ರಾಜ್ಯದಲ್ಲಿ ವರ್ಷದಲ್ಲಿ ಚುನಾವಣೆ ಸಾಧ್ಯತೆ ಇದೆ: ಬೊಮ್ಮಾಯಿ ಭವಿಷ್ಯ

By Kannadaprabha News  |  First Published Jun 20, 2024, 10:21 AM IST

ರಾಜ್ಯದಲ್ಲಿ ಜನರು ಸರ್ಕಾರದ ಮೇಲೆ ವಿಶ್ವಾಸ ಕಳೆದು ಕೊಂಡಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಅದನ್ನು ತೋರಿಸಿದ್ದಾರೆ. ಕಾಂಗ್ರೆಸ್‌ ಶಾಸಕರು ಹತಾಶರಾಗಿದ್ದಾರೆ ಎಂದು ಹೇಳಿದ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ


ಹಿರೇಕೆರೂರು(ಜೂ.20): ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲವಿದೆ. ಒಂದು ವರ್ಷದೊಳಗಾಗಿ ವಿಧಾನಸಭಾ ಚುನಾವಣೆ ನಡೆದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. 

ಹಿರೇಕೆರೂರು ತಾಲೂಕಿನ ಮಾಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜನರು ಸರ್ಕಾರದ ಮೇಲೆ ವಿಶ್ವಾಸ ಕಳೆದು ಕೊಂಡಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಅದನ್ನು ತೋರಿಸಿದ್ದಾರೆ. ಕಾಂಗ್ರೆಸ್‌ ಶಾಸಕರು ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ. 

Tap to resize

Latest Videos

undefined

ಶಿಗ್ಗಾವಿ ಕ್ಷೇತ್ರದ ಟಿಕೆಟ್‌ನ್ನು ಪುತ್ರನಿಗೆ ಕೊಡಿಸಲು ಸಂಸದ ಬೊಮ್ಮಾಯಿ ಯತ್ನ

ಮುಖ್ಯಮಂತ್ರಿ ಬಳಿ ಹೋದರೆ ಅವರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ, ಅವರಿಗೆ ಜನರ ಬಳಿ ಹೋಗಲು ಆಗುತ್ತಿಲ್ಲ. ರಾಜಕಾರಣ ಮತ್ತು ಜನರ ಕಾರಣದಿಂದ ಸರ್ಕಾರದ ಆಯಸ್ಸು ಬಹಳ ಕಡಿಮೆಯಿದೆ ಎಂದು ಹೇಳಿದರು.

click me!