
ನವದೆಹಲಿ: ಇಂದು ಕೂಡ ಲೋಕಸಭೆಯಲ್ಲಿ ಬಾಕಿ ಇದ್ದ ಕೆಲ ಸದಸ್ಯರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರಲ್ಲಿ ಉತ್ತರ ಪ್ರದೇಶದ ಸಮಾಜವಾದಿ ನಾಯಕ ಅಖಿಲೇಶ್ ಕುಟುಂಬದವರೇ ಐವರು ಸಂಸದರಿದ್ದರು ಎಂಬುದು ಅಚ್ಚರಿಯ ವಿಚಾರ. ಸಾಮಾನ್ಯವಾಗಿ ಸಂಸದ ಸ್ಥಾನಕ್ಕೆ ಶಾಸಕ ಸ್ಥಾನಕ್ಕೆ ಒಂದೇ ಕುಟುಂಬದ ಇಬ್ಬರು ಮೂವರಿಗೆ ಸಿಗೋದು ತೀರಾ ಅಪರೂಪ. ಹೀಗಿರುವಾಗ ಅಖಿಲೇಶ್ ಕುಟುಂಬದ ಒಟ್ಟು ಐವರು ಸದಸ್ಯರು ಇಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಚ್ಚರಿ ಮೂಡಿಸಿದರು.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಉತ್ತರ ಪ್ರದೇಶ ಕನೌಜ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದು, ಇಂದು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಇವರ ಪತ್ನಿ ಡಿಂಪಲ್ ಯಾದವ್ ಉತ್ತರ ಪ್ರದೇಶದ ಮೈನ್‌ಪುರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದು, ಅವರು ಕೂಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ನಂತರ ಅಖಿಲೇಶ್ ಯಾದವ್ ಅವರ ಕಸಿನ್ಸ್‌ಗಳಾದ ಧರ್ಮೇಂದ್ರ ಯಾದವ್, ಅಕ್ಷಯ್ ಯಾದವ್, ಆದಿತ್ಯ ಯಾದವ್ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ ಧರ್ಮೇಂದ್ರ ಯಾದವ್ ಅವರು ಉತ್ತರ ಪ್ರದೇಶದ ಅಝಂಗರ್‌ನಿಂದ ಸ್ಪರ್ಧಿಸಿ ಗೆದ್ದಿದ್ದರೆ, ಅಕ್ಷಯ್ ಯಾದವ್ ಫಿರೋಜಾಬಾದ್ ಹಾಗೂ ಆದಿತ್ಯ ಯಾದವ್ ಬದೌನ್‌ನಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಲೋಕಸಭೆಗೆ ಪ್ರವೇಶಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವೂ 37 ಸೀಟುಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವ ನರೇಂದ್ರ ಮೋದಿಯವರ ಕನಸಿಗೆ ತಣ್ಣಿರೇರಚಿತ್ತು.
ಲೋಕಸಭೆಗೆ ಆಯ್ಕೆಯಾದ ನಂತರವೂ ಪ್ರಮಾಣವಚನ ಸ್ವೀಕರ ಮಾಡಲು ಇನ್ನು 7 ಸಂಸದರು ಬಾಕಿ ಇದ್ದಾರೆ. ತಿರುವನಂತರಪುರ ಕಾಂಗ್ರೆಸ್ ಸಂಸದ ಶಶಿ ತರೂರ್, ತೃಣಮೂಲ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹಾ, ದೀಪಕ್ ಅಧಿಕಾರಿ, ಟಿಎಂಸಿಯ ನೂರುಲ್ ಇಸ್ಲಾಂ, ಸಮಾಜವಾದಿ ಪಕ್ಷದ ಅಫ್ಜಲ್ ಅನ್ಸಾರಿ ಹಾಗೂ ಇಬ್ಬರು ಸ್ವತಂತ್ರ ಸಂಸದರು ಪ್ರಮಾಣವಚನ ಸ್ವೀಕರಿಸಲು ಬಾಕಿ ಇದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.