ಪ್ರೀತಿ, ಅಭಿಮಾನವಷ್ಟೇ ಸಾಲದು, ಮತ ನೀಡಿ ಆಶೀರ್ವದಿಸಿ: ಎಂಆರ್ ಪಾಟೀಲ್ ಪತ್ನಿ ಶಶಿಕಲಾ ಮನವಿ

By Kannadaprabha NewsFirst Published Apr 21, 2023, 11:05 AM IST
Highlights

 ಕುಂದಗೋಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್‌. ಪಾಟೀಲ್‌ ಪರವಾಗಿ ಅವರ ಪತ್ನಿ ಶಶಿಕಲಾ ಪಾಟೀಲ ಗುರುವಾರ ಕ್ಷೇತ್ರದಲ್ಲಿ ಭರ್ಜರಿ ಚುನಾವಣೆ ಪ್ರಚಾರ ಕೈಗೊಂಡರು. ಈ ಸಲ ಬದಲಾವಣೆ ಮಾಡಿ ನೋಡಿ. ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಭರವಸೆ ನೀಡಿದರು.

ಕುಂದಗೋಳ (ಏ.21) : ಕುಂದಗೋಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್‌. ಪಾಟೀಲ್‌ ಪರವಾಗಿ ಅವರ ಪತ್ನಿ ಶಶಿಕಲಾ ಪಾಟೀಲ ಗುರುವಾರ ಕ್ಷೇತ್ರದಲ್ಲಿ ಭರ್ಜರಿ ಚುನಾವಣೆ ಪ್ರಚಾರ ಕೈಗೊಂಡರು. ಈ ಸಲ ಬದಲಾವಣೆ ಮಾಡಿ ನೋಡಿ. ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಭರವಸೆ ನೀಡಿದರು.

ಇಲ್ಲಿನ ಮತ್ತಿಗಟ್ಟಿಗೆ ಭೇಟಿ ನೀಡಿ ಮನೆಮನೆಗೆ ತೆರಳಿ ಪ್ರಚಾರ ಮಾಡಿದ ಅವರು, ತಮ್ಮ ಪತಿ ಅಧಿಕಾರವಿಲ್ಲದೇ ಮಾಡಿರುವ ಕೆಲಸಗಳನ್ನು ಮತದಾರರು ಇಂದಿಗೂ ಸ್ಮರಿಸುತ್ತಾರೆ. ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನು ಚಿರಋುಣಿಯಾಗಿದ್ದೇನೆ. ಪ್ರೀತಿ ಅಭಿಮಾನವಷ್ಟೇ ಸಾಲದು ಮತನೀಡಿ ಶಾಸಕರನ್ನಾಗಿ ಮಾಡಿ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

Latest Videos

ಈ ಸಂದರ್ಭದಲ್ಲಿ ಮುಖಂಡರಾದ ಟಿ.ಕೆ. ಕುಲಕರ್ಣಿ, ಹನುಮಂತಗೌಡ್ರ ಪಾಟೀಲ, ನಿಂಗಪ್ಪ ನಲವಾಲ, ಕೊಟೇಪ್ಪ ದೊಡ್ಡಮನಿ, ಸುನೀತಾ ನಲವಾಲ, ಅನ್ನಪೂರ್ಣಾ ಪಂಚಾಕ್ಷರಿಮಠ ಸೇರಿದಂತೆ ಅನೇಕ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಶೆಟ್ಟರ್‌ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಆನೆ ಬಲ: ರಣದೀಪಸಿಂಗ್‌ ಸುರ್ಜೇವಾಲಾ

ಪಾಟೀಲ ಪ್ರಚಾರ:

ಇನ್ನು ಅಭ್ಯರ್ಥಿ ಎಂ.ಆರ್‌. ಪಾಟೀಲರು, ಕ್ಷೇತ್ರಾದ್ಯಂತ ಸುತ್ತಾಡಿ ಭರ್ಜರಿ ಪ್ರಚಾರ ನಡೆಸಿದರು. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಿ ತೋರಿಸುತ್ತೇನೆ. ಅದಕ್ಕಾಗಿ ಈ ಸಲ ಬಿಜೆಪಿಗೆ ಆಶೀರ್ವದಿಸಿ. ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಎಂ.ಆರ್‌. ಪಾಟೀಲ ಮನವಿ ಮಾಡಿದರು. ಬಿಜೆಪಿಯ ಹಲವು ಮುಖಂಡರು ಇವರಿಗೆ ಸಾಥ್‌ ನೀಡಿದರು.

ಕೊನೆ ದಿನ 72 ನಾಮಪತ್ರಗಳು ಸಲ್ಲಿಕೆ

ಧಾರವಾಡ : ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಗುರುವಾರ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 72 ನಾಮಪತ್ರಗಳು ಸಲ್ಲಿಕೆಯಾಗಿವೆ.

ನವಲಗುಂದ ಐದು, ಕುಂದಗೋಳ 14, ಧಾರವಾಡ 10, ಹುಬ್ಬಳ್ಳಿ-ಧಾರವಾಡ ಪೂರ್ವ 12, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ 14, ಹುಬ್ಬಳ್ಳಿ-ಧಾರವಾಡ ಪಶ್ಚಿಮ 11, ಮತ್ತು ಕಲಘಟಗಿ 6 ಸೇರಿದಂತೆ ಒಟ್ಟು 72 ನಾಮಪತ್ರಗಳು ಸಲ್ಲಿಕೆ ಆಗಿವೆ.

ನವಲಗುಂದ ಮತಕ್ಷೇತ್ರಕ್ಕೆ ಮಾಬುಸಾಬ ಯರಗುಪ್ಪಿ (ಪಕ್ಷೇತರ), ಹಣಮಂತಪ್ಪ ಮೆಗಲಮನಿ (ಬಹುಜನ ಸಮಾಜ ಪಾರ್ಟಿ), ಶಂಕರಪ್ಪ ಅಂಬಲಿ (ಪಕ್ಷೇತರ), ವಿಜಯಕುಮಾರ ಸಂಗಪ್ಪ (ಆಮ್‌ ಆದ್ಮಿ ಪಾರ್ಟಿ), ಅಜಯ ಹೂಗಾರ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ). ಕುಂದಗೋಳ ಮತಕ್ಷೇತ್ರಕ್ಕೆ ಗೌಡಪ್ಪಗೌಡ ಪಾಟೀಲ (ಪಕ್ಷೇತರ) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ಶಿವಾನಂದ ಮುತ್ತಣ್ಣವರ (ಪಕ್ಷೇತರ), ಕುತುಬುದ್ದಿನ ಬೆಳಗಲಿ (ಪಕ್ಷೇತರ), ಹಜರತ್‌ಅಲಿ ಶೇಖ ಜೋಡಮನಿ (ಜೆಡಿಎಸ್‌), ಶಿವನಗೌಡ ಕುರಟ್ಟಿ(ಪಕ್ಷೇತರ), ಯಲ್ಲಪ್ಪ ದಬಗೊಂದಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಎಸ್‌.ಐ. ಚಿಕ್ಕನಗೌಡ್ರ (ಕಾಂಗ್ರೆಸ್‌) ಪಕ್ಷದಿಂದ 1 ನಾಮಪತ್ರ ಸಲ್ಲಿಕೆ ಹಾಗೂ ಪಕ್ಷೇತರರಾಗಿ 1 ನಾಮಪತ್ರ ಸಲ್ಲಿಕೆ, ಬಸವರಾಜ ರೇವಡೆನವರ (ಪಕ್ಷೇತರ), ಕುಸುಮಾವತಿ ಶಿವಳ್ಳಿ (ಕಾಂಗ್ರೆಸ್‌), ನಿರಂಜನಯ್ಯ ಮಣಕಟ್ಟಿಮಠ (ಆಮ್‌ ಆದ್ಮಿ ಪಕ್ಷ), ಕಲ್ಲಪ್ಪ ಚನ್ನಪ್ಪ ಬಿಸ್ನಳ್ಳಿ (ಪಕ್ಷೇತರ), ಸುರೇಶ ಸಹದೇವಪ್ಪ ಕುರುಬಹಟ್ಟಿ(ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ).

ಧಾರವಾಡ ಮತಕ್ಷೇತ್ರಕ್ಕೆ ಶಶಿಕಿರಣ ನಡಕಟ್ಟಿ(ಪಕ್ಷೇತರ), ಮಂಜುನಾಥ ಹರಿಜನ (ಪಕ್ಷೇತರ), ವಿನಯ ಕುಲಕರ್ಣಿ (ಕಾಂಗ್ರೆಸ್‌), ಶಿವಲೀಲಾ ಕುಲಕರ್ಣಿ (ಪಕ್ಷೇತರ), ಬಸಯ್ಯ ಹಿರೇಮಠ (ಪಕ್ಷೇತರ), ಅಷ್ಟಗಿ ತವನಪ್ಪ ಪಾಯಪ್ಪ (ಪಕ್ಷೇತರ) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ಬಸವರಾಜ ಕೊರವರ (ಪಕ್ಷೇತರ), ಶಕೀಲ ಅಬ್ದುಲ್‌ಸತ್ತಾರ ದೊಡವಾಡ (ಪಕ್ಷೇತರ), ಸತ್ಯವ್ಯ ತಿರಕಪ್ಪ ಜಮನಾಳ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ).

ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರಕ್ಕೆ ವೆಂಕಟೇಶ ಮೇಸ್ತಿ್ರ (ಬಿಜೆಪಿ) ಪಕ್ಷದಿಂದ 1 ನಾಮಪತ್ರ, ಪಕ್ಷೇತರರಾಗಿ 1 ನಾಮಪತ್ರ ಸಲ್ಲಿಕೆ, ಚಂದ್ರಕಾಂತ ಹಂಜಗಿ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಶೋಭಾ ಕದಿರೆಪ್ಪ ಪಾಲ್‌ವೈ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ಬಸವರಾಜ ಗಂಗಪ್ಪ ಅಮ್ಮಿನಭಾವಿ (ಭಾ.ಜ.ಪ), ಶಿವಶಂಕರ ಕೃಷ್ಣಪ್ಪ ಭಂಡಾರಿ (ಬಹುಜನ ಸಮಾಜ ಪಕ್ಷ), ಲಕ್ಷ್ಮಣ ಪರಶುರಾಮ ಮೊರಬ (ಹಿಂದುಸ್ಥಾನ ಜನತಾ ಪಾರ್ಟಿ ಸೆಕ್ಯೂರಲ್‌), ದೇವೇಂದ್ರ ಬಸಪ್ಪ ಲಿಂಗದಾಳ (ಪಕ್ಷೇತರ), ದುರ್ಗಪ್ಪ ಬಿಜವಾಡ (ಎಐಎಂಐಎಂ), ಚಂದ್ರಶೇಖರ ನಾಗಪ್ಪ ಗೋಕಾಕ (ಭಾ.ಜ.ಪ), ವೆಂಕಪ್ಪ ಫಕ್ಕೀರಪ್ಪ ಸಿದ್ಧನಾಥ (ಪಕ್ಷೇತರ).

ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಮತಕ್ಷೇತ್ರಕ್ಕೆ ಜಗದೀಶ ಶೆಟ್ಟರ್‌ (ಕಾಂಗ್ರೆಸ್‌), ರೇವಣಸಿದ್ದಪ್ಪ ಹೊಸಮನಿ (ಬಹುಜನ ಸಮಾಜ ಪಾರ್ಟಿ), ಹನುಮಂತಾಸ ಚಂದ್ರಕಾಂತಾಸ ನಿರಂಜನ (ಪಕ್ಷೇತರ), ಮಹೇಶ ಟೆಂಗಿನಕಾಯಿ (ಬಿಜೆಪಿ) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ಸಿದ್ದಲಿಂಗೇಶ್ವರಗೌಡ ಬಸನಗೌಡ ಮಹಾಂತ್‌ಒಡೆಯರ (ಜೆಡಿಎಸ್‌), ಟಾಕಪ್ಪ ಯಲ್ಲಪ್ಪ ಕಲಾಲ (ಪಕ್ಷೇತರ), ಶೈಲೇಂದ್ರಕುಮಾರ ಪಾಟೀಲ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಸಬಜಿ ಸ್ವಾಮಿಜಿ ಬಡಂಗಕರ (ಪಕ್ಷೇತರ), ಹಿಮರಾಜ ಬದ್ನಿ (ಪಕ್ಷೇತರ), ದಾಯಪ್ಪಗೌಡ ಶಿವನಗೌಡ್ರ (ಉತ್ತಮ ಪ್ರಜಾಕೀಯ ಪಾರ್ಟಿ), ಅಲ್ತಾಫ್‌ ನವಾಜ ಮೊಹಮ್ಮದ ಸಾಹೇಬ ಕಿತ್ತೂರ (ಪಕ್ಷೇತರ), ಮೌಲಾಲಿ ರಾಜೇಸಾಬ ಸಂಶಿ (ಪಕ್ಷೇತರ), ಸಾದಿಕಬಾನು ಹೊಸಪೇಟ ಖಾಜಿ (ಪಕ್ಷೇತರ).

ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರಕ್ಕೆ ಗುರುರಾಜ ಹುಣಶಿಮರದ (ಜೆಡಿಎಸ್‌), ದೀಪಕ ಚಿಂಚೋರೆ (ಕಾಂಗ್ರೆಸ್‌) ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ನಿಂಗಪ್ಪ ರುದ್ರಪ್ಪ ಕುದವಕ್ಕಲಿಗರ (ಕರ್ನಾಟಕ ಮಕ್ಕಳ ಪಕ್ಷ), ಮಹ್ಮದ ಇಸ್ಮಾಯಿಲ್‌ ಮುಕ್ತಿ (ಪಕ್ಷೇತರ), ವಿನೋದ ಘೋಡಕೆ (ಪ್ರೋಟಿಸ್ಟ್‌ ಬ್ಲಾಗ್‌ ಇಂಡಿಯಾ), ಅರವಿಂದ ಬೆಲ್ಲದ (ಬಿಜೆಪಿ), ಬಾನುಬಿ ಕಾಸಿಂಸಾಬ ಶೇಖ ಉರ್ಫ ಹೊಸಮನಿ (ಪಕ್ಷೇತರ), ಶಿದರಾಯ ಮುರಿಗೆಪ್ಪ ಕೆಂಚಣ್ಣವರ (ಪಕ್ಷೇತರ).

ಕಲಘಟಗಿ ಮತಕ್ಷೇತ್ರಕ್ಕೆ ಚಂದ್ರಶೇಖರ ಮಠದ (ಕರ್ನಾಟಕ ರಾಷ್ಟ್ರ ಸಮಿತಿ), ಬಸವರಾಜ ದೊಡಮನಿ (ಪಕ್ಷೇತರ), ನಾಗರಾಜ ಗಟಿಗೆಣ್ಣವರ (ಪಕ್ಷೇತರ), ವೀರಪ್ಪ ಶೀಗಿಗಟ್ಟಿ(ಜೆಡಿಎಸ್‌), ಬಸವರಾಜ ಗೊಡ್ಡೆಮ್ಮಿ (ಪಕ್ಷೇತರ), ಮಲ್ಲಿಕಾ ದೊಡಮನಿ (ಪ್ರೌಟಿಸ್ಟ್‌ ಬ್ಲಾಗ್‌ ಇಂಡಿಯಾ) ಅವರು ನಾಮಪತ್ರ ಸಲ್ಲಿಸಿದ್ದಾರೆ ಎದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಗೌರವ ನೀಡಲು ಶೆಟ್ಟರೇನು ಮನೆ ಅಳಿಯನಾ? : ಈಶ್ವರಪ್ಪ ಟಾಂಗ್

ಒಟ್ಟು 182 ನಾಮಪತ್ರ ಸಲ್ಲಿಕೆ...

ಧಾರವಾಡ: ಚುನಾವಣಾ ಅ​ಧಿಸೂಚನೆ ಪ್ರಕಟವಾದ ಏ. 13ರಿಂದ ಕೊನೆಯ ದಿನ ಗುರುವಾರ ವರೆಗೆ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳು ಸೇರಿ ಒಟ್ಟು 182 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ. 13ರಂದು ಏಳು, ಏ. 15ರಂದು 6, ಏ. 17ರಂದು 21, ಏ. 18ರಂದು 29, ಏ. 19ರಂದು 47 ಹಾಗೂ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಗುರುವಾರ ಏ. 20ರಂದು 72 ನಾಮಪತ್ರಗಳು ಸಲ್ಲಿಕೆ ಆಗಿವೆ.

ನವಲಗುಂದ ಕ್ಷೇತ್ರಕ್ಕೆ 19, ಕುಂದಗೋಳ ಕ್ಷೇತ್ರಕ್ಕೆ 33, ಧಾರವಾಡ ಕ್ಷೇತ್ರಕ್ಕೆ ಒಟ್ಟು 24, ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರಕ್ಕೆ ಒಟ್ಟು 24, ಹುಬ್ಬಳ್ಳಿ ಧಾರವಾಡ ಕೇಂದ್ರಕ್ಕೆ ಒಟ್ಟು 27, ಹುಬ್ಬಳ್ಳಿ ಧಾರವಾಡ ಪಶ್ಚಿಮಕ್ಕೆ ಒಟ್ಟು 35 ನಾಮಪತ್ರಗಳು, ಕಲಘಟಗಿಗೆ ಒಟ್ಟು 20 ನಾಮಪತ್ರಗಳು ಸೇರಿದಂತೆ ಒಟ್ಟು 182 ನಾಮಪತ್ರಗಳು ಸಲ್ಲಿಕೆಯಾಗಿವೆ.

click me!