ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದ ಗುರುವಾರ ಕೋಟಿ ಕೋಟಿ ಸಂಪತ್ತಿನ ಇನ್ನಷ್ಟುಒಡೆಯರು ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು (ಏ.21): ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದ ಗುರುವಾರ ಕೋಟಿ ಕೋಟಿ ಸಂಪತ್ತಿನ ಇನ್ನಷ್ಟುಒಡೆಯರು ನಾಮಪತ್ರ ಸಲ್ಲಿಸಿದ್ದಾರೆ.
ಡಿ.ಕೆ.ಸುರೇಶ್ 353 ಕೋಟಿ ಆಸ್ತಿಗೆ ವಾರಸುದಾರ: ಕನಕಪುರ ವಿಧಾನಸಭಾ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿರುವ ಸಂಸದ ಡಿ.ಕೆ.ಸುರೇಶ್ ಅವರು 353 ಕೋಟಿ ರು. ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 55.23 ಕೋಟಿ ಮೌಲ್ಯದ ಚರಾಸ್ತಿ, 298.47 ಮೌಲ್ಯದ ಸ್ಥಿರಾಸ್ತಿ, ಸೇರಿ ಒಟ್ಟು 353 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 2019ರ ಬೆಂಗಳೂರು ಗ್ರಾಮಾಂತರ ಲೋಕಾಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಡಿ.ಕೆ.ಸುರೇಶ್ ಬಳಿ 33.06 ಕೋಟಿ ಮೌಲ್ಯದ ಚರಾಸ್ತಿ, 305.59 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 338.65 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು. ಡಿ.ಕೆ.ಸುರೇಶ್ ಅವರು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದು, ಮಗ ತಮ್ಮ ಅವಲಂಭಿತನಲ್ಲ ಎಂದು ತಿಳಿಸಿದ್ದು, ಅಣ್ಣ ಡಿ.ಕೆ.ಶಿವಕುಮಾರ್ ಅವರೊಟ್ಟಿಗೆ ಜಂಟಿಯಾಗಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದು, ಶೇರು ಇತ್ಯಾದಿ ಹೂಡಿಕೆಗಳ ಮೌಲ್ಯ 2.14 ಕೋಟಿರು. ಚಿನ್ನಾಭರಣ 1260 ಗ್ರಾಂ, 4860 ಗ್ರಾಂ ಬೆಳ್ಳಿ ಇದೆ.
ಕಾಂಗ್ರೆಸ್ ಅಭ್ಯರ್ಥಿ ಸೇಠ್ 27.84 ಕೋಟಿ ಒಡೆಯ: ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಆಸೀಫ್ ನೂರುದ್ದೀನ್ ಸೇಠ್ ಅವರು . 13.76 ಕೋಟಿ ಮೌಲ್ಯದ ಚರಾಸ್ತಿ ಹಾಗೂ . 14. 08 ಕೋಟಿ ಮೌಲ್ಯದ ಹೀಗೆ ಒಟ್ಟು . 27.84 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ . 1.25 ಕೋಟಿ ಮೌಲ್ಯದ ಚರಾಸ್ತಿ ಹಾಗೂ . 4.04 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರು 2021-22ರ ಸಾಲಿನಲ್ಲಿ . 4.93 ಕೋಟಿ ಆದಾಯ ಹೊಂದಿದ್ದರು.
ಕಾಂಗ್ರೆಸ್ ಸ್ಟಾರ್ ಪಟ್ಟಿಯಲ್ಲಿ ದೇಶದ್ರೋಹಿಗಳು: ಅರುಣ್ ಸಿಂಗ್ ಟೀಕೆ
ಪುಲಕೇಶಿನಗರ ಕಾಂಗ್ರೆಸ್‌ನ ಶ್ರೀನಿವಾಸ್ ಆಸ್ತಿ 187 ಕೋಟಿ: ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ .187.66 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಅದರಲ್ಲಿ .39.44 ಕೋಟಿ ಚರಾಸ್ತಿ ಮತ್ತು .148.22 ಕೋಟಿ ಸ್ಥಿರಾಸ್ತಿಯಾಗಿದೆ. ಚರಾಸ್ತಿ ಪೈಕಿ 3.6 ಕೆ.ಜಿ. ಚಿನ್ನಾಭರಣ ಮತ್ತು 6 ಕೇಜಿ ಬೆಳ್ಳಿ ಹಾಗೂ 8 ಕಾರುಗಳನ್ನು ಹೊಂದಿದ್ದಾರೆ. ಜತೆಗೆ .31.84 ಕೋಟಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಸಾಲದ ರೂಪದಲ್ಲಿ ನೀಡಿದ್ದಾರೆ. 2018ರಲ್ಲಿ ಶ್ರೀನಿವಾಸ್ ಆಸ್ತಿ .104.88 ಕೋಟಿಗಳಿತ್ತು. ಕಳೆದ 5 ವರ್ಷಗಳಲ್ಲಿ ಶ್ರೀನಿವಾಸ್ ಆಸ್ತಿ .82.78 ಕೋಟಿ ಏರಿಕೆಯಾಗಿದೆ. ಅಲ್ಲದೆ .17.5 ಕೋಟಿ ಇದ್ದ ಹೊಣೆಗಾರಿಕೆ, ಈಗ .111.22 ಕೋಟಿಗೆ ಹೆಚ್ಚಳವಾಗಿದೆ.
ತಿಪ್ಪಾರೆಡ್ಡಿ ಬಳಿ . 87.14 ಕೋಟಿ: ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ 79.48 ಕೋಟಿ ರುಪಾಯಿ ಆಸ್ತಿಗೆ ಒಡೆಯರಾಗಿದ್ದಾರೆ. ಅವರ ಹೆಸರಿಗೆ 32.99 ಕೋಟಿ ರುಪಾಯಿ ಚರಾಸ್ತಿ, 46.49 ಕೋಟಿ ರುಪಾಯಿ ಸ್ಥಿರಾಸ್ತಿ ಇದೆ. 22.71 ಕೋಟಿ ರುಪಾಯಿ ಸಾಲ ಮಾಡಿದ್ದಾರೆ. ಪತ್ನಿ ಹೆಸರಲ್ಲಿ 7.66 ಕೋಟಿ ರುಪಾಯಿ ಹಾಗೂ ಕುಟುಂಬದ ಹೆಸರಲ್ಲಿ 41.81 ಕೋಟಿ ರು. ಆಸ್ತಿ ಇದೆ.
ಸಾ.ರಾ.ಮಹೇಶ್ . 52.67 ಕೋಟಿ ಒಡೆಯ: ಕೆ.ಆರ್.ನಗರ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ನಾಮಪತ್ರ ಸಲ್ಲಿಸಿದ್ದು, ಇವರ ಒಟ್ಟು ಆಸ್ತಿ . 28.46 ಕೋಟಿ ಇದ್ದರೆ, ಇವರ ಪತ್ನಿ . 24.21 ಕೋಟಿ ಆಸ್ತಿ ಸೇರಿ ಒಟ್ಟು 52.67 ಕೋಟಿ ಎಂದು ಘೋಷಿಸಿದ್ದಾರೆ. ಮಹೇಶ್ ಅವರ ಹೆಸರಿನಲ್ಲಿ . 4.35 ಕೋಟಿ ಮೌಲ್ಯದ ಚರಾಸ್ತಿ, 20.67 ಕೋಟಿ ಮೌಲ್ಯದ ಸ್ಥಿರಾಸ್ತಿ, ಪಿತ್ರಾರ್ಜಿತವಾಗಿ 3.44 ಕೋಟಿ ಮೌಲ್ಯದ ಆಸ್ತಿ ಹಾಗೂ ಅವರ ಪತ್ನಿ ಅನಿತಾ ಅವರ ಹೆಸರಿನಲ್ಲಿ . 3.39 ಕೋಟಿ ಚರಾಸ್ತಿ, . 20.80 ಕೋಟಿ ಸ್ಥಿರಾಸ್ತಿ ಮತ್ತು . 2 ಲಕ್ಷ ಪಿತ್ರಾರ್ಜಿತ ಆಸ್ತಿ ಇದೆ. ಇದಲ್ಲದೆ ಇವರ ಮಕ್ಕಳಿಬ್ಬರ ಹೆಸರಿನಲ್ಲಿಯೂ ಲಕ್ಷಾಂತರ ಮೌಲ್ಯದ ಆಸ್ತಿ ಇದೆ. ಮಹೇಶ್ ಅವರು . 10.53 ಕೋಟಿ ಸಾಲ ಮಾಡಿದ್ದರೆ, ಅವರ ಪತ್ನಿ ಅನಿತಾ ಹೆಸರಿನಲ್ಲಿ . 7.39 ಕೋಟಿ ಸಾಲ ಇರುವುದಾಗಿ ಘೋಷಿಸಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ 40.15 ಕೋಟಿ ಒಡೆಯ: ಮೇಲುಕೋಟೆ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ 40.15 ಕೋಟಿ ರು. ಕೌಟುಂಬಿಕ ಆಸ್ತಿ ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ದರ್ಶನ್ ಚರಾಸ್ತಿ 2.46 ಕೋಟಿ ರು. ಹಾಗೂ ಸ್ಥಿರಾಸ್ತಿ 31.90 ಕೋಟಿ ರು. ಇದೆ. ಪತ್ನಿಯ ಚರಾಸ್ತಿ 1.71 ಕೋಟಿ ರು., ಸ್ಥಿರಾಸ್ತಿ 4.07 ಕೋಟಿ ರು. ಇದೆ. ದರ್ಶನ್ ಬಳಿ 1.90 ಲಕ್ಷ ರು. ನಗದು, ವಿವಿಧ ಕಂಪನಿಗಳಲ್ಲಿ ಷೇರು ಹೊಂದಿದ್ದಾರೆ. ಮರ್ಸಿಡೆಸ್ ಬೆಂಜ್, ನಿಶಾನ್ ಟೆರೊನಾ ಕಾರುಗಳಿವೆ. 50 ಗ್ರಾಂ ಚಿನ್ನಾಭರಣ, ಮೈಸೂರು, ಅಮೆರಿಕಾ, ಕೊಲರಾಡೋ ದೇಶಗಳಲ್ಲಿ ನಿವೇಶನ, ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಪತ್ನಿ ಬಳಿ 10 ಸಾವಿರ ರು. ನಗದು, ಪಿಲಿಡೆಟಿ ಕಂಪನಿಯಲ್ಲಿ ಷೇರು, ಟೆಸ್ಲಾ ಮಾಡೆಲ್ ಕಾರು, 300 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇದೆ. ದರ್ಶನ್ 18.37 ಕೋಟಿ ರೂ. ಸಾಲ ಹಾಗೂ ಪತ್ನಿ 2.59 ಕೋಟಿ ರೂ. ಸಾಲ ತೋರಿಸಿದ್ದಾರೆ.
ಆಯನೂರು ಆಸ್ತಿ 4 ಪಟ್ಟು ಹೆಚ್ಚಳ: ಶಿವಮೊಗ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಆಯನೂರು ಮಂಜುನಾಥ್ ಅವರ ಒಟ್ಟು ಕುಟುಂಬದ ಆಸ್ತಿ .29.48 ಕೋಟಿಗಳಾಗಿದ್ದು, ಇವರಿಗಿಂತ ಇವರ ಪತ್ನಿಯೇ ಶ್ರೀಮಂತರಾಗಿದ್ದಾರೆ. ಆಯನೂರು ಅವರು .2.38 ಕೋಟಿ ಚರಾಸ್ತಿ ಮತ್ತು .1.07 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಮಂಜುಳಾ .2.44 ಕೋಟಿ ಚರಾಸ್ತಿ ಮತ್ತು .23.59 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 15 ಎಕರೆ ಕೃಷಿಯೇತರ ಭೂಮಿ, ಶಿವಮೊಗ್ಗದಲ್ಲಿ 4 ಮತ್ತು ಬೆಂಗಳೂರಿನಲ್ಲಿ ಒಂದು ನಿವೇಶನವಿದೆ. ಇವರು ಒಟ್ಟು .3.76 ಕೋಟಿ ಸಾಲ ಮಾಡಿ ಕೊಂಡಿದ್ದಾರೆ. ಜೊತೆಗೆ ಇವರ ಬಳಿ ರಿವಾಲ್ವರ್ ಮತ್ತು ಡಬಲ್ ಬ್ಯಾರಲ್ ಕೋವಿ ಇದೆ.
4 ಪಟ್ಟು ಹೆಚ್ಚು: 2018ರಲ್ಲಿ ನೈಋುತ್ಯ ಪದವೀಧರ ಚುನಾವಣೆ ಸಂದರ್ಭದಲ್ಲಿ ಆಯನೂರು ಮಂಜುನಾಥ್ ಅವರು .7.18 ಕೋಟಿ ಆಸ್ತಿ ಘೋಷಿಸಿಕೊಂಡಿದ್ದು, ಐದು ವರ್ಷ ದಲ್ಲಿ ಅವರ ಆಸ್ತಿ 4 ಪಟ್ಟು ಹೆಚ್ಚಾಗಿದೆ.
ಅಜಯ್‌ಸಿಂಗ್ 46.73 ಕೋಟಿ ಒಡೆಯ: ಕಲಬುರಗಿ ಜಿಲ್ಲೆಯ ಜೇವರ್ಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಕಣದಲ್ಲಿರುವ ಡಾ.ಅಜಯ್ ಧರ್ಮಸಿಂಗ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಮ್ಮ ಆಸ್ತಿ ವಿವರ ದಲ್ಲಿ ನೀಡಿರುವಂತೆ ಒಟ್ಟು ಆಸ್ತಿ ಮೌಲ್ಯ 46.73 ಕೋಟಿ ರು ಇದೆ ಎಂದು ಘೋಷಿಸಿಕೊಂಡಿದ್ದಾರೆ. ಅವರ ಪತ್ನಿ, ಮಕ್ಕಳ ಹೆಸರಲ್ಲಿ ಹಲವು ಕಡೆ ಕೃಷಿ ಭೂಮಿ, ವಾಣಿಜ್ಯ ಕಟ್ಟಡ, ವಿವಿಧ ಕಂಪನಿಗಳಲ್ಲಿ ಹೂಡಿಕೆ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಕಲಬುರಗಿ, ಬೆಂಗಳೂರು, ನಲೋಗಿ ಯಲ್ಲೂ ಆಸ್ತಿ ಹೊಂದಿದ್ದಾರೆ.
ಕಾಂಗ್ರೆಸಿಗ ಡಿ.ಕೆ.ಮೋಹನ್ 131 ಕೋಟಿ ಆಸ್ತಿ: ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಮೋಹನ್ ತಮ್ಮ ಬಳಿ .131.16 ಕೋಟಿ ಆಸ್ತಿ ಇರುವ ಬಗ್ಗೆ ಘೋಷಿಸಿಕೊಂಡಿದ್ದಾರೆ. ಅದರಲ್ಲಿ .15.43 ಕೋಟಿ ಚರಾಸ್ತಿಯಾಗಿದ್ದರೆ, .121.73 ಕೋಟಿ ಸ್ಥಿರಾಸ್ತಿಯಾಗಿದೆ. ಮೋಹನ್ ಬಳಿ 1.56 ಕೇಜಿ ಚಿನ್ನಾಭರಣ, 10 ಕೆ.ಜಿ ಬೆಳ್ಳಿ ವಸ್ತುಗಳಿವೆ. .2.38 ಕೋಟಿ ಮೌಲ್ಯದ ನಾಲ್ಕು ಕಾರುಗಳು ಅವರ ಬಳಿಯಿದೆ. 66 ಎಕರೆ ಕೃಷಿ ಭೂಮಿ, 2.55 ಲಕ್ಷ ಚದರ ಅಡಿ ಕೃಷಿಯೇತರ ಭೂಮಿ, 93,520 ಚದರ ಅಡಿ ವಿಸ್ತೀರ್ಣದ ಮೂರು ವಸತಿ ಕಟ್ಟಡವನ್ನು ಅವರು ಹೊಂದಿದ್ದಾರೆ. .21.24 ಕೋಟಿ ಹೊಣೆಗಾರಿಕೆ ಅವರ ಮೇಲಿದೆ.
ಎಚ್.ಎನ್.ಯೋಗೇಶ್ ಬಳಿ 35.20 ಕೋಟಿ ರು. ಆಸ್ತಿ: ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ 35.20 ಕೋಟಿ ರು. ಆಸ್ತಿಗೆ ಒಡೆಯರಾಗಿದ್ದಾರೆ. ಚರಾಸ್ತಿ 6.14 ಕೋಟಿ ರು., ಸ್ಥಿರಾಸ್ತಿ 19.32 ಕೋಟಿ ರು. ಇದೆ. ಪತ್ನಿ ಸೌಮ್ಯ ಚರಾಸ್ತಿ 1.95 ಕೋಟಿ ರು. ಹಾಗೂ ಸ್ಥಿರಾಸ್ತಿ 7.78 ಕೋಟಿ ರು. ಹೊಂದಿದ್ದಾರೆ. ಆಡಿ ಕ್ಯೂ3, ಟಯೋಟಾ ಇನ್ನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಸ್ವಿಫ್‌್ಟ, ಮಾರುತಿ ಸುಜುಕಿ ಎರಿಟಿಗಾ ಕಾರುಗಳು, ಹೋಂಡಾ ಆಕ್ಟೀವಾ ಬೈಕ್ ಇದೆ. 1 ಕೆಜಿ 500 ಗ್ರಾಂ ಚಿನ್ನ, ಮೂರು ಕೆಜಿ ಬೆಳ್ಳಿ, ಬೆಂಗಳೂರಿನಲ್ಲಿ ಅಪಾರ್ಚ್‌ಮೆಂಟ್, ಮನೆ, ತಮಿಳುನಾಡಿನಲ್ಲಿ ಪ್ಲಾಟ್ ಹೊಂದಿದ್ದಾರೆ. ಪತ್ನಿ ಬಳಿ ಕೈಯಲ್ಲಿ 1 ಲಕ್ಷ ರು. ನಗದು, 1 ಕೆಜಿ ಚಿನ್ನ, 1 ಕೆಜಿ ಬೆಳ್ಳಿ ಇದೆ. ಯಾವುದೇ ಸಾಲ ಇಲ್ಲ.
ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಚಾರ್ಜ್‌ಶೀಟ್ ರದ್ದುಗೊಳಿಸಿದ ಹೈಕೋರ್ಟ್!
ಎಚ್.ಸಿ.ಮಹದೇವಪ್ಪ
(ಟಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ)
ಒಟ್ಟು ಆಸ್ತಿ: . 4.67 ಕೋಟಿ
ಚರಾಸ್ತಿ: . 99.93 ಲಕ್ಷ
ಸ್ಥಿರಾಸ್ತಿ: . 1.25 ಕೋಟಿ
ಪಿತ್ರಾರ್ಜಿತ: . 1.50 ಕೋಟಿ ಸ್ಥಿರಾಸ್ತಿ
ಪತ್ನಿ ಹೆಸರಿನಲ್ಲಿ . 7.23 ಲಕ್ಷ ಚರಾಸ್ತಿ ಇದೆ.
ಎಚ್.ಆಂಜನೇಯ
( ಹೊಳಲ್ಕೆರೆ ಕಾಂಗ್ರೆಸ್ ಅಭ್ಯರ್ಥಿ)
ಒಟ್ಟು ಆಸ್ತಿ:. 7.50 ಕೋಟಿ
ಚರಾಸ್ತಿ: . 1.71 ಕೋಟಿ
ಸ್ಥಿರಾಸ್ತಿ: . 5.79 ಕೋಟಿ
ಪತ್ನಿ ಹೆಸರಲ್ಲಿ: . 76 ಲಕ್ಷದಷ್ಟುಆಸ್ತಿ ಇದೆ.
ಗೂಳಿಹಟ್ಟಿ ಶೇಖರ್ (ಪಕ್ಷೇತರ)
ಒಟ್ಟು ಆಸ್ತಿ: . 14.80 ಕೋಟಿ
ಚರಾಸ್ತಿ: . 1.80 ಕೋಟಿ
ಸ್ಥಿರಾಸ್ತಿ: . 13 ಕೋಟಿ
ಸಾಲ: . 6.58 ಕೋಟಿ
ರೇಣುಕಾಚಾರ್ಯ
( ಹೊನ್ನಾಳಿ ಬಿಜೆಪಿ ಅಭ್ಯರ್ಥಿ)
ಒಟ್ಟು ಆಸ್ತಿ: 11.40 ಕೋಟಿ
ಚರಾಸ್ತಿ : 2.84 ಕೋಟಿ
ಸ್ಥಿರಾಸ್ತಿ : 6.44 ಕೋಟಿ
ಪತ್ನಿ ಬಳಿ : 1.75 ಕೋಟಿ
2 ಮಕ್ಕಳ ಆಸ್ತಿ : 20.16 ಲಕ್ಷ
ಒಟ್ಟು ಸಾಲ : 5.04 ಕೋಟಿ .
ಅಪರಾಧ ಪ್ರಕರಣ : 05
ಎಸ್.ಎನ್.ಚನ್ನಬಸಪ್ಪ
( ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ)
ಒಟ್ಟು ಆಸ್ತಿ: .1.20 ಕೋಟಿ
ಚರಾಸ್ತಿ: .9.40 ಲಕ್ಷ
ಸ್ಥಿರಾಸ್ತಿ: .75 ಲಕ್ಷ
ಸಾಲ : .30.84 ಲಕ್ಷ
ಪತ್ನಿ ಬಳಿ: .6.58 ಲಕ್ಷ ಚರಾಸ್ತಿ,
.30 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ.
ಅಭ್ಯರ್ಥಿ: ಅಬ್ದುಲ್ ಖಾದರ್
( ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ)
ಒಟ್ಟು ಆಸ್ತಿ: . 8.55 ಕೋಟಿ
ಚರಾಸ್ತಿ: . 1.55 ಕೋಟಿ
ಸ್ಥಿರಾಸ್ತಿ: . 7 ಕೋಟಿ
ಅಭ್ಯರ್ಥಿ: ಎಚ್.ಕೆ. ರಮೇಶ್
(ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ)
ಒಟ್ಟು ಆಸ್ತಿ: . 11.57 ಕೋಟಿ
ಚರಾಸ್ತಿ: . 79.32 ಲಕ್ಷ ,
ಸ್ಥಿರಾಸ್ತಿ :. 2 ಕೋಟಿ
ಪಿತ್ರಾರ್ಜಿತ: . 4.66 ಕೋಟಿ ಆಸ್ತಿ
ಪತ್ನಿ ಹೆಸರಿನಲ್ಲಿ : . 27.76 ಲಕ್ಷ ಚರಾಸ್ತಿ, . 55 ಲಕ್ಷ ಸ್ಥಿರಾಸ್ತಿ
ಪಿತ್ರಾರ್ಜಿತವಾಗಿ . 3.30 ಕೋಟಿ ಆಸ್ತಿ ಇದೆ.
ಅಭ್ಯರ್ಥಿ: ಸಿ.ಎಚ್.ವಿಜಯಶಂಕರ್
(ಪಿರಿಯಾಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ)
ಒಟ್ಟು ಆಸ್ತಿ: . 5.21 ಕೋಟಿ
ಚರಾಸ್ತಿ: . 94.14 ಲಕ್ಷ ,
ಸ್ಥಿರಾಸ್ತಿ: . 2.09 ಕೋಟಿ
ಪಿತ್ರಾರ್ಜಿತ: . 12 ಲಕ್ಷ ಸ್ಥಿರಾಸ್ತಿ
ಸಾಲ : . 92 ಲಕ್ಷ
ಪತ್ನಿ ಬಳಿ: . 1.94 ಕೋಟಿ ಚರಾಸ್ತಿ,
12 ಲಕ್ಷ ಪಿತ್ರಾರ್ಜಿತ ಸ್ಥಿರಾಸ್ತಿ ಇದೆ.
ಅಭ್ಯರ್ಥಿ: ಬಿ.ಆರ್.ರಾಮಚಂದ್ರ
( ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ)
ಒಟ್ಟು ಆಸ್ತಿ: 9.19 ಕೋಟಿ ರು.
ಚರಾಸ್ತಿ: 2.62 ಕೋಟಿ ರು.,
ಸ್ಥಿರಾಸ್ತಿ: 6.16 ಕೋಟಿ ರು.
ಸಾಲ: . 1.85 ಕೋಟಿ
ಪತ್ನಿ ಬಳಿ: 37.20 ಲಕ್ಷ ರು.ಚರಾಸ್ತಿ,
3.30 ಲಕ್ಷ ರು. ಸ್ಥಿರಾಸ್ತಿ ಇದೆ.
986 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಇದೆ.
ಅಭ್ಯರ್ಥಿ: ಬಿ.ಎಲ್.ದೇವರಾಜು
(ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ)
ಒಟ್ಟು ಆಸ್ತಿ: 3.14 ಕೋಟಿ ರು.
ಚರಾಸ್ತಿ: 42.17 ಲಕ್ಷ ರು.,
ಸ್ಥಿರಾಸ್ತಿ: 2.05 ಕೋಟಿ ರು.
ಸಾಲ: 14.10 ಲಕ್ಷ ರು.
ಪತ್ನಿ ಬಳಿ: . 30.55 ಲಕ್ಷ ಚರಾಸ್ತಿ , . 37 ಲಕ್ಷ ಸ್ಥಿರಾಸ್ತಿ
500 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, ಕೃಷಿ ಭೂಮಿ ಇದೆ.