ಲೋಕಸಭೆ ಚುನಾವಣೆ 2024: ಬೆಳಗಾವಿಯಲ್ಲಿ ಬಿಜೆಪಿಗರಿಂದಲೇ ವಿರೋಧ, ಶೆಟ್ಟರ್ ಹೇಳಿದ್ದಿಷ್ಟು

By Kannadaprabha News  |  First Published Mar 18, 2024, 2:00 AM IST

ಸ್ವತಃ ಪ್ರಭಾಕರ ಕೋರೆ ಅವರೊಂದಿಗೆ ಮಾತನಾಡಿದ್ದೇನೆ. ಅವರು ನಿಮ್ಮ ವಿಷಯ ಚರ್ಚೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮನೆಗೆ ಬಂದರೆ ಬೇಡ ಎನ್ನಲು ಬರುತ್ತದೆಯೇ ಎಂದು ಹೇಳಿದರು. ಪ್ರಭಾಕರ ಕೋರೆ ಆಗಲಿ, ಬಂದಂತಹ ಯಾರಾದರೂ ನೇರವಾಗಿ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಶೆಟ್ಟರ್‌


ಹುಬ್ಬಳ್ಳಿ(ಮಾ.18): ಬೆಳಗಾವಿಯಲ್ಲಿ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ. ಯಾವುದೇ ಬಗೆಯ ಅಸಮಾಧಾನ ಯಾರಲ್ಲೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವತಃ ಪ್ರಭಾಕರ ಕೋರೆ ಅವರೊಂದಿಗೆ ಮಾತನಾಡಿದ್ದೇನೆ. ಅವರು ನಿಮ್ಮ ವಿಷಯ ಚರ್ಚೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮನೆಗೆ ಬಂದರೆ ಬೇಡ ಎನ್ನಲು ಬರುತ್ತದೆಯೇ ಎಂದು ಹೇಳಿದರು. ಪ್ರಭಾಕರ ಕೋರೆ ಆಗಲಿ, ಬಂದಂತಹ ಯಾರಾದರೂ ನೇರವಾಗಿ ಹೇಳಿದ್ದಾರೆಯೇ ಎಂದು ಶೆಟ್ಟರ್‌ ಪ್ರಶ್ನಿಸಿದರು.

Tap to resize

Latest Videos

ಸಾಮಾನ್ಯರಿಗೆ ಉನ್ನತ ಸ್ಥಾನ ನೀಡುವ ಪಕ್ಷ ಬಿಜೆಪಿ: ಮಾಜಿ ಸಚಿವ ಹಾಲಪ್ಪ ಆಚಾರ್‌

ಯಾರೊಬ್ಬರೂ ನನ್ನ ಬಗ್ಗೆ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿಲ್ಲ. ಹೀಗಾಗಿ ಆ ಬಗ್ಗೆ ನಾನು ಹೇಗೆ ರಿಯಾಕ್ಟ್ ಮಾಡಲಿ? ಕಳೆದ ಮೂರ್ನಾಲ್ಕು ದಿನಗ ಳಿಂದ ಬೆಳಗಾವಿಯ ಪ್ರತಿಯೊಬ್ಬ ನಾಯಕರೊಂದಿಗೂ ಸಂಪರ್ಕ ದಲ್ಲಿ ದ್ದೇನೆ, ಹಿರಿ-ಕಿರಿ ಮುಖಂಡರ ಜತೆಗೆ ಫೋನ್ ಮೂಲಕ ಮಾತನಾಡಿದ್ದೇನೆ. ಯಾರೊಬ್ಬರೂ ವಿರೋಧ ವ್ಯಕ್ತಪ ಎಲ್ಲರೂ ಸ್ವಾಗತವನ್ನೇ ಕೋರಿದ್ದಾರೆ. ರಣದಲ್ಲಿ ಇಲ್ಲದಿರುವವರು ಸಹ ನನಗೆ ಫೋನ್ ಮಾಡಿ ಬೆಳಗಾವಿಗೆ ಬನ್ನಿ. ನೀವು ಬಂದರೆ ಒಳ್ಳೆಯ ವಾಗುತ್ತದೆ ಎಂದು ಹೇಳುತ್ತಿ ದ್ದಾರೆ ಎಂದು ತಿಳಿಸಿದರು.

ಹೀಗಾಗಿ ನಾನು ಬೆಳ ಗಾವಿ ಹೋಗುವ ವಿಷಯ ದಲ್ಲಿ ಯಾವುದೇ ಭಿನ್ನಮ ತವೂ ಇಲ್ಲ. ಮತ್ತೊಂದೂ ಇಲ್ಲ ಎಂದ ಅವರು, ಬೆಳ ಗಾವಿಗೆ ಸ್ಪರ್ಧಿಸು ವಂತೆ ವರಿಷ್ಠರು ಹೇಳಿದರು. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೇನೆ. 3ನೆಯ ಪಟ್ಟಿಯಲ್ಲಿ ನನ್ನ ಹೆಸರು ಬಿಡುಗಡೆ ಯಾಗಲಿದೆ, ಬಹುಶಃ ಭಾನುವಾರ ವ್ಯಕ್ತಪಡಿಸಿದರು. 

ಬೆಳಗಾವಿ ನಮಗೆ ಮೊದಲಿನಿಂದಲೂ ಟಚ್ ಇದೆ. ವಿರೋಧ ಪಕ್ಷದ ನಾಯ ಕನಾಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ಓಡಾಡಿದ್ದೇನೆ. ಅಲ್ಲೂ ಪಕ್ಷ ಸಂಘಟನೆ ಕೆಲಸ ಮಾಡಿದ್ದೇವೆ. ಅಲ್ಲಿ ತಮಗೆ ಸಂಪೂರ್ಣ ಬೆಂಬಲ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

click me!