ಅಂತೂ ಇಂತು ರಾಯಚೂರು ಜಿಲ್ಲೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸ್ಥಾನ ಸಿಕ್ಕಿದ್ದು, ಜಿಲ್ಲೆಯ ಬಹುದಿನಗಳ ಬೇಡಿಕೆಯು ಈಡೇರಿದಂತಾಗಿದೆ. ರಾಯಚೂರು ಜಿಲ್ಲೆಗೆ ಎರಡನೇ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ.
ರಾಮಕೃಷ್ಣ ದಾಸರಿ
ರಾಯಚೂರು (ಮೇ.28) : ಅಂತೂ ಇಂತು ರಾಯಚೂರು ಜಿಲ್ಲೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸ್ಥಾನ ಸಿಕ್ಕಿದ್ದು, ಜಿಲ್ಲೆಯ ಬಹುದಿನಗಳ ಬೇಡಿಕೆಯು ಈಡೇರಿದಂತಾಗಿದೆ. ಕಳೆದ ಮೂರು ಅವಧಿಯಲ್ಲಿ ಯಾವುದೇ ಸರ್ಕಾರ ಬಂದರೂ ಜಿಲ್ಲೆಗೆ ಸಚಿವ ಸ್ಥಾನ ಗೌಣವಾಗಿತ್ತು. ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ನ ವೆಂಕಟರಾವ್ ನಾಡಗೌಡ ಸಚಿವರಾಗಿದ್ದರೂ ಬಹುಕಾಲ ಉಳಿಯದ ಕಾರಣಕ್ಕೆ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬೇಡಿಕೆ ಬಲವಾಗಿ ಕೇಳಿ ಬರುತ್ತಿತ್ತು.
undefined
ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಹೊಸ ಸರ್ಕಾರದ ಸಚಿವ ಸಂಪುಟ ರಚನೆ ಕರಸತ್ತಿನಲ್ಲಿ ಕೈ ನಾಯಕರ ಕೃಪೆಯಿಂದ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನದ ಗ್ಯಾರಂಟಿ ಲಭಿಸಿದಂತಾಗಿದೆ. ಮೊನ್ನೆ ತನಕ ಸಚಿವರ ಸಂಭವನೀಯ ಪಟ್ಟಿಯಲ್ಲಿ ರಾಯಚೂರು ಜಿಲ್ಲೆ ಹೆಸರೇ ಕಣ್ಮರೆಯಾಗಿತ್ತು. ಆದರೆ, ಶುಕ್ರವಾರ ದಿಢೀರ್ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಹೆಸರು ಸಂಭವನೀಯ ಪಟ್ಟಿಯಲ್ಲಿ ಸೇರ್ಪಡೆಯಾಗಿ ಶನಿವಾರ 24 ಜನ ಜನರ ಜೊತೆಗೆ ಬೋಸರಾಜು(NS Boaraju) ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದರ ಮುಖಾಂತರ ಅಚ್ಚರಿಯ ಜೊತೆಗೆ ಆನಂದವನ್ನುಂಟು ಮಾಡಿದೆ.
ರಾಯಚೂರು: ಟಿಕೆಟ್ ಕೈ ತಪ್ಪಿದರೂ ಸಚಿವ ಸ್ಥಾನ ಗಿಟ್ಟಿಸಿ ಅಚ್ಚರಿ ಮೂಡಿಸಿದ ಎನ್‌ಎಸ್ ಬೋಸರಾಜು!
ನಾಲ್ಕು ಜನ ಶಾಸಕರಿಲ್ಲ ಸ್ಥಾನ:
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆ ಏಳು ಕ್ಷೇತ್ರಗಳ ಪೈಕಿ ಕಾಂಗ್ರೆಸ್ನಿಂದ ನಾಲ್ಕು ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದ ಬಸನಗೌಡ ದದ್ದಲ್, ಮಾನ್ವಿಯ ಜಿ.ಹಂಪಯ್ಯ ನಾಯಕ, ಸಿಂಧನೂರಿನ ಹಂಪನಗೌಡ ಬಾದರ್ಲಿ ಮತ್ತು ಮಸ್ಕಿಯ ಆರ್.ಬಸನಗೌಡ ತುರ್ವಿಹಾಳ ಅವರು ಜಾತಿ ಬಲ ಮತ್ತು ಅನುಭವ ಹೊಂದಿರುವ ಸಹ ಸಚಿವ ಸಂಪುಟದಲ್ಲಿ ಸ್ಥಾನವನ್ನು ಪಡೆದಿಲ್ಲ. ಆದರೆ, ಶಾಸಕರಲ್ಲದ, ಎಂಎಲ್ಸಿಯೂ ಆಗದ ಎನ್.ಎಸ್.ಬೋಸರಾಜು ಅವರನ್ನು ಸಚಿವರನ್ನಾಗಿ ಮಾಡಿರುವುದು ಹಾಲಿ ಶಾಸಕರು ಸೇರಿ ಮತ್ತೆ ಕೆಲವರಿಗೆ ಎಲ್ಲಿಲ್ಲದ ಕಸಿವಿಸಿಯನ್ನು ತಂದೊಡ್ಡಿದೆ.
ಪ್ರಬಲರಿಗೆ ಹೈಕಮಾಂಡ್ ಮಣೆ:
ಮಾಜಿ ಶಾಸಕ, ಮಾಜಿ ಎಂಎಲ್ಸಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ, ಪ್ರಸ್ತುತ ಎಐಸಿಸಿ ಕಾರ್ಯದರ್ಶಿ ಜೊತೆಗೆ ತೆಲಂಗಾಣ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿರುವ, ಪಕ್ಷದಲ್ಲಿ ಪ್ರಬಲತೆಯನ್ನು ಹೊಂದಿರುವ ಎನ್.ಎಸ್.ಬೋಸರಾಜು ಅವರನ್ನು ಸಚಿವರನ್ನಾಗಿಸಲು ಪಕ್ಷದ ಹೈಕಮಾಂಡ್, ಅದರಲ್ಲಿಯೂ ನಾಯಕ ರಾಹುಲ್ ಗಾಂಧಿ ಅವರ ಶಿಫಾರಸ್ಸಿನ ಫಲವು ಕೂಡಿದೆ ಎಂದು ಪಕ್ಷದಲ್ಲಿ ಚರ್ಚೆಗಳು ಸಾಗಿವೆ. ಈ ಹಿಂದೆ ಭಾರತ್ ಜೋಡೋ ಯಾತ್ರೆ ರಾಯಚೂರು ಜಿಲ್ಲೆಗೆ ಆಗಮಿಸಿದ್ದ ಸಮಯದಲ್ಲಿ ಅವರು ಶಕ್ತಿ ಪ್ರದರ್ಶನ ತೋರಿದ್ದರು. ರಾಯಚೂರು ನಗರ ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು ಕೊನೆ ಕ್ಷಣದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ತ್ಯಾಗ ಮಾಡಿ, ರಾಯಚೂರು ನಗರ ಮತ್ತು ಮಾನ್ವಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಹೆಗಲನ್ನು ಕೊಟ್ಟು ದುಡಿದಿದ್ದರು. ಮೊದಲಿನಿಂದಲೂ ಸಹ ಬೋಸರಾಜು ಹೈಕಮಾಂಡ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವುದು, ಇದರೊಟ್ಟಿಗೆ ತೆಲಂಗಾಣ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬೋಸರಾಜುಗೆ ಉನ್ನತ ಸ್ಥಾನ-ಮಾನವನ್ನು ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಪುಟ ದರ್ಜೆ ಸಚಿವರಾಗಿ ಬೋಸರಾಜು: ಸಂಭ್ರಮಾಚರಣೆ
ಮಾನ್ವಿ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿಶಾಸಕ ಎನ್.ಎಸ್.ಬೋಸರಾಜು ಶನಿವಾರ ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಹಾಗೂ ಪ್ರವಾಸೋಧ್ಯಮ, ವಿಜ್ಞಾನ, ತಂತ್ರಜ್ಞಾನ ಖಾತೆ ಸಚಿವರಾಗಿ ನೇಮಕಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾನ್ವಿ ಪಟ್ಟಣದ ಬಸವವೃತ್ತ, ವಾಲ್ಮೀಕಿವೃತ್ತ, ಅಂಬೇಡ್ಕರ್‌ವೃತ್ತದ ಬಳಿ ಪಟಾಕಿಗಳನ್ನು ಸಿಡಿಸಿ ಸಾರ್ವಜನಿಕರಿಗೆ ಸಿಹಿಯನ್ನು ಹಂಚಿ ಸಂಭ್ರಮಾಚರಣೆ ಮಾಡಿದರು.
ರಾಯಚೂರು ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಎನ್.ಎಸ್. ಬೋಸರಾಜು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಮಾನ್ವಿ ಕ್ಷೇತ್ರದಿಂದ ಎರಡು ಶಾಸಕರಾಗಿ ಆಯ್ಕೆ ಹಾಗೂ ವಿಧಾನಪರಿಷತ್ ಸದಸ್ಯರಾಗಿ, ಕಾಡಾ ಅಧ್ಯಕ್ಷರಾಗಿ, ಎಚ್‌ಕೆಡಿಬಿ ಅಧ್ಯಕ್ಷ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೊತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಕಾರ್ಯಾದರ್ಶಿಯಾಗಿ ಮತ್ತು ತೆಲಂಗಾಣಾ ಉಸ್ತುವಾರಿಯಾಗಿ ಕಾಂಗ್ರೆಸ್‌ನಲ್ಲಿ 50 ವರ್ಷಗಳಿಂದ ಗುರತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ್ನು ಸತತ 20 ವರ್ಷ ಗೆಲ್ಲಿಸಿಕೊಂಡು ಬಂದಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಮಾನ್ವಿ ಕ್ಷೇತ್ರಕ್ಕೆ 2ನೇ ಸಚಿವ:
ಈ ಹಿಂದೆ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ 3 ಬಾರಿ ಆಯ್ಕೆಯಾಗಿದ್ದ ಬಸವರಾಜೇಶ್ವರಿ ಸಚಿವರಾಗಿ ಬಿಟ್ಟರೆ, ಇದುವರೆಗೂ ಕ್ಷೇತ್ರದಲ್ಲಿ ಯಾರು ಸಚಿವರಾಗಿಲ್ಲ ಮಾನ್ವಿ ಕ್ಷೇತ್ರಕ್ಕೆ ಎನ್.ಎಸ್ ಬೋಸರಾಜುರಿಂದ ಮತ್ತೇ ಸಚಿವ ಸ್ಥಾನ ಸಿಕ್ಕಂತಾಗಿದೆ.
ರಾಯಚೂರು: ಬಿಸಿಲುನಾಡಿನ ಯುವಕ ಐಎಎಸ್‌ಗೆ ಸೆಲೆಕ್ಟ್..!
ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಎಂಎಲ್ಸಿ ಆಗಿದ್ದ ಎನ್.ಎಸ್ ಬೋಸರಾಜು ಅವರಿಗೆ ಈವರೆಗೆ ಮಂತ್ರಿಸ್ಥಾನ ದೊರಕಿರಲಿಲ್ಲ. ಇದೀಗ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಅಲ್ಪಸಂಖ್ಯಾತ ಸಮುದಾಯದವರಿಗೆ ಮಣೆಹಾಕಿತ್ತು.
ಮಾನ್ವಿ ಕ್ಷೇತ್ರದ ತಮ್ಮ ಶಿಷ್ಯ ಹಂಪಯ್ಯನಾಯಕರಿಗೆ ಟಿಕೆಟ್ ಕೊಡಿಸಿ, ಅವರನ್ನು ಗೆಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೈಕಮಾಂಡ್‌ಗೆ ರವಾನೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸರ್ಕಾರ ರಚನೆ ವೇಳೆ ಸೂಕ್ತ ಸ್ಥಾನಮಾನದ ಭರವಸೆ ನೀಡಿದಂತೆ ಹೈಕಮಾಂಡ್ ಸಚಿವ ಸ್ಥಾನ ನೀಡಿದೆ.