* ರಂಗೇರಿದ ವಿಧಾನಪರಿಷತ್ ಚುನಾವಣೆ
* ರಾಜ್ಯದಲ್ಲಿ ಬಿರುಸುಕೊಂಡ ರಾಜಕೀಯ ಚಟುವಟಿಕೆಗಳು
* ಪರಿಷತ್ ಚುನಾವಣೆ ಅಖಾಡಕ್ಕಿಳಿದ ಎಚ್‌ಡಿ ದೇವೇಗೌಡ
ಹಾಸನ, (ನ.12): ರಾಜ್ಯ ವಿಧಾನ ಪರಿಷತ್ ಚುನಾವಣೆಗೆ (Karnataka Legislative Council) ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ.
ಇದಕ್ಕೆ ಪೂಕರವೆಂಬಂತೆ ಹಾಸನದಲ್ಲಿ (Hassan) ಇಂದು(ನ.12) ಜೆಡಿಎಸ್ (JDS) ಸಭೆ ನಡೆದಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಸಮ್ಮುಖದಲ್ಲಿ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯ ಆಯ್ಕೆ ಬಗ್ಗೆ ಚರ್ಚೆಗಳು ನಡೆದವು. ಸಭೆಯಲ್ಲಿ ನಾಯಕರ ಅಭಿಪ್ರಾಯ ಕೇಳಿದ ಬಳಿಕ ದೇವೇಗೌಡರು ಮಾತನಾಡಿ, ನಮ್ಮ ಕುಟುಂಬದ ಯಾರೂ ಎಂಎಲ್ ಸಿ ಆಗಿಲ್ಲ, ಗ್ರಾಮ ಮಟ್ಟದಿಂದ ಎಲ್ಲರ ಸಲಹೆ ಪಡೆದು ಅಭ್ಯರ್ಥಿಯ ಹೆಸರು ಅಂತಿಮ ಮಾಡೋಣ ಎಂದರು.
undefined
Karnataka MLC Election: 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ
ಕೆಲವರು ಭವಾನಿ ರೇವಣ್ಣ ಹೆಸರು ಹೇಳಿದ್ರು, ಇನ್ನೂ ಕೆಲವರು ಸೂರಜ್ ರೇವಣ್ಣ ಹೆಸರೂ ಹೇಳಿದ್ದಾರೆ. ಆದರೆ ಅಂತಿಮವಾಗಿ ಕೆಟ್ಟ ಹೆಸರು ಬರಬಾರದು. ಕೆಲಸ ಮಾಡಿದ ಕಾರ್ಯಕರ್ತರು ತುಂಬಾ ಜನ ಇದ್ದಾರೆ. ಅವರನ್ನ ಕಡೆಗಣಿಸಿದರು ಅನ್ನೊ ಹಾಗೆ ಆಗಬಾರದು. ಇದುವರೆಗೆ ನಮ್ಮ ಕುಟುಂಬದ ಯಾರೂ ಎಂಎಲ್ ಸಿ ಆಗಿಲ್ಲ. ಹಲವು ಸಮುದಾಯದ ಜನರನ್ನು ನಾವು ಎಂಎಲ್‌ಸಿ ಮಾಡಿದ್ದೇವೆ ಎಂದರು. ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಿದ್ರೆ, ತಮ್ಮ ಕುಟುಂಬದವರನ್ನು ಎಂಎಲ್‌ಸಿ ಮಾಡುವ ಸುಳಿವು ಕೊಟ್ಟಂತಿದೆ.
2023ಕ್ಕೆ ನಮ್ಮ ಮನೆ ಬಾಗಿಲಿಗೆ ಬರ್ತಾರೆ
2023ಕ್ಕೆ ಯಾರು ನಮ್ಮನ್ನ ತೆಗೆಯುತ್ತೇವೆ ಎನ್ನುತ್ತಾರೋ ಅವರೇ ಜೆಡಿಎಸ್ ಮನೆ ಬಾಗಿಲಿಗೆ ಬರಬಹುದು. ಇದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ. ಜೆಡಿಎಸ್ ಮುಗಿಸುತ್ತೇವೆ ಎಂದವರೇ ನಮ್ಮ ಮನೆ ಬಾಗಿಲಿಗೆ ಬರ್ತಾರೆ ಎಂದು ಭವಿಷ್ಯ ನುಡಿದರು.
ಕುಮಾರಸ್ವಾಮಿ ಅವರಿಗೆ ಎರಡು ಮೇಜರ್ ಆಪರೇಷನ್ ಆಗಿದೆ. ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ದುಡ್ಡಿನ ಶಕ್ತಿ ನಮಗೆ ಇಲ್ಲ, ಒಂದು ಬೈ ಎಲೆಕ್ಷನ್ ಗೆ 25 ಕೋಟಿ ಖರ್ಚು ಮಾಡಿದ್ರು. ಅದನ್ನ ನಮ್ಮ ಕಣ್ಣಾರೆ ನೋಡಿದ್ದೇನೆ. ಅಲ್ಲಿ ಚುನಾವಣೆಗಾಗಿ ಕುಮಾರಸ್ವಾಮಿ, ಪ್ರಜ್ಚಲ್ ಮತ್ತು ನಮ್ಮ ಕಾರ್ಯಕರ್ತರು ಸಾಕಷ್ಟು ಓಡಾಡಿದ್ರು. ನಾವು ಗೆದ್ದರೂ, ಸೋತರೂ ಹಿಗ್ಗೋದು ಇಲ್ಲ ಕುಗ್ಗೋದು ಇಲ್ಲ. ಹೋರಾಟ ಮಾಡುತ್ತೇವೆ. ಇದು ನಮ್ಮ ಕೆಲಸ ಎಂದು ಹೇಳಿದರು.
ನಮ್ಮನ್ನ ಯಾರೂ ತೆಗೆಯೋಕೆ ಆಗಲ್ಲ. ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಿದೆ ಎಂದು ನನಗೆ ಗೊತ್ತಿದೆ. ಪಕ್ಷದ ಸ್ಥಿತಿ ವೃದ್ಧಿಸುತ್ತಿದೆ. ನಾನೂ ಪಕ್ಷ ಸಂಘಟನೆಗೆ ತೀರ್ಮಾನ ಮಾಡಿದ್ದೇನೆ. ತಿಂಗಳಿಗೆ ಎರಡು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ ಎಂದು ದೇವೇಗೌಡರು ಸಭೆಯಲ್ಲಿ ಹೇಳಿದರು.
ನಾನು ಸಾಕಷ್ಟು ಮಾತನಾಡೋದಿದೆ. ಈ ಪಕ್ಷ ಯಾವುದೇ ಮನೆತನಕ್ಕೆ ಸೇರಿದ್ದಲ್ಲ. ಇಡೀ ರಾಜ್ಯದಲ್ಲಿ ನಾನು ಯಾವ ರೀತಿ ನಡೆದು ಕೊಂಡು ಬಂದೆ ಎಂದು ಬಹಳ ಮಾತನಾಡಬಹುದು. ನಮ್ಮಿಂದಲೆ ಬೆಳೆದ ಹಲವು ನಾಯಕರು ಕಾಂಗ್ರೆಸ್ ನಲ್ಲೂ ಇದ್ದಾರೆ, ಬಿಜೆಪಿಯಲ್ಲೂ ಇದಾರೆ. ಅವರೇ 2023 ರ ಚುನಾವಣೆಯಲ್ಲಿ ಜೆಡಿಎಸ್ ಇರಲ್ಲ ಎಂದು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಒತ್ತಾಯ
ಜೆಡಿಎಸ್ ಪಕ್ಷದಲ್ಲಿಯೂ ರಾಜಕೀಯ ಶುರುವಾಗಿದೆ. ಎಚ್.ಡಿ.ರೇವಣ್ಣ ಅವರ ಕೊನೆಯ ಪುತ್ರ ಸೂರಜ್ ರೇವಣ್ಣಗೆ ಈ ಬಾರಿ ಟಿಕೆಟ್ ಗ್ಯಾರಂಟಿ ಎಂಬ ಮಾತುಗಳು ಕೇಳಿಬಂದವು. ಅಲ್ಲದೇ ಪರಿಷತ್ ಚುನಾವಣೆಗೆ ರೇವಣ್ಣ ಪತ್ನಿ ಭವಾನ ಅವರನ್ನ ಕಣಕ್ಕಿಳಿಸಬೇಕೆನ್ನುವ ಮಾತುಗಳು ಕೇಳಿಬಂದಿವೆ.
, ಪರಿಷತ್ ಚುನಾವಣೆಗೆ ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಹಾಸನದಲ್ಲಿ ಇಂದು ನಡೆದ ಜೆಡಿಎಸ್ ಸಭೆಯಲ್ಲಿ ಮನವಿ ಕೇಳಿ ಬಂದಿದೆ. . ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕರು ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ