* ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನ ಭೇಟಿಯಾದ ಸಿದ್ದರಾಮಯ್ಯ
* ದೆಹಲಿಯ ಜನಪಥ್ ರಸ್ತೆಯಲ್ಲಿರುವ ನಿವಾಸದಲ್ಲಿಸೋನಿಯಾ ಜತೆ ಸಿದ್ದು ಮಹತ್ವದ ಚರ್ಚೆ
* ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸಿದ್ದರಾಮಯ್ಯಗೆ ಆಹ್ವಾನ ಕೊಟ್ರಾ ಸೋನಿಯಾ?
* ಸೋನಿಯಾ ಭೇಟಿ ಬಳಿಕ ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ
ನವದೆಹಲಿ, (ಅ.05): ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷಧ ನಾಯಕ ಸಿದ್ದರಾಮಯ್ಯ(siddaramaiah) ಅವರು ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ.
ಇಂದು (ಅ.05) ಬೆಳಿಗ್ಗೆ ನವದೆದೆಹಲಿಗೆ (New Delhi) ಭೇಟಿ ನೀಡಿದ ಸಿದ್ದು, ಜನಪಥ್ ರಸ್ತೆಯಲ್ಲಿರುವ ನಿವಾಸದಲ್ಲಿ ಸೋನಿಯಾ ಗಾಂಧಿಯವರೊಂದಿಗೆ (Sonia Gandhi) ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇನ್ನು ಈ ಬಗ್ಗೆ ಸಿದ್ದರಾಮಯ್ಯ ಸಹ ಸ್ಪಷ್ಟನೆ ಕೊಟ್ಟಿದ್ದು, ಅದು ಈ ಕೆಳಗಿನಂತಿದೆ.
ರೈತರ ಹತ್ಯೆ ಕೇಸ್: ಬಿಜೆಪಿ ತನ್ನ ತಾಲಿಬಾನಿ ಮನಸ್ಥಿತಿಯನ್ನು ಬೆತ್ತಲು ಮಾಡಿಕೊಳ್ಳುತ್ತಿದೆ ಎಂದ ಸಿದ್ದು
ಸೋನಿಯಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಂಯ್ಯ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನನ್ನ ಬಳಿ ರಾಷ್ಟ್ರ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಅವರ ಬಳಿ ಕೇವಲ ಕರ್ನಾಟಕ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಷ್ಟ್ರ ರಾಜಕಾರಣಕ್ಕೆ ಸೋನಿಯಾಗಾಂಧಿ ನನ್ನ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ರಾಹುಲ್‌ಗಾಂಧಿ ಅವರು ಪ್ರಧಾನ ಕಾರ್ಯದರ್ಶಿ ಆಗು ಎಂದಿದ್ದರು, ನಾನೇ ನಿರಾಕರಿಸಿದ್ದೆ. ನಾನು ರಾಜ್ಯ ರಾಜಕಾರಣದಲ್ಲಿ ಕಂಪರ್ಟ್ ಆಗಿದ್ದೇನೆ. ಹಿಂದೆ ಕಾರ್ಯಕಾರಿ ಸಮಿತಿಗೂ ರಾಜೀನಾಮೆ ನೀಡಿದ್ದೆ ಎಂದರು. ಈ ಮೂಲಕ ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎನ್ನುವ ಊಹಾಪೋಹಗಳಿಗೆ ಅವರೇ ತೆರೆ ಎಳೆದರು.