎ.ಮಂಜುನಾಥ್, ಕೆ.ಟಿ.ಶ್ರೀಕಂಠೇಗೌಡ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Latest Videos

undefined

ಏನೇ ಕುತಂತ್ರ ರಾಜಕಾರಣ ಮಾಡಿದರೂ ಜನ ನನ್ನ ಕೈಬಿಡಲ್ಲ: ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಎ.ಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ಮಂಕುಂದ, ಹುಲುವಾಡಿ, ಆಣಿಗೆರೆ ಹೆಚ್.ಬ್ಯಾಡರಹಳ್ಳಿ, ತೌಟನಹಳ್ಳಿ, ತೆಂಕನಹಳ್ಳಿ, ಗುಡ್ಡೆಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು. ಅಣಿಗೆರೆ ಗ್ರಾಮದಲ್ಲಿ ಪ್ರಚಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಸೋಲಿಸಲು ಇಡೀ ಸರ್ಕಾರವೇ ಕ್ಷೇತ್ರಕ್ಕೆ ಬರುತ್ತಿದೆ. ಇದು ಅವರ ಪಕ್ಷದ ಚುನಾವಣೆ ತಂತ್ರ ಅದು. ಅವರ ಕೆಲಸ ಅವರು ಮಾಡಿಕೊಳ್ಳಲಿ, ನಮ್ಮ ಕೆಲಸ ನಾವು‌ ಮಾಡೋಣ. ನನ್ನ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿ ಚುನಾವಣೆ ಮಾಡುತ್ತಿದ್ದಾರೆ ಮಾಡಲಿ. ಅವರು ಏನೇ ಕುತಂತ್ರ ರಾಜಕಾರಣ ಮಾಡಿದರೂ ಚನ್ನಪಟ್ಟಣ ಜನತೆ ನನ್ನ ಕೈ ಬಿಡುವುದಿಲ್ಲ. ಕ್ಷೇತ್ರದ ಜನ ಕೈ ಹಿಡಿಯುವ ವಿಶ್ವಾಸವಿದೆ ಎಂದರು.

ಎಚ್‌.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್‌ ವಿರುದ್ಧ ಎಫ್‌ಐಆರ್‌!

ನ.13ಕ್ಕೆ ಮತದಾರರೇ ಉತ್ತರ ಕೊಡ್ತಾರೆ : ಕುಮಾರಸ್ವಾಮಿ ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ಮಾತುಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ನ.13ಕ್ಕೆ ಎಲ್ಲದಕ್ಕೂ ಉತ್ತರವನ್ನ ಅವರೇ ಕೊಡ್ತಾರೆ. ತೀರ್ಪು, ತೀರ್ಮಾನ ಕೊಡೋದು ಕ್ಷೇತ್ರದ ಮತದಾರರು. ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ. ಮತದಾರರ ಆಶೀರ್ವಾದ ನನ್ನ ಮೇಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಇಂದು ಬೇವೂರು ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ಮಾಡ್ತಿದ್ದೇನೆ. ಇನ್ನೂ ಪ್ರಚಾರಕ್ಕೆ ಒಂದು ವಾರ ಮಾತ್ರ ಬಾಕಿ ಇದೆ. ಜನರ ಉತ್ಸಾಹ ನೋಡಿದ್ರೆ ಅಧಿಕ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ಜನ ಕುಮಾರಸ್ವಾಮಿ ಹಾಗೂ ದೇವೇಗೌಡರ ಕೆಲಸಗಳ ಬಗ್ಗೆ ಮಾತನಾಡ್ತಿದ್ದಾರೆ ಎಂದರು.

click me!