ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಉಚಿತ ಗ್ಯಾಸ್ ಸಿಲಿಂಡರ್, ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 3 ಸಾವಿರ ರು. ಪ್ರಯಾಣ ಭತ್ಯೆ, ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ ಮಹಿಳೆಯರಿಗೆ ವರ್ಷಕ್ಕೆ 18 ಸಾವಿರ ರು., ರೈತರಿಗೆ ಶೇ.50 ರಿಯಾಯ್ತಿ ದರದಲ್ಲಿ ವಿದ್ಯುತ್ ಸೇರಿದಂತೆ ಹಲವು ಉಚಿತ ಯೋಜನೆಗಳನ್ನು ಘೋಷಿಸಲಾಗಿದೆ. ಈ ಮೂಲಕ ಮತದಾರರ ಮನ ಗೆಲ್ಲುವ ತಂತ್ರ ರೂಪಿಸಲಾಗಿದೆ.
ಜಮ್ಮು(ಸೆ.07): 10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಅವಿರತ ಯತ್ನ ನಡೆಸುತ್ತಿರುವ ಬಿಜೆಪಿ, ಹಲವು 'ಉಚಿತ ಭರವಸೆ'ಗಳ ಮಳೆ ಸುರಿಸಿದೆ.
ಶುಕ್ರವಾರ ಕೇಂದ್ರ ಸಚಿವ ಅಮಿತ್ ಅವರು 'ಸಂಕಲ್ಪ ಪತ್ರ' ಹೆಸರಿನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ 25 ಭರವಸೆಗಳನ್ನು ಪ್ರಕಟಿಸಿದ್ದಾರೆ. ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಉಚಿತ ಗ್ಯಾಸ್ ಸಿಲಿಂಡರ್, ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 3 ಸಾವಿರ ರು. ಪ್ರಯಾಣ ಭತ್ಯೆ, ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ ಮಹಿಳೆಯರಿಗೆ ವರ್ಷಕ್ಕೆ 18 ಸಾವಿರ ರು., ರೈತರಿಗೆ ಶೇ.50 ರಿಯಾಯ್ತಿ ದರದಲ್ಲಿ ವಿದ್ಯುತ್ ಸೇರಿದಂತೆ ಹಲವು ಉಚಿತ ಯೋಜನೆಗಳನ್ನು ಘೋಷಿಸಲಾಗಿದೆ. ಈ ಮೂಲಕ ಮತದಾರರ ಮನ ಗೆಲ್ಲುವ ತಂತ್ರ ರೂಪಿಸಲಾಗಿದೆ. ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ, 'ಕಾಶ್ಮೀರದಲ್ಲಿ ಪರಿಚ್ಛೇದ 370ರ ಮರುಜಾರಿಗೆ ಬಿಜೆಪಿ ಅವಕಾಶ ನೀಡಲ್ಲ. ರಾಜ್ಯವನ್ನು ಭಯೋತ್ಪಾದನೆ ಮುಕ್ತ ಮಾಡಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ' ಎಂದರು.
Breaking: ಹರಿಯಾಣ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಸೇರಿದ ಭಜರಂಗ್ ಪೂನಿಯಾ, ವಿನೇಶ್ ಪೋಗಟ್!
ಭಯೋತ್ಪಾದನೆ ಪಿಡುಗಿಗೆ ಇತಿಶ್ರೀ ಕಾಶ್ಮೀರದಲ್ಲಿ ಪರಿ ಚ್ಛೇದ 370 ಎಂಬುದು ಮುಗಿದ ಅಧ್ಯಾಯ. ಅದರ ಮರುಜಾರಿಗೆ ಬಿಜೆಪಿ ಅವಕಾಶ ನೀಡಲ್ಲ. ರಾಜ್ಯವನ್ನು ಭಯೋತ್ಪಾ ದನೆ ಮುಕ್ತ ಮಾಡಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ. • ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಪ್ರಮುಖ ಭರವಸೆಗಳು
'ಮಾ ಸಮ್ಮಾನ್' ಯೋಜನೆಯಡಿ ಯಲ್ಲಿ ಕುಟುಂಬದ ಹಿರಿಯ ಮಹಿಳೆಗೆ ವರ್ಷಕ್ಕೆ 18 ಸಾವಿರ ರು. ಧನಸಹಾಯ • ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 2 ಉಚಿತ ಎಲ್‌ಪಿಜಿ ಸಿಲಿಂಡರ್ • ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರಿಗೆ 2 ವರ್ಷಗಳವರೆಗೆ 10 10 ಸಾವಿರ ರು. ಕೋ ಚಿಂಗ್ ಶುಲ್ಕ, ಪರೀಕ್ಷಾ ಕೇಂದ್ರಗಳಿಗೆ ಉಚಿತ ಪ್ರಯಾಣ ಸೌಲಭ್ಯ.1 ಬಾರಿ ಪರೀಕ್ಷಾ ಅರ್ಜಿ ಶುಲ್ಕ ಮರುಪಾವತಿ • 'ಪ್ರಗತಿ ಶಿಕ್ಷಾ ಯೋಜನಾ' ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ 3 ಸಾವಿರ ರು. ಧನಸಹಾಯ • ಗ್ರಾಮೀಣ ಭಾಗದಲ್ಲಿ ಪಿಯುಸಿ ಓದು ತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ • ವೃದ್ಧಾಪ್ಯ, ವಿಧವಾ ವೇತನ 1 ಸಾವಿರ ರು.ದಿಂದ 3 ಸಾವಿರಕ್ಕೆ ಏರಿಕೆ
• ಬ್ಯಾಂಕ್ ಸಾಲದ ವಿಚಾರದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ರಾಜ್ಯ ಸರ್ಕಾರದ ಮೂಲಕ ಬಡ್ಡಿ ಕಟ್ಟಲು ನೆರವು • 6 ಸಾವಿರ ರು. ಇರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹಣ 10 ಸಾವಿರ ರು.ಗೆ ಏರಿಕೆ • ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆ ಮೊತ್ತ 2 ಲಕ್ಷ ರು.ಗಳಿಂದ 5 ಲಕ್ಷ ರು.ಗೆ ಏರಿಕೆ . ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುವ ವಿದ್ಯುತ್ ದರ ಶೇ.50ರಷ್ಟು ಕಡಿತ • ಅಟಲ್ ವಸತಿ ಯೋಜನೆಯ ಮೂಲಕ ಭೂರಹಿತ ಫಲಾನುಭವಿಗಳಿಗೆ ಉಚಿತವಾಗಿ ಭೂಮಿ • ಯುವಕರಿಗೆ 5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿ: 1000 ಹೊಸ ಮೆಡಿಕಲ್ ಸೀಟು ಸೃಷ್ಟಿ . ಅಗ್ನಿವೀರರಿಗೆ ಜಮ್ಮು-ಕಾಶ್ಮೀರ ಪೊಲೀಸ್ ಹುದ್ದೆಗಳಲ್ಲಿ ಶೇ.20ರಷ್ಟು ಮೀಸಲಾತಿ • ಕಾಶ್ಮೀರಿ ಪಂಡಿತರಿಗೆ ಪುನರ್‌ವಸತಿ, ಹಾಳಾಗಿರುವ 100 ದೇವಸ್ಥಾನಗಳ ಮರು ಅಭಿವೃದ್ಧಿ