ನಾನು ತಪ್ಪು ಮಾಡಿದೆ ಅಂತ ಹೇಳುವ ಯೋಗ್ಯತೆ ಯಾರಿಗೂ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ

By Kannadaprabha News  |  First Published Nov 6, 2024, 9:53 AM IST

ದೇಶದಲ್ಲಿ ಆಡಳಿತ ಮಾಡುವಾಗ ಸಣ್ಣ ತಪ್ಪು ಮಾಡಿಲ್ಲ. ನನ್ನ ಅವಧಿಯಲ್ಲಿ ಒಂದು ತಪ್ಪು ಮಾಡಿದ ಅಂತ ಹೇಳಲು ಯಾರಿಗೂ ಯೋಗ್ಯತೆ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು. 


ಚನ್ನಪಟ್ಟಣ (ನ.06): ದೇಶದಲ್ಲಿ ಆಡಳಿತ ಮಾಡುವಾಗ ಸಣ್ಣ ತಪ್ಪು ಮಾಡಿಲ್ಲ. ನನ್ನ ಅವಧಿಯಲ್ಲಿ ಒಂದು ತಪ್ಪು ಮಾಡಿದ ಅಂತ ಹೇಳಲು ಯಾರಿಗೂ ಯೋಗ್ಯತೆ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು. ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಈಗ ನನಗೆ ಯಾವುದೇ ಅಧಿಕಾರ ಇಲ್ಲ. ಎಲ್ಲ ಅಧಿಕಾರ ಕಳೆದುಕೊಂಡಿದ್ದೇನೆ. ಸಾಮಾನ್ಯ ರೈತನ ಮಗನಾಗಿ ಉಳಿದಿದ್ದೇನೆ. ನಿಮಗೆ ಏನನ್ನು ಕೊಡಲು ಯೋಗ್ಯತೆ ಇಲ್ಲ ಎಂದರು.

ಅಧಿಕಾರ ಮತ್ತು ಐಶ್ವರ್ಯ ಶಾಶ್ವತ ಅಲ್ಲ. 92ರ ವಯಸ್ಸಿನಲ್ಲಿ ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ನೋಡೋದೇ ಒಂದು ಸಂತೋಷ. ಎರಡು ಚುನಾವಣೆಗಳ್ಲಿಲ ಸೋತಿರುವ ನಿಖಿಲ್ ಜನರ ಒತ್ತಾಯದಿಂದ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯಲ್ಲಿ ಏನು ನಡೆಯಲಿದೆ ಅನ್ನೋದನ್ನು ನೋಡಲು ಬಂದಿದ್ದೇನೆ. ನಿಖಿಲ್ ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ನಿಖಿಲ್ ಅವರನ್ನು ವಿಧಾನಸಭೆಗೆ ಕಳುಹಿಸುವ ಯಾವ ಸಂಶಯವೂ ಇಲ್ಲ. ಇದು ನನ್ನ ಪ್ರಾಮಾಣಿಕ ಮಾತು. ನನಗೆ ವಯಸ್ಸಿನ ಪ್ರಶ್ನೆ ಅಲ್ಲ, ಪಕ್ಷದ ಪ್ರಶ್ನೆ. ನಾನು ಈ ಪಕ್ಷ ಉಳಿಸಲು ಬಂದಿದ್ದೇನೆ ಎಂದರು.

Tap to resize

Latest Videos

undefined

ಮನುಷ್ಯತ್ವ ಇರುವ ಭಾವ ಜೀವಿಗಳಿಗಷ್ಟೇ ಕಣ್ಣೀರು ಬರುತ್ತೆ: ನಿಖಿಲ್ ಕುಮಾರಸ್ವಾಮಿ

ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಿಂದ ಹೊರ ಕಳುಹಿಸುವ ಡಿ.ಕೆ.ಶಿವಕುಮಾರ್ ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಅವರ ಹೆಸರು ತೆಗೆದುಕೊಂಡು ಮಾತನಾಡುವುದಿಲ್ಲ. ಇಗ್ಗಲೂರು ಕಟ್ಟಿದವರು ಯಾರು ? ಗೋಲಿಬಾರ್ ನಿಂದ ಸತ್ತರಲ್ಲ ? ಆ ಪ್ರಕರಣಗಳನ್ನು ಸ್ವಲ್ಪ ಸ್ಮರಿಸಿಕೊಳ್ಳಲು ಹೇಳಿ ಎಂದು ಟಾಂಗ್ ನೀಡಿದರು.

ನಿಖಿಲ್ ತನ್ನ ಭವಿಷ್ಯ ರೂಪಿಸಿಕೊಳ್ಳಲು ಉಪಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ನಿಂತಿದ್ದಾರೆ. ಯಾರು ಯೋಗ್ಯರು, ಯಾರು ಅಯೋಗ್ಯರು ಅನ್ನೋದನ್ನು ನಾನು ಚರ್ಚೆ ಮಾಲ್ಲ. ಅದನ್ನು ಜನರೇ ತೀರ್ಮಾನ ಮಾಡುತ್ತಾರೆ.
- ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು.

Muda Case: ಇಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಪೊಲೀಸರ ಗ್ರಿಲ್‌!

ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಮಾದರಿಯಲ್ಲಿಯೇ ರಾಮನಗರ - ಚನ್ನಪಟ್ಟಣ ನಗರಗಳು ಬೆಳೆಯಲಿದೆ. ಇದನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡುವ ಅಗತ್ಯವಿಲ್ಲ. ಅಷ್ಟಕ್ಕೂ ನಾನು ಮಣ್ಣಾಗೋದು ಇದೇ ನೆಲದಲ್ಲಿ. ಕನಕಪುರ ಸ್ನೇಹಿತರು ನನ್ನನ್ನು ಚನ್ನಪಟ್ಟಣ ಬಿಟ್ಟು ಹೋಗಲು ಹೇಳಿದ್ದಾರೆ. ನಾನು ಅಂತಹ ತಪ್ಪು ಏನು ಮಾಡಿದ್ದೇನೆ. ಜನರನ್ನು ಬಿಟ್ಟು ಬೇರೆ ಯಾರು ನನ್ನನ್ನು ಇಲ್ಲಿಂದ ಹೊರ ಕಳುಹಿಸಲು ಸಾಧ್ಯವಿಲ್ಲ. ನಾನು ಏನೇನು ಮಾಡಿದೆ ಎಂಬುದರ ಪಟ್ಟಿ ಕೊಡಬಲ್ಲೆ. ಆದರೆ, ಇಲ್ಲಿ ಸಂಘರ್ಷ ತಂದಿಲ್ಲ, ಜನರ ಮಧ್ಯೆ ಬಿರುಕು ಮೂಡಿಸಿಲ್ಲ.
- ಕುಮಾರಸ್ವಾಮಿ, ಕೇಂದ್ರ ಸಚಿವರು

click me!