ಬಿಜೆಪಿ ಸರಕಾರದ ವಿರುದ್ದ ರಾಹುಲ್ ಗಾಂಧಿ ಭ್ರಷ್ಟಾಚಾರದ ಆರೋಪ ಹೊರಿಸಿರುವುದಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಹುಲ್ ಗಾಂಧಿಯವರನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ (ಅ.2): ಬಿಜೆಪಿ ಸರಕಾರದ ವಿರುದ್ದ ರಾಹುಲ್ ಗಾಂಧಿ ಭ್ರಷ್ಟಾಚಾರದ ಆರೋಪ ಹೊರಿಸಿರುವುದಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಹುಲ್ ಗಾಂಧಿಯವರನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. 2004 ರಿಂದ 2014 ರ ವರೆಗೆ ಒಂದು ದಿನವು ಹಗರಣ ಇಲ್ಲದೆ ಸರ್ಕಾರ ನಡೆದಿದೆ ಎನ್ನುವುದು ಇಲ್ಲ. ಕಾಂಗ್ರೆಸ್ ನವರು ಹಗರಣದಿಂದಾಗಿಯೇ ಸರ್ಕಾರ ಕಳೆದುಕೊಂಡರು. ವೀಸಾ ನೀಡುವ ವಿಚಾರದಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪದಲ್ಲಿ ಹಲವರಿಗೆ ಶಿಕ್ಷೆ ಕೂಡಾ ಆಗಿದೆ. ಕರ್ನಾಟದಲ್ಲಿ ಸುಮ್ಮನೆ ಹವಾ ಕ್ರಿಯೇಟ್ ಮಾಡುವ ಉದ್ದೇಶದಿಂದ, ರಾಹುಲ್ ಗಾಂಧಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ದೇಶದ ಹಲವು ಕಡೆಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಜನರು ಬಿಜೆಪಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಬೇಜವಾಬ್ದಾರಿಯಿಂದ ಜ್ಞಾನ ಇಲ್ಲದೇ ಆರೋಪ ಮಾಡುವುದು ಹೇಳಿಕೆ ಕೊಡುವುದು ಸರಿಯಲ್ಲ. ರಾಹುಲ್ ಗಾಂಧಿ ಯಾರೋ ಬರೆದುಕೊಟ್ಟಿದ್ದನ್ನು ಓದುತ್ತಾರೆ. ಬರೆದುಕೊಟ್ಟ ಚೀಟಿ ಕಸಿದುಕೊಂಡರೆ ಅವರು ಓದಿರೋದೇ ಅವರಿಗೆ ನೆನಪಿರಲ್ಲ. ಅಂಥವರವನ್ನು ಗಂಭೀರವಾಗಿ ತೆಗೆದುಕೊಂಡು ನಮಗೇಕೆ ಪ್ರಶ್ನೆ ಕೇಳ್ತಿರಾ? ಎಂದು ರಾಹುಲ್ ಗಾಂಧಿಯನ್ನು ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
Bharat Jodo Yatra: ಕರ್ನಾಟಕದ್ದು ದೇಶದಲ್ಲೇ ಭ್ರಷ್ಟ ಸರ್ಕಾರ: ರಾಹುಲ್ ಗಾಂಧಿ
ಭಾರತ ಜೋಡೊ ಮೊದಲು, ಭಾರತ ತೋಡೊ ಮಾಡುವ ಭೇಟಿ ಮಾಡ್ತಿದ್ದಾರೆ. ದೇಶದಲ್ಲಿ ಹಲವು ಕಡೆ ಕಾಂಗ್ರೇಸ್ ತೋಡೊ ಆಗ್ತಿದೆ.
ಮೊದಲು ಕಾಂಗ್ರೆಸ್ ಜೋಡೊ ಕೆಲಸ ಮಾಡಲಿ. ಹಲವು ಕಡೆಗಳಲ್ಲಿ ಕಾಂಗ್ರೆಸ್ ಚೋಡೊ ಆಗ್ತಿದೆ. ಕಾಂಗ್ರೆಸ್, ಭ್ರಷ್ಟಾಚಾರದ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡಿ ಬೆಳೆಸಿದ್ದಾರೆ. ಕಾಂಗ್ರೆಸ್ ಹುಲ್ಲಿನಂತೆ ಭ್ರಷ್ಟಾಚಾರ ಬೆಳೆಯುತ್ತಿದೆ. ಕಾಂಗ್ರೆಸ್ ಗೆ ಹಾಗೂ ರಾಹುಲ್ ಗಾಂಧಿಯವರಿಗೆ ಭಾಷಣ ಬರೆದು ಕೊಡುವವರಿಗೆ ಹೇಳ್ತೀನಿ ಸರಿಯಾಗಿ ಬರೆದು ಕೊಡಿ ಅಂತ. ಮೊದಲೆ ಅವರನ್ನು ಜನ ಸಿರಿಯಸ್ ಆಗಿ ತಗೊಳಲ್ಲ ಮತ್ತಷ್ಟು ನಗೆಪಾಟಲಿಗೆ ಈಡಾಗ್ತಾರೆ.
ರಾಹುಲ್‌ಗಾಗಿ ಬಳ್ಳಾರಿಯಲ್ಲಿ ವಿಶೇಷ ಸುದರ್ಶನ ಹೋಮ: ಗಣಿನಾಡಲ್ಲಿ ಭಾರತ್ ಜೋಡೋ ಬೃಹತ್ ಸಮಾವೇಶ
ಸಿ ಪಿ ಯೋಗೇಶ್ವರ ಕಾರಿನ ಮೇಲೆ ಕಲ್ಲು ಎಸೆತ ಪ್ರಕರಣ: ರಾಮನಗರದಲ್ಲಿ ಸಿ ಪಿ ಯೋಗೇಶ್ವರ ಅವರ ಕಾರಿನ ಮೇಲೆ ಕಲ್ಲು ಎಸೆತ ಮಾಡಿದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನ ಯಾರೆ ಮಾಡಿದರೂ ಸರಿಯಲ್ಲ. ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಇರಬಹುದು ಇಂತಹ ಕೆಲಸ ಮಾಡಬಾರದು. ಜೆಡಿಎಸ್ ನವರು ಇದನ್ನ ಮಾಡಿದ್ದು ಸರಿಯಲ್ಲ ಎಂದರು.