ಮಾಜಿ ಸಿಎಂ ಸಿದ್ದರಾಮಯ್ಯಗೂ ಕೊರೋನಾ ಭೀತಿ: ಮನೆ ಗೇಟಿಗೆ ನೋಟಿಸ್ ಬೋರ್ಡ್..!

By Suvarna NewsFirst Published Jun 24, 2020, 4:02 PM IST
Highlights

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೊರೋನಾ ಭೀತಿ ಶುರುವಾಗಿದ್ದು, ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ.

ಬೆಂಗಳೂರು, (ಜೂನ್.24): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಕೊರೋನಾನಾ ಭೀತಿ ಎದುರಾಗಿದ್ದು, ಏಕಾಏಕಿ ತಮ್ಮ ನಿವಾಸಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಿದ್ದರಾಮಯ್ಯನವರ ನಿವಾಸದ ಬಳಿ ಇರುವ ಗಾಂಧಿಭವನದ ರಸ್ತೆಯಲ್ಲಿ ಓಡಾಡಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

'ಕೊರೋನಾ ಚಿಕಿತ್ಸೆಗೆ ನಿಗದಿಪಡಿಸಿರೋ ದರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ '

ಗಾಂಧಿಭವನ ಸಿದ್ದರಾಮಯ್ಯ ನಿವಾಸದ ಹತ್ತಿರವೇ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಿದ್ದರಾಮಯ್ಯ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಿದ್ದಾರೆ. ಅಲ್ಲದೇ ಮನೆಯ ಗೇಟ್​ ಮೇಲೆ ‘ನಿಷೇಧ’ದ ಬೋರ್ಡ್​ ಕೂಡ ಹಾಕಲಾಗಿದೆ.

ಇನ್ನು ಮುಂದೆ ಸಿದ್ದರಾಮಯ್ಯನವರ ನಿವಾಸಕ್ಕೆ ಸಾರ್ವಜನಿಕರು ಗುಂಪಾಗಿ ಹೋದರೆ ಗೇಟ್​ ಒಳಗೆ ಪ್ರವೇಶ ಇರುವುದಿಲ್ಲ. 

ಬೆಂಗಳೂರಿನಲ್ಲಿ ಕೊರೋನಾ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಏರಿಯಾಗಳನ್ನ ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ರಾಜಕಾರಣಿಗಳ ಕುಟುಂಬದ ಸದಸ್ಯರಿಗೂ ಕೊರೋನಾ ಸೋಂಕು ತಗುಲಿದೆ.

ವ್ಯದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಪತ್ನಿ, ಮಗಳು, ತಂದೆ ಮತ್ತು ಮನೆ ಕೆಲಸ ಮಾಡುವ ಇಬ್ಬರಿಗೆ ಕೊರೋನಾ ಅಟ್ಯಾಕ್ ಆಗಿದೆ. ಅಲ್ಲದೇ ಮಾಗಡಿ ಮಾಜಿ ಶಾಸಕ ಎಚ್‌ಸಿ ಬಾಲಕೃಷ್ಣ ಪುತ್ರಿಗೂ ಸೋಂಕು ವಕ್ಕರಿಸಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!