ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡಬೇಕಾಗುತ್ತೆ? ನವೆಂಬರ್‌ ಕ್ರಾಂತಿ ಬಗ್ಗೆ ಶ್ರೀರಾಮುಲು ಹೇಳಿದ್ದೇನು?

Published : Oct 11, 2025, 08:06 PM IST
B Sriramulu

ಸಾರಾಂಶ

ಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೋ.. ಜನವರಿಯಲ್ಲಿ ಸಂಕ್ರಾಂತಿ ಬರುತ್ತೇನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಗದಗ (ಅ.11): ಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೋ.. ಜನವರಿಯಲ್ಲಿ ಸಂಕ್ರಾಂತಿ ಬರುತ್ತೇನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತೆ.. ಅದು ಗ್ಯಾರಂಟಿ. ಮುಖ್ಯಮಂತ್ರಿಗಳು ಯಾಕೆ ಗಾಬರಿಯಾಗಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ನಮಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ ಅಂತಾ ಶಾಸಕರು ಹೇಳಿದ್ದಾರೆ. ಯಾವುದೇ ಶಾಸಕರಿಗೆ ಗೌರವ ಕೊಡಲ್ಲ, ಅನುದಾನ ಬಿಡುಗಡೆ ಮಾಡಿಲ್ಲ ಎಂದರು.

ರಾಜಕಾರಣಿಗಳಿಗೆ ಗೌರವ ಬಹಳಷ್ಟು ಮುಖ್ಯ ಆಗುತ್ತೆ. ಸಿದ್ದರಾಮಯ್ಯನವರಿಗೆ ಈಗ ಶಾಸಕರ ಮೇಲೆ ಪ್ರೀತಿ ಬಂದಿದೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ಅಂತಾ ಪ್ರೀತಿ ಬಂದಿದೆಯೋ ಗೊತ್ತಿಲ್ಲ. ಒಟ್ಟು ಪ್ರೀತಿ ಬಂದಿದೆ. ದಿಢೀರ್ ಔತಣಕೂಟಕ್ಕೆ ಬರಬೇಕೆಂದು ಸಿಎಂ ಆದೇಶ ಮಾಡಿದ್ದಾರೆ. 13 ನೇ ತಾರೀಕಿನಿಂದ ಔತಣಕೂಟ ಆರಂಭವಾಗುತ್ತೆ‌. ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಆಗುತ್ತೆ ಅಂತಾ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದೆ. ಸಿಎಂ ಔತಣಕೂಟದಲ್ಲಿ ಎಲ್ಲಾ ಚರ್ಚೆ ಆಗೆ ಆಗುತ್ತವೆ. ಶಾಸಕರು-ಸಚಿವರು ಕಡ್ಡಾಯವಾಗಿ ಬರಬೇಕೆಂದು ತೀರ್ಮಾನ ತಗೆದುಕೊಂಡಿದ್ದಾರೆ.

ಕುರ್ಚಿ ಖಾಲಿ ಮಾಡಬೇಕಾಗುತ್ತೆ!

ನೂರಕ್ಕೆ ನೂರರಷ್ಟು ಕ್ರಾಂತಿ ಆಗೇ ಆಗುತ್ತೆ ಅನ್ನೋದು ಬಿಜೆಪಿ ವಾದ. ಸಿದ್ದರಾಮಯ್ಯ ನವೆಂಬರ್‌ನಲ್ಲಿ ಕುರ್ಚಿ ಖಾಲಿ ಮಾಡಬೇಕಾಗುತ್ತೆ. ಡಿಸಿಎಂ ಡಿಕೆಶಿ ಅವರನ್ನ ಮುಖ್ಯಮಂತ್ರಿ ಮಾಡಬೇಕೆಂಬ ಚರ್ಚೆ ನಡೆಯುತ್ತಿವೆ. ಔತಣಕೂಟಕ್ಕೆ ಕ್ಯಾಬಿನೆಟ್ ಮಂತ್ರಿಗಳು ತಪ್ಪಿಸಬಾರದೆಂದು ಆದೇಶ ಮಾಡಿದ್ದಾರೆ. ಬರಲ್ಲ ಎಂದರೆ ಸಚಿವ ಸಂಪುಟದಿಂದ ತಗೆದು ಹಾಕುತ್ತೇನೆಂದು ಬ್ಲಾಕ್ ಮೇಲ್ ಮಾಡಿದ್ದಾರಂತೆ. ಸಿಎಂ ಬ್ಲಾಕ್ ಮೇಲ್ ಮಾಡಿರುವ ಕಾರಣ ಎಲ್ಲರೂ ಹೋಗುತ್ತಿರುವ ಬಗ್ಗೆ ಚರ್ಚೆ ಆಗುತ್ತಿದೆ. ನವೆಂಬರ್‌ನಲ್ಲಿ ಕ್ರಾಂತಿ ಆಗೇ ಆಗುತ್ತೇ. ಜನವರಿಯಲ್ಲಿ ಸಂಕ್ರಾಂತಿ ಆಗೇ ಆಗುತ್ತೆ ನಮ್ಗೆ ಕಾಣುತ್ತಿದೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.

ನಮ್ಮ ಅಧ್ಯಕ್ಷರು ಬದಲಾವಣೆಯಾಗುವ ಪ್ರಶ್ನೆ ಇಲ್ಲ‌. ಅಧ್ಯಕ್ಷ ಸಕ್ರೀಯವಾಗಿ, ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತಿದ್ದಾರೆ. ಓಡುವ ಕುದುರೆಗೆ ಕೆಲಸ ಕೊಟ್ಟಿದ್ದಾರೆ. ಕೆಲಸ ಕೊಟ್ಟಮೇಲೆ ಅವರ ಹಿಂದೆ ಓಡ್ಬೇಕು. ನವೆಂಬರ್ ತಿಂಗಗಳಲ್ಲಿ ಕಾಂಗ್ರೆಸ್‌ನಲ್ಲೇ ಕ್ರಾಂತಿ ಆಗುತ್ತೆ. ನವೆಂಬರ್ ತಪ್ಪಿದರೆ ಜನವರಿಯಲ್ಲಿ ಸಂಕ್ರಾಂತಿಯಾಗುತ್ತೆ. 2028 ಚುನಾವಣೆ ನಡೆದರೆ ಏನು ಮಾಡ್ಬೇಕು ಅನ್ನೋದಷ್ಟೆ ನಮ್ಮ ಗುರಿ. ಕೆಲವೊಮ್ಮೆ ತಪ್ಪು ಅನಿಸಿದ್ದನ್ನ ಮಾಧ್ಯಮದಲ್ಲಿ ಹೇಳಿದ್ದೇನೆ. ಸರಿ ಮಾಡಿದಾಗ ಸರಿ ಅಂತಾ ಹೇಳಿದ್ದೇನೆ.. ಮುನಿಸಿಲ್ಲ.

ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಜಟಾಪಟಿ ವಿಷಯವಾಗಿ ಸಿಎಂ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ. ಮೀಸಲಾತಿ ವಿಷಯವಾಗಿ 50 ಪ್ರತಿಶತ ಮೀರುವಂತಿಲ್ಲ ಅಂತಾ ಸುಪ್ರೀಂ ಕೋರ್ಟ್ ಹೇಳುತ್ತೆ. ಬೇರೆ ರಾಜ್ಯದಲ್ಲಿ ಮಾಡಿದ್ದು, ಆಗ ಪರಿಸ್ಥಿತಿ ಬೇರೆ ಇತ್ತು. ಈಗ ಮೀಸಲಾತಿಗಾಗಿ ಕುಲಶಾಸ್ತ್ರ ಅಧ್ಯಯನವಾಗಬೇಕು. ನನಗೆ ಗೊತ್ತಿರುವಂತೆ ಕರಾವಳಿ ಪ್ರದೇಶದ ಕಾಡು ಕುರುಬರು ಜೇನು ಕುರುಬರು ಎಸ್‌ಟಿಯಲ್ಲಿದ್ದಾರೆ. ಇಷ್ಟು ವರ್ಷ ಸಿಎಂ ಆಗಿದ್ದವರು ಆ ಸಮಾಜಕ್ಕೆ ಏನೂ ಮಾಡಿಲ್ಲ. ಈಗ ಕುರ್ಚಿ ಕಳೆದುಕೊಳ್ಳುವ ಸಂದರ್ಭದಲ್ಲಿ ಸಮಾಜ ಎತ್ತಿಕಟ್ಟುವದು ಎಷ್ಟು ಸರಿ ಎಂದರು.

ಬಿಜೆಪಿಯಲ್ಲಿ ಭ್ರಷ್ಟರನ್ನ ಸ್ವಚ್ಛಗೊಳಿಸುವ ವಾಷಿಂಗ್ ಮಷಿನ್ ಇದೆ ಎಂದಿದ್ದ ಸಚಿವ ಲಾಡ್ ವಿಷಯವಾಗಿ, ಇತ್ತೀಚೆಗೆ ಲಾಡ್ ಹೆಚ್ಚು ಮಾಡಾಡ್ತಿದ್ದಾರೆ. ಎಲ್ಲ ಭಾಷೆಯಲ್ಲಿ ಮಾತಾಡ್ತಾರೆ. ಮಾತನಾಡದಿದ್ರೆ ವರ್ಚಸ್ಸು ಕಡಿಮೆಯಾಗುತ್ತೆ ಅಂತಾ ಲಾಡ್, ಪ್ರಿಯಾಂಕ್ ಖರ್ಗೆ ಅನ್ಕೊಂಡಿದಾರೆ. ಅವರ ತಪ್ಪು ಮಾಡೋದು ಅವರಿಗೆ ಗೊತ್ತಾಗಲ್ಲ. ಕಾರ್ಮಿಕ ಇಲಾಖೆಯಲ್ಲಿ ಏನಾಗ್ತಿದೆ ಅನ್ನೋದು ಅವರಿಗೆ ಗೊತ್ತಿಲ್ಲ. ಬಾಯಿಗೆ ಬಂದಹಾಗೆ ಮಾತಾಡ್ತಾರೆ ಎಂದು ಶ್ರೀರಾಮುಲು ವಾಗ್ದಾಳಿಯನ್ನು ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ