ಮೋದಿ ಸೆಕ್ರೆಟರಿ ಮಗಳು ಅಂತ ಹೇಳಿ ಕೋಟಿ ಕೋಟಿ ಪಂಗನಾಮ ಹಾಕಿದ ಸುಂದ್ರಿ! ಈಕೆ ಕಥೆ ಕೇಳಿ...

Published : Dec 31, 2024, 10:37 PM ISTUpdated : Jan 01, 2025, 07:13 AM IST
ಮೋದಿ ಸೆಕ್ರೆಟರಿ ಮಗಳು ಅಂತ ಹೇಳಿ ಕೋಟಿ ಕೋಟಿ ಪಂಗನಾಮ ಹಾಕಿದ ಸುಂದ್ರಿ! ಈಕೆ ಕಥೆ ಕೇಳಿ...

ಸಾರಾಂಶ

ಪ್ರಧಾನಿ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರ ಪುತ್ರಿ-ಅಳಿಯ ಎಂದು ನಟಿಸಿ, ಉದ್ಯಮಿಗಳಿಗೆ ಟೆಂಡರ್ ಆಮಿಷವೊಡ್ಡಿ ಕೋಟಿಗಟ್ಟಲೆ ವಂಚಿಸಿದ ಜೋಡಿಯನ್ನು ಭುವನೇಶ್ವರ ಪೊಲೀಸರು ಬಂಧಿಸಿದ್ದಾರೆ. ಛಾಯಾಚಿತ್ರಗಳನ್ನು ಮಾರ್ಫ್ ಮಾಡಿ ಪ್ರಭಾವಿಗಳೊಂದಿಗಿನ ಸಂಪರ್ಕ ತೋರಿಸಿ ವಂಚಿಸುತ್ತಿದ್ದರು. ಗಣಿ ಮಾಲೀಕರ ದೂರಿನ ಮೇರೆಗೆ ಬಂಧಿತರಾದ ಹನ್ಸಿತಾ ಮತ್ತು ಮೊಹಾಂತಿಯಿಂದ ಹಲವು ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ ಅವರ ಪುತ್ರಿ ಮತ್ತು ಅಳಿಯ ಎಂದು ಸೋಗು ಹಾಕಿಕೊಂಡು ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಜೋಡಿಯನ್ನು  ಪೊಲೀಸರು ಬಂಧಿಸಿದ್ದಾರೆ.  ಹಲವು ವರ್ಷಗಳಿಂದ ಹಲವರನ್ನು ಸುಲಭದಲ್ಲಿ ವಂಚಿಸಿರುವ ಈ ಜೋಡಿಯ ಮೋಸ ಈಗ ಬಯಲಾಗಿದೆ.    38 ವರ್ಷದ ಹನ್ಸಿತಾ ಅಭಿಲಿಪ್ಸಾ ಮತ್ತು  ಆಕೆಯ ಸಹಚರ ಅನಿಲ್ ಕುಮಾರ್ ಮೊಹಂತಿ ತಾವು ಮಿಶ್ರಾ ಅವರು ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದರು. ಇಂಥ ವಂಚಕರ ಬಲೆಗೆ ಶ್ರೀಮಂತರು ಸುಲಭದಲ್ಲಿ ಬೀಳುವುದು ಹೊಸ ವಿಷಯವೇನಲ್ಲ. ಒಂದಿಷ್ಟು ಪ್ರಭಾವಿಗಳು ಸಿಕ್ಕರೆ ಸಾಕು, ದುಡ್ಡು ಕೊಟ್ಟು ಏನು ಬೇಕಾದರೂ ಕೆಲಸ ಮಾಡಿಕೊಳ್ಳಬಹುದು ಎಂದು ಕಾಯುತ್ತಾ ಇರುವ ದೊಡ್ಡ ದೊಡ್ಡ ಕುಳಗಳು ಇದ್ದೇ ಇರುತ್ತಾರೆ. ಅಂಥ ಮಿಕಗಳನ್ನೇ ಇಂಥ ಮೋಸಗಾರರು ಸುಲಭದಲ್ಲಿ ಬಲೆಗೆ ಬೀಳಿಸಿಕೊಳ್ಳುತ್ತಾರೆ.

ಈಗಲೂ ಆದದ್ದು ಅದೇ ರೀತಿ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಎಂದರೆ ಸುಲಭದಲ್ಲಿ ಉನ್ನತ ಮಟ್ಟದ ಕಾಂಟ್ಯಾಕ್ಟ್​ ಇರುತ್ತವೆ. ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಈ ಖದೀಮರು. ತಾವು ಮಿಶ್ರಾ ಅವರ ಮಗಳು-ಅಳಿಯ ಎಂದು ಹೇಳಿಕೊಂಡು ದೊಡ್ಡ ದೊಡ್ಡ ಟೆಂಡರ್​ ಕೊಡಿಸುವುದಾಗಿ  ಶ್ರೀಮಂತ ಉದ್ಯಮಿಗಳು, ಬಿಲ್ಡರ್‌ಗಳು, ಗಣಿಗಾರಿಕೆ ನಿರ್ವಾಹಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳಿಗೆ ವಂಚಿಸಿದ್ದಾರೆ. ತಮ್ಮ ಕೆಲಸ ಸುಲಭವಾಯಿತು ಎಂದು ಬಂದು ಈ ಎಲ್ಲಾ ಸಿರಿವಂತರು ಪಂಗನಾಮ ಹಾಕಿಸಿಕೊಂಡಿದ್ದಾರೆ. ಕೊನೆಗೆ ಕೆಲವರಿಗೆ ತಾವು ಹಳ್ಳಕ್ಕೆ ಬಿದ್ದಿರುವುದು ತಿಳಿಯುತ್ತಲೇ ಪೊಲೀಸರಲ್ಲಿ ದೂರಿದ್ದಾರೆ. 

450 ವರ್ಷಗಳ ಹಿಂದೆಯೇ ಮೋದಿ ಭವಿಷ್ಯ ನುಡಿದಿದ್ದ ನಾಸ್ಟ್ರಾಡಾಮಸ್‌ 2025ರ ಬಗ್ಗೆ ಶಾಕಿಂಗ್‌ ಭವಿಷ್ಯ!

 ಭುವನೇಶ್ವರದ ಹೆಚ್ಚುವರಿ ಡಿಸಿಪಿ  ಸ್ವರಾಜ್ ದೇಬಾಟಾ ಅವರು ದೂರಿನ ಆಧಾರದ ಮೇಲೆ ತನಿಖೆ ನಡೆಸಿ, ಈ ಜೋಡಿಯನ್ನು ಬಂಧಿಸಿದೆ. ಇವರ ನಿವಾಸದಿಂದ ಪೊಲೀಸರು ಹಲವು ಛಾಯಾಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ವ್ಯಕ್ತಿಗಳೊಂದಿಗೆ ಇರುವಂಥ ಭಾವಚಿತ್ರಗಳನ್ನು ತಯಾರಿಸಿಕೊಂಡಿರುವ ಈ ಖದೀಮರು, ಅದನ್ನೇ ಶ್ರೀಮಂತ ವ್ಯಕ್ತಿಗಳಿಗೆ ತೋರಿಸಿ ಆಮಿಷ ಒಡ್ಡಿದ್ದಾರೆ. ದುಡ್ಡು ಚೆಲ್ಲಿದರೆ ಇನ್ನಷ್ಟು ಶ್ರೀಮಂತರಾಗಬಹುದು ಎಂದುಕೊಂಡ ದೊಡ್ಡವರು, ತಾವು ಮೋಸ ಹೋಗುತ್ತಿದ್ದೇವೆ ಎನ್ನುವ ಎಳ್ಳಷ್ಟೂ ಸಂದೇಹ ಪಡದೇ ಬಲೆಗೆ ಬಿದ್ದಿದ್ದಾರೆ. 

ಇವರು ಅರೆಸ್ಟ್​ ಆಗುತ್ತಿದ್ದಂತೆಯೇ, ಉಳಿದ ಉದ್ಯಮಿಗಳಿಗೂ ಢವಢವ ಶುರುವಾಗಿದೆ. ಇದಾಗಲೇ ಕೋಟಿ ಕೋಟಿ ಹಣ ಕೊಟ್ಟು ತಾವೂ ಹಳ್ಳಕ್ಕೆ ಬಿದ್ದಿರುವುದು ತಿಳಿದಿದೆ. ಈ ಜೋಡಿ,  ಪ್ರಭಾವಿ ಅಧಿಕಾರಿಗಳೊಂದಿಗೆ ಛಾಯಾಚಿತ್ರಗಳನ್ನು ಮಾರ್ಫ್​  ಮಾಡಿಕೊಂಡಿರುವುದು ತಿಳಿದಿದೆ. ಅಂದಹಾಗೆ,  ಹನ್ಸಿತಾ ಕಂಧಮಾಲ್ ಜಿಲ್ಲೆಯ ನಿವಾಸಿಯಾಗಿದ್ದು, ಮೊಹಾಂತಿ ಅವರು ಮೂಲಸೌಕರ್ಯ ಸಂಸ್ಥೆಯನ್ನು ಹೊಂದಿರುವ ಸಣ್ಣ ಉದ್ಯಮಿಯಾಗಿದ್ದಾನೆ.  ಗಣಿ ಮಾಲೀಕರ ದೂರಿನ ಮೇರೆಗೆ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. 

ಸೈಫ್‌ ಅಲಿ ಖಾನ್‌ ಕುಟುಂಬದಿಂದ ಪ್ರಧಾನಿ ಭೇಟಿ: ಮಕ್ಕಳಿಗಾಗಿ ಆಟೋಗ್ರಾಫ್‌, ಅಸಲಿ ಉದ್ದೇಶ ಇಲ್ಲಿದೆ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ