40 ಅಲ್ಲ, 4 ಬಿಜೆಪಿ ಶಾಸಕರನ್ನು ಕರೆದುಕೊಂಡು ಹೋಗಲಿ

By Kannadaprabha News  |  First Published Oct 5, 2021, 8:44 AM IST
  •  ಬಿಜೆಪಿ ಶಾಸಕರು ಸಿಂಹಗಳಿದ್ದಂತೆ. ಅವರು ಮಾರಾಟದ ವಸ್ತುಗಳಲ್ಲ
  • ಅವರಾರ‍ಯರೂ ಕಾಂಗ್ರೆಸ್‌ಗೆ ಹೋಗುವ ಮಾತೇ ಇಲ್ಲ. 40 ಅಲ್ಲ, ನಾಲ್ಕು ಜನ ಶಾಸಕರನ್ನು ಕಾಂಗ್ರೆಸ್‌ ಪಕ್ಷ ಸೆಳೆದು ತೋರಿಸಲಿ

ಕಲಬುರಗಿ (ಅ.05): ಬಿಜೆಪಿ (BJP) ಶಾಸಕರು ಸಿಂಹಗಳಿದ್ದಂತೆ. ಅವರು ಮಾರಾಟದ ವಸ್ತುಗಳಲ್ಲ. ಅವರಾರ‍ಯರೂ ಕಾಂಗ್ರೆಸ್‌ಗೆ (Congress) ಹೋಗುವ ಮಾತೇ ಇಲ್ಲ. 40 ಅಲ್ಲ, ನಾಲ್ಕು ಜನ ಶಾಸಕರನ್ನು ಕಾಂಗ್ರೆಸ್‌ ಪಕ್ಷ ಸೆಳೆದು ತೋರಿಸಲಿ ನೋಡೋಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ವ್ಯಂಗ್ಯವಾಡಿದ್ದಾರೆ. 

ನಲವತ್ತು ಶಾಸಕರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK shivakumar) ಹೇಳುತ್ತಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡವರಷ್ಟೇ ಈ ಮಾತು ಹೇಳಬೇಕಷ್ಟೆ.

Tap to resize

Latest Videos

ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಚಿನ್ನದ ಗಟ್ಟಿ: ಖರ್ಗೆ ಅವರೇ ಈ ಕೂಡಲೇ ಕ್ಷಮೆಯಾಚಿಸಿ, ಈಶ್ವರಪ್ಪ

 ಸಾಯುವ ಪಕ್ಷಕ್ಕೆ ಯಾರಾದರೂ ಹೋಗ್ತಾರಾ? ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ.

 ಕಾಂಗ್ರೆಸ್‌ ಈ ಹಿಂದೆ ಮಾಡಿದ ಕೆಲಸಗಳ ಬಗ್ಗೆ ಪಟ್ಟಿಕೊಡಲಿ, ನಂತರ ನಾವು ಕೊಡುತ್ತೇವೆ. ಅನೇಕ ರಾಷ್ಟ್ರಗಳ ಮುಸ್ಲಿಮರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದರೆ ಕಾಂಗ್ರೆಸ್‌ಗೆ ಭಯವಾಗುತ್ತದೆ ಎಂದರು.

40 ಶಾಸಕರು ಬಿಜೆಪಿಗೆ : 

 

 40 ಜನ ಬಿಜೆಪಿ (BJP) ಶಾಸಕರು ಕಾಂಗ್ರೆಸ್‌ (Congress) ಪಕ್ಷಕ್ಕೆ ಬರ್ತಾರೆ ಎನ್ನುವ ನಿಟ್ಟಿನಲ್ಲಿ ವರಿಷ್ಠರ ಮಟ್ಟದಲ್ಲಿ ಚರ್ಚೆ ಆಗಿರುವುದು ನಿಜ ಎಂದು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ (Satish jarkiholi) ಹೊಸ ಬಾಂಬ್‌ ಸಿಡಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ಅವರ ಪುತ್ರ ರಾಹುಲ್‌ ಜಾರಕಿಹೊಳಿ (Rahul jarkiholi) ಅವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು(Bengaluru) ವರಿಷ್ಠರ ಹಂತದಲ್ಲಿ ಚರ್ಚೆ ನಡೆದಿರೋದು ನಿಜ. ಯಾರು ಎಷ್ಟು ಜನ ಬರ್ತಾರೆ ಅಂತ ನನಗೆ ಮಾಹಿತಿ ಇಲ್ಲ. ಆದರೆ ಶಾಸಕರು ಕಾಂಗ್ರೆಸ್‌ಗೆ ಬರುವ ಬಗ್ಗೆ ಚರ್ಚೆ ಆಗಿದ್ದು ನಿಜ ಎಂದು ಹೇಳಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌(Lakshmi Hebbalkar) ವಿರುದ್ದ ಮಾಜಿ ಶಾಸಕ ಸಂಜಯ್‌ ಪಾಟೀಲ್‌ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸತೀಶ, ಸಂಜಯ್‌ ಪಾಟೀಲ್‌ ಅವರ ಇಂತಹ ಹೇಳಿಕೆಗಳು ಹೊಸದೇನಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎಂದರು. ಇನ್ನೂ ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಅಂತಿಮವಾಗಿ ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

click me!