ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ: ಸಿಎಂ ‌ಸಿದ್ದರಾಮಯ್ಯ

By Govindaraj SFirst Published Jun 20, 2024, 7:00 PM IST
Highlights

ರಾಜ್ಯದ ಅಭಿವೃದ್ಧಿಗೆ ದರ ಏರಿಕೆ ಮಾಡಲಾಗಿದೆ. ವಿರೋಧ ಪಕ್ಷ ಬೆಲೆ ಏರಿಕೆ ಬಗ್ಗೆ ಏನು ಬೇಕಾದರೂ ಹೇಳುತ್ತೆ ಎಂದು ಡಿಸೇಲ್ - ಪೆಟ್ರೋಲ್ ದರ ಏರಿಕೆಯನ್ನು ಸಿಎಂ ‌ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
 

ಬಳ್ಳಾರಿ (ಜೂ.20): ರಾಜ್ಯದ ಅಭಿವೃದ್ಧಿಗೆ ದರ ಏರಿಕೆ ಮಾಡಲಾಗಿದೆ. ವಿರೋಧ ಪಕ್ಷ ಬೆಲೆ ಏರಿಕೆ ಬಗ್ಗೆ ಏನು ಬೇಕಾದರೂ ಹೇಳುತ್ತೆ ಎಂದು ಡಿಸೇಲ್ - ಪೆಟ್ರೋಲ್ ದರ ಏರಿಕೆಯನ್ನು ಸಿಎಂ ‌ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಇಲ್ಲಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಬಂದಾಗ ಪೆಟ್ರೋಲ್ ಬೆಲೆ ಎಷ್ಟಿತ್ತು..? ಅಂದು ಕೂಡ ಕೇಂದ್ರ ಸರ್ಕಾರವೇ ಬೆಲೆ ಏರಿಕೆ ಮಾಡಿದೆ. ಮನಮೋಹನ ಸಿಂಗ್ ಅವಧಿಯಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲಕ್ಕೆ 113 ಡಾಲರ್ ಇತ್ತು. ಬಿಜೆಪಿ ಅವಧಿಯಲ್ಲಿ 59 ಡಾಲರ್ ಕ್ಕೆ ಆಯ್ತು. ಆದರು ತೈಲ ದರ ಏರಿಕೆ ಮಾಡಿದ್ದರು. ಆಗ ಯಾರು ಪ್ರಶ್ನೆ ಮಾಡಿಲ್ಲ ಎಂದರು.

ಗ್ಯಾರಂಟಿ ಯೋಜನೆಗೆ ಈ ವರ್ಷ 60 ಸಾವಿರ ಕೋಟಿ ಕೊಡ್ಬೇಕು. ಗ್ಯಾರಂಟಿಗಾಗಿ ಬೆಲೆ ಹೆಚ್ಚಿಗೆ ಮಾಡಿಲ್ಲ. ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ಬಿಜೆಪಿ ಅವರು ಗ್ಯಾರಂಟಿಗಳನ್ನು ರದ್ದು ಮಾಡಲಿ ಎಂದು  ಹೇಳಲಿ ನೋಡೋಣ? ಹೇಳ್ತಾರಾ...? ಬಿಜೆಪಿಯವರು ಆರೋಪ ವಸ್ತು ಸ್ಥಿತಿ ಮೇಲೆ ಮಾಡ್ಬೇಕು. ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಪ್ರಶ್ನೆ ಮಾಡಿಲ್ಲ. ನರೇಂದ್ರ ಮೋದಿ ಬಂದಾಗ ಲೀಟರ್ ಪೆಟ್ರೋಲ್ 72 ರೂ ಇತ್ತು. ಈಗ 102 ರೂ ಆಗಿದೆ, ಕಚ್ಚಾ ತೈಲ ಬೆಲೆ ಕಡಿಮೆ ಆಗಿದೆ. ನಾವು 03 ರೂ ಅಭಿವೃದ್ಧಿ ಏರಿಕೆ ಮಾಡಿದ್ದೇವೆ ಪಕ್ಕದ ರಾಜ್ಯಕ್ಕಿಂತಲೂ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದು ಸಿಎಂ ಹೇಳಿದರು.

Latest Videos

ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಇಲ್ಲದ ವಾಹನಗಳ ವಿರುದ್ಧ ಕ್ರಮ: ಸಚಿವ ರಾಮಲಿಂಗಾರೆಡ್ಡಿ

ತುಂಗಭದ್ರ ಜಲಾಶಯದಲ್ಲಿನ ಹೂಳಿನ ಸಮಸ್ಯೆ ಹಿನ್ನಲೆ ಬಗ್ಗೆ ಮಾತನಾಡಿದ ಸಿಎಂ, ಗಂಗಾವತಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲಿದ್ದು, ಆಂಧ್ರ ಮತ್ತು ತಮಿಳುನಾಡು ಮುಖ್ಯ ಮಂತ್ರಿಗಳ ಜೊತೆ ಈ ಬಗ್ಗೆ ಮಾತುಕತೆ ನಡೆಸಲಿದ್ದೇವೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಡಿಪಿಆರ್ ಸಿದ್ದಪಡಿಸುವ ಕಾರ್ಯ ನಡೆದಿದೆ ಎಂದರು. ಸದ್ಯ ಬಸ್ ದರ ಹೆಚ್ಚಳದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

click me!