Bitcoin Scam: ಮಂತ್ರಿಗಳು, ಅಧಿಕಾರಿಗಳಿಂದಲೇ ನಮಗೆ ದಾಖಲೆ ಸಿಗುತ್ತಿವೆ: ಡಿಕೆಶಿ

Kannadaprabha News   | Asianet News
Published : Nov 13, 2021, 01:40 AM IST
Bitcoin Scam: ಮಂತ್ರಿಗಳು, ಅಧಿಕಾರಿಗಳಿಂದಲೇ ನಮಗೆ ದಾಖಲೆ ಸಿಗುತ್ತಿವೆ: ಡಿಕೆಶಿ

ಸಾರಾಂಶ

*ಬಿಟ್‌ಕಾಯಿನ್‌ ದಾಖಲೆಗಳನ್ನು ನಾವು ಹುಡುಕುತ್ತಿಲ್ಲ *ಅಧಿಕಾರಿಗಳಿಂದಲೇ ನಮಗೆ ದಾಖಲೆ ಸಿಗುತ್ತಿವೆ *ಗಂಭೀರ ವಿಚಾರ ಅಲ್ಲದಿದ್ದರೆ ಮೋದಿ ಜತೆ ಏಕೆ ಚರ್ಚೆ?  

ಬೆಂಗಳೂರು(ನ.13):  ಬಿಟ್‌ ಕಾಯಿನ್‌ ಪ್ರಕರಣ (Bitcoin Scam) ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದ್ದು ಅನುಕೂಲ ಆಗುವ ಅಂಶಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದೆ. ಇದು ಹೆಚ್ಚು ಕಾಲ ನಡೆಯುವುದಿಲ್ಲ. ನಾವು 100 ಪರ್ಸೆಂಟ್‌ ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ. ಅಲ್ಲದೆ, ಈ ಹಗರಣದ ಬಗ್ಗೆ ನಾವೇ ಹೋಗಿ ಯಾವುದೇ ದಾಖಲೆ ಹುಡುಕುತ್ತಿಲ್ಲ. ಸರಕಾರದ ಮಂತ್ರಿಗಳು, ಅಧಿಕಾರಿಗಳೇ ಒದಗಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಪ್ರಕರಣ ಗಂಭೀರ ವಿಚಾರ ಅಲ್ಲದಿದ್ದರೆ ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆ ಚರ್ಚೆ ಮಾಡುವ ಅಗತ್ಯವೇನಿತ್ತು? ಇದು ಪ್ರಮುಖ ವಿಚಾರವಲ್ಲ ಎಂದು ಪ್ರಧಾನಿಗಳು (Prime Minister) ಹೇಳಿರಬಹುದು. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಆದ್ದರಿಂದ ಪಕ್ಷ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಿಟ್‌ ಕಾಯಿನ್‌ ಎಲ್ಲಿವೆ?:

ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಕಾಂಗ್ರೆಸ್‌ (Congress) ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. ಹಾಗಾದರೆ ಎಲ್ಲರ ಹೆಸರನ್ನೂ ಬಯಲು ಮಾಡಲಿ, ಅವರನ್ನೂ ಬಂಧಿಸಲಿ. ಕಾಂಗ್ರೆಸ್‌ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಹೇಳುತ್ತಾರೆ. 31 ಬಿಟ್‌ ಕಾಯಿನ್‌ ವಶಪಡಿಸಿಕೊಂಡಿರುವುದಾಗಿ ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಹಾಗಾದರೆ ಆ ಬಿಟ್‌ ಕಾಯಿನ್‌ ಈಗ ಯಾರ ಬಳಿ ಇದೆ, ಯಾರು ಸೀಜ್‌ ಮಾಡಿದ್ದಾರೆ, ಅದರ ಪಂಚನಾಮ ಆಗಿದೆಯೇ ಎಂಬುದನ್ನು ಸರ್ಕಾರ ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

ಜೋರಾಯ್ತು ಬಿಟ್ ಕಾಯಿನ್ ಬಡಿದಾಟ: ಅಶ್ವತ್ಥ್ ನಾರಾಯಣರಿಂದ ಒಂದು ಸವಾಲು

ಪೊಲೀಸ್‌ ಅಧಿಕಾರಿಗಳ (Police officers) ಸಂಭಾಷಣೆ ಆಡಿಯೋ ಬಿಡುಗಡೆಯಾಗಿದ್ದು, ‘ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು, ಸಚಿವರೂ ಭಾಗಿಯಾಗಿದ್ದಾರೆ’ ಎಂಬ ಮಾತುಗಳಿವೆ. ಆದ್ದರಿಂದ ಸಮಯ ಬಂದಾಗ ಎಲ್ಲ ವಿಚಾರಗಳೂ ಹೊರಬರುತ್ತವೆ ಎಂದು ಪ್ರತಿಕ್ರಿಯಿಸಿದರು.

ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್ 5 ಪ್ರಶ್ನೆ

ಬಿಟ್‌ ಕಾಯಿನ್‌ ಹಗರಣ ಕುರಿತಾಗಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರುಗಳ (BJP Leaders) ನಡುವೆ ಆರೋಪ-ಪ್ರತ್ಯಾರೋಪಗಳು ಸಹ ಜೋರಾಗಿವೆ.  ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರಿಯಾಂಕ್​​​ ಖರ್ಗೆ(Priyank Kharge), ಸಿಎಂ ಬಸವರಾಜ್​​ ಬೊಮ್ಮಾಯಿಗೆ (Basavaraj Bommai) 5 ಪ್ರಶ್ನೆಗಳನ್ನ (Five Questions) ಕೇಳಿದ್ದಾರೆ. 

ಆರೋಪ ಸುಳ್ಳೆಂದು ಸಾಬೀತುಪಡಿಸಿ ಎನ್ನಬೇಕಿತ್ತು, ಮೋದಿ ಆರೋಪ ನಿರ್ಲಕ್ಷಿಸಿ ಅಂದ್ರೆ ಹೇಗೆ? ಸಿದ್ದು ಪ್ರಶ್ನೆ

ಬಿಟ್​​ ಕಾಯಿನ್​​ ಕೇಸ್​​​ ಅಷ್ಟು ಮುಖ್ಯವಲ್ಲ ಎಂದು ಸಿಎಂ ಹೇಳುತ್ತಾರೆ. ಹಾಗಾದ್ರೆ ಪ್ರಧಾನಿ ಮೋದಿ ಬಳಿ ಹೋಗಿ ಏಕೆ ಚರ್ಚಿಸಿದ್ರು ಎಂದು ಬೊಮ್ಮಾಯಿಗೆ ಪ್ರಿಯಾಂಕ್​​​ ಖರ್ಗೆ ಪ್ರಶ್ನೆ ಮಾಡಿದರು.ಬಿಟ್ ಕಾಯಿನ್ ಪ್ರಕರಣ ದೊಡ್ಡ ಹಗರಣ. ನವೆಂಬರ್ 14 ರಂದು ಶ್ರೀಕಿ ಸರಂಡರ್ ಆಗ್ತಾರೆ. ಬಳಿಕ 3 ದಿನ ಕೇಸ್​​ ಕುರಿತು ಯಾವುದೇ ರಿಪೋರ್ಟ್ ಆಗಲ್ಲ. ನವೆಂಬರ್ 17 ರಂದು ಕೇಸ್​ ದಾಖಲಾಗುತ್ತೆ. ಬಳಿಕ 14 ದಿನ ಪೊಲೀಸ್ ಕಸ್ಟಡಿಗೆ ಪಡೆಯುತ್ತಾರೆ ಎಂದರು.

ಇನ್ನು, ಸರ್ಕಾರಕ್ಕೆ ಐದು ಪ್ರಶ್ನೆ ಕೇಳಿದ ಪ್ರಿಯಾಂಕ್​​​ ಖರ್ಗೆ ಕೆಂಡಕಾರಿದರು. ಸರ್ಕಾರ ನಮ್ಮನ್ನು ಬ್ಲ್ಯಾಕ್​ಮೇಲ್ ಮಾಡೋದು ಬೇಡ. ಕಾಂಗ್ರೆಸ್ಸಿಗರು ಯಾರೇ ಭಾಗಿಯಾಗಿದ್ದರೂ ಒದ್ದು ಒಳಹಾಕಿ. ಬಿಟ್ ಕಾಯಿನ್ ಕೇಸ್​ ಡೈವರ್ಟ್ ಮಾಡಲು ಕಾಂಗ್ರೆಸ್​ ನಾಯಕರು ಇದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ ಯಾಕೆ ಪ್ರಶ್ನಿಸಿದರು.

1. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಶ್ರೀಕಿಗೆ ಡ್ರಗ್ಸ್ ಕೊಡಲಾಗಿತ್ತಾ?

2. 186 ಬಿಟ್ ಕಾಯಿನ್ ಮೊತ್ತ ₹100 ಕೋಟಿ, ಇದೆಲ್ಲೋಯ್ತು?
 
3. ಶ್ರೀಕಿ ಹ್ಯಾಕ್​ ಮಾಡಿದ್ದ 5 ಸಾವಿರ ಕಾಯಿನ್ ಎಲ್ಲೋಯ್ತು?

4. 80 ಸಾವಿರ ಯೂರೋ ಟ್ರಾನ್ಸಫರ್ ಮಾಡಿದ್ರೂ ತನಿಖೆ ಯಾಕಿಲ್ಲ?

5. ಇ.ಡಿ, ಇಂಟರ್ ಪೋಲ್​​ಗೆ ಮಾಹಿತಿ ನೀಡಲು ವಿಳಂಬವೇಕೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ