Karnataka Politics: 'ಕಾಂಗ್ರೆಸ್‌ ಪಕ್ಷದಲ್ಲಿ ಬಣ ಗುಂಪು ಎಂಬುವುದಿಲ್ಲ'

By Kannadaprabha News  |  First Published Feb 17, 2022, 4:09 AM IST

*    ನಮಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ
*    ಕಾಂಗ್ರೆಸ್‌ ಪಕ್ಷದ ಕಚೇರಿ ಉದ್ಘಾಟಿಸಿದ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ
*    ರಾಜ್ಯದಲ್ಲಿ ಕೂಡ ಕಾಂಗ್ರೆಸ್‌ ಸರ್ಕಾರ ಬರುವುದು ನಿಶ್ಚಿತ 
 


ಮುಂಡಗೋಡ(ಫೆ.17):  ಕಾಂಗ್ರೆಸ್‌(Congress) ಪಕ್ಷದಲ್ಲಿ ಬಣ ಮತ್ತು ಗುಂಪು ಎಂಬುವುದಿಲ್ಲ. ನಮಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ. ಬಾಣ ಬಿಡಲು ಕೈಗೆ ಹೆಬ್ಬೆರಳು ಎಷ್ಟು ಮುಖ್ಯವೊ ಉಳಿದ ನಾಲ್ಕು ಬೆರಳು ಕೂಡ ಅಷ್ಟೇ ಮುಖ್ಯ ಎಂದು ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ(Prashant Deshpande) ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷದ ಕಚೇರಿ ಉದ್ಘಾಟಿಸಿ ನೂತನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪಾಟೀಲ ಅವರ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದರು. ಒಂದು ಪಕ್ಷದಲ್ಲಿ ಕೋಟ್ಯಂತರ ಜನ ನಾಯಕರಿದ್ದಾರೆ. ಅವರವರ ಅಭಿಪ್ರಾಯ ವಿಚಾರದಾರೆಗಳು ಬೇರೆ ಬೇರೆ ಇರುತ್ತವೆ. ಅದಕ್ಕೆ ಬಣ ಅಥವಾ ಗುಂಪು ಎನ್ನಲಾಗುವುದಿಲ್ಲ. ಯಾವುದೇ ಅಧಿಕಾರ ಯಾರಿಗೂ ಶಾಶ್ವತವಲ್ಲ. ಇರುವಷ್ಟು ದಿನ ಮಾತ್ರ. ಅವಧಿ ಮುಗಿದ ಬಳಿಕ ಬದಲಾಗುತ್ತಾರೆ. ಆ ಸ್ಥಾನಕ್ಕೆ ಬೇರೆಯವರು ನೇಮಕವಾಗುತ್ತಾರೆ. ಅಪ್ಪ ಅಮ್ಮ, ಅಜ್ಜ ಅಜ್ಜಿ ಎಂಬ ಬಿರುದು ಮಾತ್ರ ಶಾಶ್ವತ. ಬದಲಾವಣೆಯೇ ಜಗದ ನಿಯಮ. ಪಕ್ಷ ನಮಗೆ ನೀಡುವುದು ಮುಖ್ಯವಲ್ಲ ಪಕ್ಷಕ್ಕಾಗಿ ನಾವು ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಪಕ್ಷ ಇದ್ದರೆ ನಾಯಕತ್ವ. ಪಕ್ಷ ತಾಯಿ ಇದ್ದಂತೆ ಹಾಗಾಗಿ ಪಕ್ಷಕ್ಕೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ.

Latest Videos

undefined

Uttara Kannada: ರಾಮನಗುಳಿ-ಡೋಂಗ್ರಿ ತೂಗು ಸೇತುವೆಗೆ ಶಂಕು ಸ್ಥಾಪನೆ, ಸುವರ್ಣ ಇಂಪ್ಯಾಕ್ಟ್

ಒಬ್ಬರಿಂದ ಪಕ್ಷ ಕಟ್ಟಲಾಗುವುದಿಲ್ಲ. ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆ ಮಾಡುವ ಮೂಲಕ ಸರಳ ಹಾಗೂ ಸಜ್ಜನಿಕೆಯ ಭ್ರಷ್ಟಾಚಾರವಿಲ್ಲದ(Corruption) ಹೊಸ ರಾಜಕಾರಣಕ್ಕೆ(Politics) ಚಾಲನೆ ನೀಡಬೇಕಿದೆ. ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ ಆರಂಭಿಸಿ ಮುಂಡಗೋಡ ತಾಲೂಕಿನಲ್ಲಿ 15 ಸಾವಿರ ಜನರನ್ನು ಸದಸ್ಯತ್ವ ಮಾಡುವಂತೆ ಕರೆ ನೀಡಿದರು. ಭೂತ್‌ ಮಟ್ಟದಲ್ಲಿ ಸಮಿತಿ ರಚನೆ ಮಾಡಿಕೊಂಡು ಇತಿಹಾಸ ನಿರ್ಮಾಣ ಮಾಡಬೇಕಿದೆ.
ಜನಪರವಾದ ಯೋಜನೆಗಳ ಮೂಲಕ ಜನರಿಗೆ ಅನುಕೂಲವಾಗಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಇದಕ್ಕೆ ರಾಜ್ಯ(Karnataka) ಹಾಗೂ ದೇಶದಲ್ಲಿ(India) ಬಿಜೆಪಿ(BJP)  ಅಧಿಕಾರದಿಂದ ತೊಲಗಬೇಕು. ಸಿಮೆಂಟ್‌, ಕಬ್ಬಿಣ ಸೇರಿದಂತೆ ಅಗತ್ಯ ವಸ್ತುಗಳ ದರ ಗಗನಕ್ಕೇರಿದ್ದು, ಜನರು ಮನೆ ಕಟ್ಟಲಾಗದೆ ಪರದಾಡುವಂತಾಗಿದೆ.

ಬಿಜೆಪಿ ಸರ್ಕಾರದಲ್ಲಿ ಯಾವುದೇ ಹೊಸ ಯೋಜನೆಗಳು ಬರುತ್ತಿಲ್ಲ. ಶೇ. 30 ರಿಂದ 40 ರಷ್ಟು ಮಾತ್ರ ಕೆಲಸವಾಗುತ್ತಿವೆ. ಉಳಿದ ಶೇ. 60 ಪರ್ಸೆಂಟ್‌ ಎಲ್ಲಿಗೆ ಹೋಗುತ್ತಿದೆ ಎಂಬುವುದು ತಿಳಿಯುತ್ತಿಲ್ಲ. ಸಾವಿರಾರು ಕೋಟಿ ರುಪಾಯಿ ತೆರಿಗೆ(Tax) ಸಂಗ್ರಹವಾಗುತ್ತಿದೆ. ಯಾವುದೇ ಒಂದು ಹೊಸ ಯೋಜನೆ ಇಲ್ಲ. ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ ಅವರು, ಕೊರೋನಾ ಹೆಸರಲ್ಲಿ ಸಂಪಾದನೆ ಮಾಡುತ್ತಿದ್ದಾರೆ. ಹಾಗಾಗಿ ಬಿಜೆಪಿ ತೊಲಗಿಸಬೇಕಿರುವುದು ಅನಿವಾರ್ಯವಾಗಿದೆ. ಇದರ ಮೂಲಕ ಹೊಸ ಅಧ್ಯಾಯ ಆರಂಬಿಸಬೇಕು.

Uttara Kannada: ನಿವೃತ್ತ ಅರಣ್ಯಾಧಿಕಾರಿಯಿಂದ ನೂತನ ಶೈಲಿಯಲ್ಲಿ ಪರಿಸರ ಸಂರಕ್ಷಣೆ..!

ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಉತ್ತರಾಖಂಡ(Uttarakhand), ಗೋವಾ(Goa) ಹಾಗೂ ಪಂಜಾಬ(Punjab) ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕೂಡ ಕಾಂಗ್ರೆಸ್‌ ಸರ್ಕಾರ ಬರುವುದು ನಿಶ್ಚಿತವಾಗಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪಾಟೀಲ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಭಾರತಿ ಪಾಟೀಲ, ಎಂ.ಎನ್‌. ದುಂಡಸಿ, ಜ್ಞಾನದೇವ ಗುಡಿಯಾಳ, ರಾಮಕೃಷ್ಣ ಮೂಲಿಮನಿ, ವಿರಭದ್ರಗೌಡ ಪಾಟೀಲ, ರಾಜಶೇಖರ ಹಿರೇಮಠ, ಪ್ರದೀಪ ಶಿವನಗೌಡ್ರ, ಶಾರದಾ ರಾಥೋಡ, ಪಿ.ಜಿ. ತಂಗಚ್ಚನ, ರಝಾ ಪಠಾಣ, ಲಕ್ಷ್ಮಣ ಬನ್ಸೋಡೆ, ಗೋಪಾಲ ಪಾಟೀಲ, ಆಲೆಹಸನ ಬೆಂಡಿಗೇರಿ, ನಾಗರಾಜ ಹಂಚಿನಮನಿ, ಅಲ್ಲಾವುದ್ದಿನ ಕಮಡೊಳ್ಳಿ, ಜೈನು ಬೆಂಡಿಗೇರಿ ಮುಂತಾದವರು ಉಪಸ್ಥಿತರಿದ್ದರು.
 

click me!