ವಿಧಾನಪರಿಷತ್ ಚುನಾವಣೇಲಿ ಕಾಂಗ್ರೆಸ್ ಮುಖಭಂಗಕ್ಕೆ ಬೋಸರಾಜು ಹೇಳಿಕೆ ಸಂಚಲನ! ಕೊಪ್ಪಳ ಕಾಂಗ್ರೆಸ್‌ನಲ್ಲಿ ಬಿಕೆ ಹರಿಪ್ರಸಾದ್ ಫೋಟೋವೇ ಮಾಯ!

Published : Oct 28, 2026, 01:25 PM IST
NS Bosaraju

ಸಾರಾಂಶ

Karnataka MLC election results: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬೆನ್ನಲ್ಲೇ ಕೊಪ್ಪಳದಲ್ಲಿ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಮೇಲಿನ ಸ್ಟಿಂಗ್ ಆಪರೇಷನ್ ಬಗ್ಗೆ ಎನ್‌ಎಸ್ ಬೋಸರಾಜು ತನಿಖೆಗೆ ಆಗ್ರಹ., ಬ್ಯಾಲೆಟ್ ಪೇಪರ್ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ (ಅ.28): ವಿಧಾನಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌(NDA) ಮೈತ್ರಿ ಪಕ್ಷಗಳ ವಿರುದ್ಧ ಸೋತು ಆಡಳಿತಾರೂಢ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸದ ಬೆನ್ನಲ್ಲೇ ಕೊಪ್ಪಳ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟವಾಗಿದೆ. ಈ ಚುನಾವಣಾ ಫಲಿತಾಂಶದ ಬಗ್ಗೆ ಎನ್‌ಎಸ್ ಬೋಸರಾಜು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಾವು ಯಾಕೆ ಸೋತಿದ್ದೇವೆ ಎಂದು ಚರ್ಚೆ ಮಾಡ್ತೇವೆ:

ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಗೆಲುವಿನ ನಿರೀಕ್ಷೆಯಲ್ಲಿದ್ದೆವು. ಆದರೆ ನಾವು ಸೋತಿರುವ ಮಾಹಿತಿ ಬಂದಿದೆ. ಯಾಕೆ ಸೋತಿದ್ದೇವೆ ಎಂಬ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಪದವಿಧರ ಚುನಾವಣೆ ಅಂದರೂ ಇದು ಕೂಡ ನಮಗೆ ಬಹಳ ಮಹತ್ವದ್ದಾಗಿತ್ತು ಎಂದು ಅವರು ತಿಳಿಸಿದರು.

ಬ್ಯಾಲೆಟ್ ಪೇಪರ್ ಬಗ್ಗೆ ಎನ್‌ಎಸ್ ಬೋಸರಾಜು ಹೇಳಿದ್ದೇನು?

ಈ ಚುನಾವಣೇಲಿ ನಮ್ಮ ಪಕ್ಷ ಸೋತಿದೆ. ಇದನ್ನ ಕೆಲವರು ಮುಖಭಂಗ ಅಂತಿದ್ದಾರೆ, ಕೆಲವರು ಪರಾಭವ ಅಂತಾನೂ ಹೇಳ್ತಿದ್ದಾರೆ. ಏನಾದರೂ ವಿಶ್ಲೇಷಣೆ ಮಾಡಲಿ. ಹಾಗಾದ್ರೆ ಮೊನ್ನೆ ಎಂಎಲ್‌ಸಿ ಚುನಾವಣೆ ದಿಕ್ಸೂಚಿ ಅಲ್ವಾ? ಎಂದ ಪ್ರಶ್ನಿಸಿದರು ಮುಂದುವರಿದು, ಸೋಲಿಗೆ ಕಾರಣ ಏನು ಅನ್ನೋದು ಅಷ್ಟೇ ನಾವು ವಿಶ್ಲೇಷಣೆ ಮಾಡಬೇಕು ಎಂದರು.

ಅಧಿಕೃತವಾಗಿ ಇಂದು ಚುನಾವಣಾ ಫಲಿತಾಂಶ ಬರಲಿದೆ. ಯಾಕೆ ಸೋತಿದ್ದೇವೆ ಅನ್ನೋದು ಚರ್ಚೆ ಆಗುತ್ತೆ. ಈ ಬ್ಯಾಲೆಟ್ ಪೇಪರ್ ಬೇರೆ, ಸಾಮಾನ್ಯ ಚುನಾವಣೆಯಲ್ಲಿ ಬಳಸುವ ಪೇಪರ್ ಬೇರೆ ಎನ್ನುವ ಮೂಲಕ ಈ ಬ್ಯಾಲೆಟ್ ಪೇಪರ್ ಮೇಲೆಯೂ ಅನುಮಾನ ವ್ಯಕ್ತಪಡಿಸಿದರಾ ಬೋಸರಾಜು?

ಸ್ಟಿಂಗ್ ಆಪರೇಷನ್ ಬಗ್ಗೆ ಎನ್‌ಎಸ್ ಬೋಸರಾಜು ಹೇಳಿದ್ದೇನು?

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕುರಿತಂತೆ ಎನ್‌ಎಸ್ ಬೋಸರಾಜು ಪ್ರತಿಕ್ರಿಯಿಸಿದ್ದು, ಸ್ಟಿಂಗ್ ಆಪರೇಷನ್ ಯಾರು ಮಾಡಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಸಂಪೂರ್ಣ ತನಿಖೆಗೊಳಪಡಿಸಬೇಕು ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇನ್ನು 'ನಮ್ಮ ಪಕ್ಷದವರೇ ಇದ್ದಾರೆ' ಎಂದು ಯತೀಂದ್ರ ಕೂಡ ಹೇಳಿದ್ದಾರೆ. ಅದು ಅವರ ವಯಕ್ತಿಕ ಹೇಳಿಕೆ. ಆದರೆ ಈ ಬಗ್ಗೆ ತನಿಖೆ ಆಗುತ್ತೆ ಮುಂದಿನ ದಿನಗಳಲ್ಲಿ ಇದನ್ನು ಯಾರು ಮಾಡಿದ್ದಾರೆ ಅನ್ನೋದು ಹೊರಗೆ ಬರಲಿದೆ. ಇನ್ನು ಮೂರುನಾಲ್ಕು ದಿನಗಳಲ್ಲಿ ಗೊತ್ತಾಗಲಿದೆ. ಈಗ ಸ್ಟಿಂಗ್ ಬಗ್ಗೆ ಯಾರು ಒದರುತ್ತಿದ್ದಾರೆ ಅವರ ಬಾಯಿ ಬಂದ್ ಆಗುತ್ತೆ. ಆದರೆ ಈ ಸ್ಟಿಂಗ್ ಯಾರು ಮಾಡಿದ್ದಾರೆ ಅನ್ನೋದು ಮೊದಲು ಹೊರಗೆ ಬರಬೇಕು. ಇಡೀ ಪಕ್ಷವೇ ಇದನ್ನ ಖಂಡಿಸುತ್ತಿದೆ ಎಂದರು.

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರ ಫೋಟೋವೇ ಇಲ್ಲ!

ಕೊಪ್ಪಳದಲ್ಲಿ ನಡೆದ ಕಾಂಗ್ರೆಸ್ ಸಂಘಟನ್ ಸೃಜನ್ ಅಭಿಯಾನ -2 ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ಫೋಟೋವೇ ಮಾಯವಾಗಿದೆ.

ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯಾಲಯದಲ್ಲಿ ಬ್ಯಾನರ್ ಹಾಕಲಾಗಿದೆ. ಆದರೆ ಈ ಬ್ಯಾನರ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಫೋಟೋವೇ ಮಾಯವಾಗಿದೆ. ಬ್ಯಾನರ್ ನಲ್ಲಿ ಕೇವಲ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಫೋಟೋ ಮಾತ್ರ ಇದೆ. ಜಿಲ್ಲಾ ಕಾಂಗ್ರೆಸ್ ನಾಯಕರು ಬರೀ ಮೂವರ ಫೋಟೋಗಳನ್ನ ಹಾಕಿಸಿದ್ರೆ ಬಿಕೆ ಹರಿಪ್ರಸಾದ ಫೋಟೋ ಹಾಕಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

SIR ವಿಚಾರದಲ್ಲಿ ಜ್ಞಾನೇಶ್ ರಾಜೀನಾಮೆ ಕೇಳುವ ಕಾಂಗ್ರೆಸ್‌ಗೆ ಸಿಟಿ ರವಿ ಓಪನ್ ಚಾಲೆಂಜ್!
MLA ಅಥವಾ MLC ಇಬ್ಬರಲ್ಲಿ ಯಾರು ಪವರ್‌ಫುಲ್? ಯಾರ ಕೈಯಲ್ಲಿ ಹೆಚ್ಚು ಅಧಿಕಾರ?