ರಮೇಶ್ ಜಾರಕಿಹೊಳಿಯ 3 ಬೇಡಿಕೆಯಲ್ಲಿ ಒಂದು ಠುಸ್, ಇನ್ನೆರಡು ಕಷ್ಟ ಸಾಧ್ಯ..!

By Suvarna NewsFirst Published Feb 6, 2020, 6:39 PM IST
Highlights

ಕೊನೆಗೂ ಸಂಪುಟ ವಿಸ್ತರಣೆಯಾಗಿದ್ದು, ಗುರುವಾರ ಬಿಎಸ್ ಯಡಿಯೂರಪ್ಪನವರ ಸಂಪುಟ ಸೇರಿದ 10 ನೂತನ ಸಚಿವರುಗಳಿಗೆ ಕೊಠಡಿಗಳನ್ನು ಸಹ ಹಂಚಿಕೆ ಮಾಡಲಾಗಿದೆ. ಹಾಗಾದ್ರೆ ಯಾರಿಗೆ ಯಾವ ಕೊಠಡಿ..? ಈ ಕೆಳಗಿನಂತಿದೆ ವಿವರ.

ಬೆಂಗಳೂರು.(ಫೆ.06): ಗುರುವಾರ 10 ನೂತನ ಸಚಿವರಿಗೆ ಕೊಠಡಿ ಹಂಚಿಕೆ ಮಾಡಲಾಗಿದ್ದು, 6 ಸಚಿವರಿಗೆ ವಿಧಾನಸೌಧದಲ್ಲಿಯೇ ಕಚೇರಿ ಹಂಚಿಕೆ ಮಾಡಿದ್ರೆ, ಉಳಿದ ನಾಲ್ವರಿಗೆ ವಿಕಾಸಸೌಧದಲ್ಲಿ ಕಚೇರಿ ನೀಡಲಾಗಿದೆ.

ಅದರಲ್ಲೂ ಡಿಕೆಶಿ ಕೊಠಡಿ ಮೇಲೆ ಕಣ್ಣಿಟ್ಟಿದ್ದ ರಮೇಶ್ ಜಾರಕಿಹೊಳಿ ನಿರಾಸೆಯಾಗಿದೆ. ಮೈತ್ರಿ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ 336 ನಂಬರಿನ ಕಚೇರಿಯಲ್ಲಿದ್ದರು. ಆದ್ರೆ, ಇದೀಗ ರಮೇಶ್ ಜಾರಕಿಹೊಳಿಗೆ ವಿಧಾನಸೌಧದಲ್ಲಿರುವ 342, 342ಎ ಕೊಠಡಿ ನೀಡಲಾಗಿದೆ. ಇದರಿಂದ ಜಾರಕಿಹೊಳಿಗೆ ಆರಂಭದಲ್ಲಿಯೇ ಹಿನ್ನಡೆಯಾಗಿದೆ.

ದಿಲ್ಲಿಯಿಂದಲೇ ಹೈಕಮಾಂಡ್ ಭರ್ಚಿ: ಸಾಹುಕಾರನಿಂದ ದೂರ ಆಯ್ತು ಕನಸಿನ ಕುರ್ಚಿ

ಮೈತ್ರಿ ಸರ್ಕಾರದಲ್ಲಿ ನಡೆದು ಮುಸುಕಿನ ಗುದ್ದಾಟವನ್ನು ಮರೆಯದ ರಮೇಶ್ ಜಾರಕಿಹೊಳಿ ಇನ್ನೂ ಜಿದ್ದು ಬಿಟ್ಟಿಲ್ಲ. ಆಗಾಗಿ ಡಿಕೆಶಿ ಇದ್ದ ಬಂಗಲೆ, ಕೊಠಡಿ ಹಾಗೂ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. 

ಆದ್ರೆ, ಇದೀಗ ಡಿಕೆಶಿ ಇದ್ದ ಕೊಠಡಿ ರಮೇಶ್ ಕೈತಪ್ಪಿದ್ದು, ಆ ಕೊಠಡಿಯಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಮಾಹದೇವ್ ಪ್ರಕಾಶ್ ಅವರು ಇದ್ದಾರೆ.

 ಇನ್ನುಳಿದ ಎರಡೂ ಬೇಡಿಕೆಗಳು ಖಾತೆ ಮತ್ತು ಬಂಗಲೆ ಕೂಡ ರಮೆಶ್ ಜಾರಕಿಹೊಳಿ ಸಿಗುವುದು ಕಷ್ಟ ಸಾಧ್ಯ. ಈಗಾಗಲೇ ಜಲಸಂಪನ್ಮೂಲ ಖಾತೆಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಿ ಎಂದು ಯಡಿಯೂರಪ್ಪಗೆ ಹೈಕಮಾಂಡ್ ಸೂಚಿಸಿದೆ.

 ಯಾರಿಗೆ ಯಾವ ಕೊಠಡಿ?
 ಸಚಿವರಿಗೆ ವಿಧಾನಸೌಧದಲ್ಲಿಯೇ ಕಚೇರಿ ಹಂಚಿಕೆ
ರಮೇಶ್ ಜಾರಕಿಹೊಳಿ ಕೊಠಡಿ ಸಂಖ್ಯೆ 342/342A
ಬೈರತಿ ಬಸವರಾಜ 337/337A
ಶಿವರಾಮ ಹೆಬ್ಬಾರ್ 258/ 257A
ಶ್ರೀಮಂತ ಪಾಟೀಲ್ 301/301A
ಡಾ. ಸುಧಾಕರ್ 339/ 339A
ಕೆ.ಗೋಪಾಲಯ್ಯ 252/252A

ಉಳಿದ ನಾಲ್ವರಿಗೆ ವಿಕಾಸಸೌಧದಲ್ಲಿ ಕಚೇರಿ ಹಂಚಿಕೆ
ಎಸ್.ಟಿ.ಸೋಮಶೇಖರ್ 38/39
ಆನಂದ್ ಸಿಂಗ್ 36/37
B C ಪಾಟೀಲ್ 406/407
ನಾರಾಯಣಗೌಡ 234/235

click me!