ಬಿಹಾರ ಚುನಾವಣೆ: ಕೊರೋನಾ ಪೀಡಿತರಿಗೆ ಅಂಚೆ ಮತ ಅವಕಾಶ| ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚುನಾವಣಾ ನಿಯಮಗಳಲ್ಲಿ ಬದಲಾವಣೆ
ನವದೆಹಲಿ(ಜೂ.24): ಕೊರೋನಾ ಸಾಂಕ್ರಾಮಿಕ ರೋಗ ಹರಡಿದ ಬಳಿಕ ಮೊದಲ ಬಾರಿಗೆ ಬಿಹಾರ ರಾಜ್ಯ ಚುನಾವಣೆ ಎದುರಿಸುತ್ತಿದ್ದು, ಕೊರೋನಾ ಪೀಡಿತರು ಅಂಚೆ ಮತ ಚಲಾಯಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚುನಾವಣಾ ನಿಯಮಗಳಲ್ಲಿ ಬದಲಾವಣೆ ತಂದು ಅಂಚೆ ಮತಕ್ಕೆ ಕೇಂದ್ರ ಕಾನೂನು ಸಚಿವಾಲಯ ಅವಕಾಶ ನೀಡಿದೆ. ಚುನಾವಣಾ ಸಿಬ್ಬಂದಿಗಷ್ಟೇ ಸೀಮಿತವಿದ್ದ ಅಂಚೆ ಮತದಾನವನ್ನು ಕಳೆದ ಬಾರಿಯಷ್ಟೇ ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟವಯೋವೃದ್ಧರಿಗೂ ವಿಸ್ತರಿಸಲಾಗಿತ್ತು.
ನಿತೀಶ್ ನಾಯಕತ್ವದಲ್ಲೇ ಬಿಹಾರ ಎಲೆಕ್ಷನ್: ಅಮಿತ್ ಶಾ ಘೋಷಣೆ
ಸದ್ಯ ಈ ಪಟ್ಟಿಗೆ ಕೊರೋನಾ ಸೋಂಕಿತರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಕೊರೋನಾ ಸೋಂಕಿತ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡುವಂತೆ ಚುನಾವಣಾ ಆಯೋಗ ಇತ್ತೀಚೆಗಷ್ಟೆಕಾನೂನು ಸಚಿವಾಲಕ್ಕೆ ಶಿಫಾರಸು ಮಾಡಿತ್ತು.