
ಬೆಂಗಳೂರು (ಸೆ.7): ಕುಮಾರಸ್ವಾಮಿ ತಾನು ಮತ್ತೆ ಸಿಎಂ ಆಗುವ ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ರು ಆದ್ರೆ ಅವರ ಆಸೆ ನಿರಾಸೆಯಾಗಿದೆ. ಅವರು ಹೀಗೆ ಸಿಎಂ ಆಗುವ ಕನಸನ್ನು ಹೀಗೆ ಮುಂದುವರಿಸಿಕೊಂಡು ಹೋಗಲಿ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಲೇವಡಿ ಮಾಡಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಅವರು ಕನಸು ಕಾಣುವುದಷ್ಟೇ ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಮತ್ತೆ ಸಿಎಂ ಆಗೊಲ್ಲ ಎಂದರು ಇದೇ ವೇಳೆ 'ಎಂಬಿ ಪಾಟೀಲ್ ಸಿಎಂ ಆಗೊಲ್ಲ' ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಚಿವರು, ಈಗ ಅಂತಹ ಸನ್ನಿವೇಶ ಬಂದಿಲ್ಲ, ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ. ನಾನು ಹಿರಿಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗ್ತೇನೆ. ಆದರೆ ಶಿವಾನಂದ ಪಾಟೀಲ್ ಆಗೊಲ್ಲ. ಯಾಕೆಂದರೆ ಅವರು ಜೆಡಿಎಸ್‌ನಿಂದ ಬಂದವರು. ವಿಜಯಪುರದಿಂದ ಸಿಎಂ ಆಗೋದು ನಾನೇ ಎಂದು ಶಿವಾನಂದ ಪಾಟೀಲ್‌ಗೆ ತಿರುಗೇಟು ನೀಡುವ ಮೂಲಕ ಎಂಬಿ ಪಾಟೀಲ್ ಸಿಎಂ ಆಗುವ ಆಸೆ ಬಿಚ್ಚಿಟ್ಟರು.
ಬಾಗೀನ ಅರ್ಪಿಸುವ ವೇಳೆ ಈಶ್ವರ್ ಖಂಡ್ರೆ ಜಸ್ಟ್ ಮಿಸ್, 'ಕೆರೆಗೆ ಹಾರ' ದಿಂದ ಬಚಾವ್ ಆದ ಅರಣ್ಯ ಸಚಿವ!
ಇನ್ನು ಮುಡಾ ಪ್ರಕರಣ ಡೈವರ್ಟ್ ಮಾಡಲು ದರ್ಶನ್ ಫೋಟೊ ರಿಲೀಸ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿದವರು. ಅವರ ಈ ರೀತಿ ಮಾತನಾಡೋದು ಸರಿಯಲ್ಲ. ದರ್ಶನ್ ರಾಜಾತಿಥ್ಯ ಗಂಭೀರವಾದುದು. ನಾನು ಹೋಂ ಮಿನಿಸ್ಟರ್ ಆಗಿದ್ದೆ. ಆಗಲೂ ಜೈಲಿನಲ್ಲಿ ಇಂತಹ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದಕ್ಕೆ ದರ್ಶನ್ ಅಂಡ್ ಗ್ಯಾಂಗ್ ಅನ್ನ ಚದುರಿಸಲಾಗಿದೆ. ರಾಜ್ಯದ ಬೇರೆಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ. ಫೋಟೊ ಲೀಕ್ ಎಲ್ಲದರ ಬಗ್ಗೆ ತನಿಖೆ ಆಗಲಿದೆ. ಮುಡಾ ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ. ಸುಮ್ಮನೆ ಮಾತನಾಡಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.
ನನಗೂ ಭಾಷೆ ಗೊತ್ತು, ಬಾಗಲಕೋಟೆಗೇ ಬರ್ತೀನಿ: ನಿರಾಣಿಗೆ ಎಂಬಿ ಪಾಟೀಲ್ ತಿರುಗೇಟು
ಮುಡಾ ಪ್ರಕರಣದ ಸೈಟ್ ಹಂಚಿಕೆ ಬಿಜೆಪಿ ಅವಧಿಯಲ್ಲಿ ಆಗಿದ್ದು. ಇದರಲ್ಲಿ ಸಿಎಂ ಸಿದ್ದರಾಮಯ್ಯನರ ಪಾಲೇನಿದೆ? ಮುಡಾದಿಂದ ಯಾರೂ ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೇ ಸಿಗುತ್ತದೆ. ಹಗಲುಗನಸು ಕಾಣೋದು ಬೇಡ. ರಾಜ್ಯಪಾಲರ ನಡೆವಳಿಕೆ ಮಾತ್ರ ಕಾನೂನು ಬಾಹಿರವಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.