ಭ್ರಷ್ಟಾಚಾರದ ಬಗ್ಗೆ ಸುಮ್ಮನೆ ಮಾತನಾಡಿಲ್ಲ, ನನ್ನ ಬಳಿ ದಾಖಲೆಗಳಿವೆ: ಎಚ್‌ಡಿಕೆ

By Kannadaprabha News  |  First Published Jul 4, 2023, 2:40 AM IST

ವರ್ಗಾವಣೆಗೆ ಕಮಿಷನ್‌ ತೆಗೆದುಕೊಳ್ಳುವ ವಿಚಾರದಲ್ಲಿ ದಾಖಲೆಗಳನ್ನು ಇಡಬೇಕು ಎಂದು ಒತ್ತಾಯಿಸಿದ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ‘ಮಂಗಳವಾರ ಬೆಳಗ್ಗೆ ದಾಖಲೆ ಕೊಡುತ್ತೇನೆ’ ಎಂದು ಚಾಟಿ ಬೀಸಿದ್ದಾರೆ. 


ಬೆಂಗಳೂರು (ಜು.04): ವರ್ಗಾವಣೆಗೆ ಕಮಿಷನ್‌ ತೆಗೆದುಕೊಳ್ಳುವ ವಿಚಾರದಲ್ಲಿ ದಾಖಲೆಗಳನ್ನು ಇಡಬೇಕು ಎಂದು ಒತ್ತಾಯಿಸಿದ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ‘ಮಂಗಳವಾರ ಬೆಳಗ್ಗೆ ದಾಖಲೆ ಕೊಡುತ್ತೇನೆ’ ಎಂದು ಚಾಟಿ ಬೀಸಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ನಾನು ಸುಮ್ಮನೆ ಮಾತನಾಡಿಲ್ಲ. ನನ್ನ ಬಳಿ ದಾಖಲೆಗಳಿವೆ. ಸರ್ಕಾರದ ಸಚಿವರು ದಾಖಲೆ ಇಟ್ಟು ಮಾತನಾಡಿ ಎಂದಿದ್ದಾರೆ. ಸುಮ್ಮನೆ ನನ್ನ ಕೆಣಕಬೇಡಿ, ಮಂಗಳವಾರವೇ ಸಭಾಧ್ಯಕ್ಷರ ಮುಂದೆ ದಾಖಲೆ ಇಡಲು ಸಿದ್ದ ಎಂದು ಸವಾಲು ಹಾಕಿದ್ದಾರೆ.

ದಾಖಲೆಗಳನ್ನು ಒದಗಿಸಿದ ಬಳಿಕ ಅದಕ್ಕೂ ನಮ್ಮ ಕಾಂಗೆಸ್‌ ಪಕ್ಷದ ಸಚಿವರು ನಿದ್ದೆಗೆಡಬೇಕಾಗುತ್ತದೆ. ಇನ್ನೂ ಸರ್ಕಾರ ಬಂದು ಎರಡು ತಿಂಗಳು ಕಳೆದಿಲ್ಲ. ಈಗಲೇ ಈ ಮಟ್ಟದ ಭ್ರಷ್ಟಾಚಾರಕ್ಕೆ ಇಳಿದರೆ ಹೇಗೆ? ನಾನು ಮಾಡಿದ ಆರೋಪಗಳಿಗೆ ದಾಖಲೆಗಳಿವೆ. ನನ್ನ ಹೇಳಿಕೆಗಳಿಗೆ ಕಾಂಗ್ರೆಸ್‌ ಶಾಸಕರೇ ಖುಷಿಪಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ನನ್ನ ಕೊನೆ ಚುನಾವಣೆ ಎಂದು ಹೇಳಿಕೊಂಡಿದ್ದರು. ಈ ಹಂತದಲ್ಲಿ ಜನರಿಗೆ ಒಳ್ಳೆಯದನ್ನು ಮಾಡಿ ಹೋಗಬೇಕಲ್ಲವೇ ಎಂದು ಕಿಡಿಕಾರಿದರು. ಸರ್ಕಾರ ಈ ರೀತಿಯಾಗಿ ನಡೆದುಕೊಂಡರೆ ಇತಿಹಾಸದಲ್ಲಿ ಸರ್ಕಾರ ರಚನೆ ಮಾಡಿ ಏನು ಹೆಸರು ಉಳಿಸಿಕೊಳ್ಳುತ್ತಾರೆ. ಅಭಿವೃದ್ಧಿ ಕೆಲಸಕ್ಕಿಂತ ಹೆಚ್ಚಾಗಿ ಕಮಿಷನ್‌ನಲ್ಲಿಯೇ ತೊಡಗಿದೆ ಎಂದು ಟೀಕಿಸಿದರು.

Tap to resize

Latest Videos

ಬಿಜೆಪಿ 605 ಭರ​ವ​ಸೆ​ಗ​ಳಲ್ಲಿ ಎಷ್ಟು ಈಡೇ​ರಿ​ಸಿ​ದೆ?: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಪ್ರಶ್ನೆ

ವರ್ಗಾವಣೆಗೆ ಸಿಂಡಿಕೇಟ್‌: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ‘ವೈಎಸ್‌ಟಿ’ ತೆರಿಗೆ ಶುರುವಾಗಿದೆ ಎಂದು ಆರೋಪಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವರ್ಗಾವಣೆ ಸಿಂಡಿಕೇಟ್‌ ಸಂಬಂಧ ಸರ್ಕಾರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಒಂದೂವರೆ ತಿಂಗಳಲ್ಲಿ ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ಇಲಾಖಾವಾರು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆಯಾಗುತ್ತಿದೆ. ಸಾರಿಗೆ ಮತ್ತು ಕಂದಾಯ ಇಲಾಖೆಗಳ ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸಲು ಸಿಂಡಿಕೇಟ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ’ ಎಂದು ಅವರು ಆಪಾದಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ಜೆಡಿಎಸ್‌ ಶಾಸಕಾಂಗ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕುವುದಾಗಿ ಹೇಳಿಸಿದ ಸರ್ಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್‌ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿ ಹುದ್ದೆಗೂ ದರ ನಿಗದಿ ಮಾಡಲಾಗಿದೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ದ.ಕ ಜಿಲ್ಲೆ ಭಾರೀ ಮಳೆ ಸಾಧ್ಯತೆ: ತಹಶೀಲ್ದಾರ್‌ಗಳಿಗೆ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರ: ಡಿಸಿ ಆದೇಶ

30 ಲಕ್ಷ ರು. ಬೇಡಿಕೆ: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಿಂಡಿಕೇಟ್‌ ಸಿದ್ಧ ಮಾಡಿಕೊಟ್ಟಿರುವ ಪಟ್ಟಿಯ ಕಡತ ಇಲಾಖೆಯ ಆಯುಕ್ತರ ಮುಂದೆ ಸಹಿಗಾಗಿ ಕಾಯುತ್ತಾ ಬಿದ್ದಿದೆ. ಅವರು ಸಹಿ ಹಾಕುತ್ತಾರೋ ಅಥವಾ ಏನು ಮಾಡುತ್ತಾರೋ ಕಾದು ನೋಡಬೇಕಿದೆ. ಕಾಸಿಲ್ಲದೆ ಪೋಸ್ಟ್‌ ಇಲ್ಲ ಎನ್ನುವುದನ್ನು ಈ ಸರ್ಕಾರ ನೀತಿಯನ್ನಾಗಿ ಮಾಡಿಕೊಂಡಿದೆ ಎಂದು ಹರಿಹಾಯ್ದರು. ಸದಾ ಮುಖ್ಯಮಂತ್ರಿಯ ಹಿಂದೆ-ಮುಂದೆ ಮತ್ತು ಮುಖ್ಯಮಂತ್ರಿಗಳ ಕಚೇರಿ ಸುತ್ತಮುತ್ತ ಓಡಾಡಿಕೊಂಡಿರುವ ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಕೊಟ್ಟರೆ, ಬರೀ ಪತ್ರ ಬೇಡ, 30 ಲಕ್ಷ ರು. ನೀಡಬೇಕು ಎಂದು ಮುಖ್ಯಮಂತ್ರಿ ಕಚೇರಿಯಲ್ಲಿರುವ ಮಹಾಶಯರು ಹೇಳುತ್ತಾರಂತೆ. ಇದು ಈ ಸರ್ಕಾರದ ಹಣೆಬರಹ ಎಂದು ಲೇವಡಿ ಮಾಡಿದರು.

click me!