* ಮೋದಿಯನ್ನು ಹಾಡಿ ಹೊಗಳಿದ ಕರ್ನಾಟಕದ ಕಾಂಗ್ರೆಸ್ ನಾಯಕ
* ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಮೋದಿ ಗುಣಗಾನ
* ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಪ್ರಮೋದ್ ಮಧ್ವರಾಜ್ ಪ್ರಶಂಸೆ
ಉಡುಪಿ, (ನ.12): ಕಾಂಗ್ರೆಸ್ ನಾಯಕ (Congress Leader), ಮಾಜಿ ಸಚಿವ ಪ್ರಮೋದ್ ಮಧ್ವರಾಜ್ (Pramod Madhwaraj) ಅವರು ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಬಹಿರಂಗವಾಗಿ ಗುಣಗಾನ ಮಾಡಿದ್ದಾರೆ.
ಇದು ಕರಾವಳಿ (Karavali) ಭಾಗದ ಕಾಂಗ್ರೆಸ್ಸಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಬಿಜೆಪಿ(BJP) ಕಾಂಗ್ರೆಸ್ (Congress)ವಾಟ್ಸಾಪ್ ಗ್ರೂಪಲ್ಲಿ ಪರ ವಿರೋಧ ಚರ್ಚೆ ಶುರುವಾಗಿದ್ದು, ಅವರು ಮುಂದೆ ಬಿಜೆಪಿ ಸೇರುವ ಸಾಧ್ಯತೆಗಳಿವೆ ಎನ್ನುವ ಮಟ್ಟಿಗೆ ಚರ್ಚೆಗಳಾಗುತ್ತಿವೆ.
Padma Shri;ರಾಷ್ಟ್ರಪತಿ ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದ ಜೋಗತಿ ಮಂಜಮ್ಮ, ವೈರಲ್ ಆಯ್ತು ವಿಶೇಷ ಘಟನೆ!
ವರ್ಷದ ಹಿಂದೆ ವೃಂದಾವನಸ್ಥರಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಗೆ ಆಗಮಿಸಿದ್ದಾರೆ. ಗುರುವಾರ ಸಂಜೆ ಪ್ರಶಸ್ತಿ ಮತ್ತು ಶ್ರೀಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಅಪರೂಪದ ಸಾಧಕರನ್ನು ತಳಮಟ್ಟದಿಂದ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯ ಎಂದು ಪ್ರಮೋದ್ ಮಧ್ವರಾಜ್ ಪ್ರಧಾನಿಯವರನ್ನು ಹಾಡಿ ಹೊಗಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಪದ್ಮಭೂಷಣ, ಪದ್ಮ ವಿಭೂಷಣ, ಪದ್ಮಶ್ರೀ ಪ್ರಶಸ್ತಿಗಳು ನಿಜವಾದ ಸಾಧಕರನ್ನು ಹುಡುಕಿಕೊಂಡು ಹೋಗುತ್ತಿದೆ. ಈ ಹಿಂದೆ ಅರ್ಜಿ ಹಾಕಿದವರಿಗೆಲ್ಲಾ ಪ್ರಶಸ್ತಿ ಕೊಡುತ್ತಿದ್ದರು, ಮೋದಿ ಸರ್ಕಾರದಲ್ಲಿ ಪ್ರಶಸ್ತಿಯನ್ನು ಹುಡುಕಿಕೊಂಡು ಕೊಡುತ್ತಿದ್ದಾರೆ, ನಾನು ವಿರೋಧ ಪಕ್ಷದಲ್ಲಿದ್ದರೂ ಮೋದಿ ಸರ್ಕಾರ ಮಾಡಿದ ಒಳ್ಳೆ ಕೆಲಸಗಳನ್ನು ಹೊಗಳಬೇಕು ಎಂದರು.
ವಿಶ್ವಮಾನವ ಪರಮಪೂಜ್ಯ ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಯವರಿಗೆ ನೀಡಲಾದ ಭಾರತ ಸರಕಾರದ ಶ್ರೇಷ್ಠ ಗೌರವವಾದ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯ ಗೌರವಾರ್ಪಣ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಹೆಮ್ಮೆಯ ಕ್ಷಣದ ಮನದಾಳದ ಮಾತುಗಳು...https://t.co/hKqmqBeAGu
— Pramod Madhwaraj (@PMadhwaraj)ಉಡುಪಿ ಶ್ರೀಕೃಷ್ಣ ಸಿಕ್ಕಿದ ಸ್ಥಳ ಮಲ್ಪೆಯ ಪ್ರಜೆಯಾಗಿ ನಾನು ಈ ಸಮಾರಂಭದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಚರ್ಚೆಗೆ ಗ್ರಾಸವಾಯ್ತು ಪ್ರಮೋದ್ ಮಧ್ವರಾಜ್ ಮಾತು
ಹೌದು..ಸಹಜವಾಗಿಯೇ ವಿರೋಧ ಪಕ್ಷಗಳ ನಾಯಕರನ್ನ ಗುಣಗಾನ ಮಾಡಿದ್ರೆ, ಹಾಡಿ ಹೊಗಳಿಸಿದ್ರೆ ಸಾಕು ಏನೋ ಸಮ್‌ಥಿಂಗ್ ನಡೀತ್ತಿದೆ ಎಂದು ಭಾವಿಸುತ್ತಾರೆ.
ಅದರಂತೆ ಇದೀಗ ಪ್ರಮೋದ್ ಮಧ್ವರಾಜ್ ಅವರು ಮೋದಿ ಅವರನ್ನ ಗುಣಗಾನ ಮಾಡಿರುವ ಮಾತುಗಳು ಫುಲ್ ವೈರಲ್ ಆಗುತ್ತಿದ್ದು, ಕರಾವಳಿ ಭಾಗದಲ್ಲಿ ಬೇರೆ-ಬೇರೆ ರೀತಿಯಲ್ಲಿ ಚರ್ಚೆಗಳು ನಡೆದಿವೆ. ಕೆಲವರು ಫ್ಯಾಕ್ಟ್ ಹೇಳಿದ್ದಾರೆ ಎಂದು ಹೇಳುತ್ತಿದ್ರೆ, ಇನ್ನೂ ಕೆಲವರು ಮುಂದೆ ಬಿಜೆಪಿಗೆ ಹೋಗಲು ಈ ರೀತಿಯ ತಯಾರಿ ನಡೆಸಿದ್ದಾರೆ ಎನ್ನುವ ಕೊಂಕು ಮಾತುಗಳನ್ನಾಡಿತ್ತಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡಿಗ ಸಾಧಕರು ತೋರಿದ ವಿನಮ್ರತೆ, ಮುಗ್ಧತೆ, ಭಕ್ತಿ ಭಾವ ಮತ್ತು ಆತ್ಮವಿಶ್ವಾಸಗಳು ದೇಶದ ಗಮನ ಸೆಳೆದವು.
ಕಿತ್ತಳೆ ಮಾರಿ ಶಾಲೆ ಕಟ್ಟಿದ ಮಂಗಳೂರಿನ ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ಕಾಡಿನ ವಿಶ್ವಕೋಶ, ವೃಕ್ಷದೇವತೆ ಎಂದೇ ಹೆಸರಾದ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳ ಮುಂದೆ ಅತ್ಯಂತ ಮುಗ್ಧವಾಗಿ ನಿಂತ ಕ್ಷಣ ಎಲ್ಲರ ಹೃದಯಗಳಲ್ಲಿ ಸ್ಥಾಯಿಯಾಗಿತ್ತು.
ಪೇಜಾವರ ಮಠದ ಹಿರಿಯ ಶ್ರೀಗಳಾಗಿದ್ದ ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಘೋಷಿಸಲಾಗಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ಆಗಮಿಸಿದ ಹಾಲಿ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಒಮ್ಮೆ ಪಾದುಕೆಗಳನ್ನು ಕಳಚಿಟ್ಟು ಗುರುಗಳನ್ನು ನೆನೆದು ಬಳಿಕ ಗೌರವ ಸ್ವೀಕರಿಸಿದರು.
ಜಾನಪದ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡತಿ ಜೋಗತಿ ಮಂಜಮ್ಮ ಪ್ರಶಸ್ತಿ ಸ್ವೀಕರಿಸಿದ ದೃಶ್ಯ ವೈರಲ್ ಆಗಿದೆ. ಕರ್ನಾಟಕ ಜನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷೆ ಜೋಗತಿ ಮಂಜಮ್ಮ ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುವ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೃಷ್ಟಿ ತೆಗೆದಿದ್ದಾರೆ.
ದೃಷ್ಟಿ ತೆಗೆದು ರಾಮನಾಥ್ ಕೋವಿಂದ್‌ಗೆ ಶುಭಕೋರಿದ್ದಾರೆ. ಜೋಗತಿ ಮಂಜಮ್ಮಗೆ ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಶುಭ ಕೋರಿದ್ದಾರೆ. ಇದೀಗ ದೃಷ್ಟಿ ತೆಗೆದು ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುತ್ತಿರುವ ಜೋಗತಿ ಮಂಜಮ್ಮ ವಿಡಿಯೋ ವೈರಲ್ ಆಗಿದೆ.