Karnataka Politics: ನೋ ಡೌಟ್‌ ಜೆಡಿಎಸ್‌ ಬಿಜೆಪಿಯ ಬಿ-ಟೀಮೇ: ಸಿದ್ದರಾಮಯ್ಯ

Kannadaprabha News   | Asianet News
Published : Dec 03, 2021, 07:42 AM ISTUpdated : Dec 03, 2021, 08:03 AM IST
Karnataka Politics: ನೋ ಡೌಟ್‌ ಜೆಡಿಎಸ್‌ ಬಿಜೆಪಿಯ ಬಿ-ಟೀಮೇ: ಸಿದ್ದರಾಮಯ್ಯ

ಸಾರಾಂಶ

*   ದೇವೇಗೌಡರಿಂದ ಅನುಕೂಲ ಸಿಂಧು ರಾಜಕಾರಣ: ಸಿದ್ದು ವಾಗ್ದಾಳಿ *  ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಬಂದಾಗ ಮಾತನಾಡದ ದೇವೇಗೌಡರು  *  ಬಿಜೆಪಿ ಧರ್ಮ ಆಧಾರಿತ ಪಕ್ಷ 

ಬೆಂಗಳೂರು(ಡಿ.03):  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda) ಅವರು ಪ್ರಧಾನಿ ಮೋದಿ(Narendra Modi) ಅವರನ್ನು ಭೇಟಿ ಮಾಡಿದ್ದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಅನುಕೂಲ ಸಿಂಧು ಮತ್ತು ಅವಕಾಶವಾದಿ ರಾಜಕಾರಣ ಎಂದು ಟೀಕಿಸಿದ್ದಾರೆ. ಜತೆಗೆ, ಜೆಡಿಎಸ್‌ ಬಿಜೆಪಿಯ ‘ಬಿ ಟೀಂ’ ಎನ್ನುವುದರಲ್ಲಿ ಈಗ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್‌(Congress) ಸೇರ್ಪಡೆಗೊಂಡ ಜೆಡಿಎಸ್‌ನ ಮಾಜಿ ಎಂಎಲ್‌ಸಿ ಸಿ.ಆರ್‌.ಮನೋಹರ್‌, ಬಿಜೆಪಿಯ(BJP) ಮಾಜಿ ಶಾಸಕ ಎಂ.ನಾಗರಾಜು ಅವರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡ ಬಳಿಕ ಮಾತನಾಡಿದರು.

Belagavi MLC Election: ಕಾಂಗ್ರೆಸ್‌ ಪ್ರಚಾರಕ್ಕೆ ಬೆಂಗಳೂರು ಗೂಂಡಾಗಳು: ಜಾರಕಿಹೊಳಿ

ರಾಜ್ಯದಲ್ಲಿ(Karnataka) ಗೋ ಹತ್ಯೆ ನಿಷೇಧ ಕಾಯ್ದೆ ಬಂದಾಗ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಲಿಲ್ಲ. ಈಗ ಪ್ರಧಾನಿ ಮೋದಿ ಅವರ ಜೊತೆ ಭಾಯಿ ಭಾಯಿ ಅಂತಾರೆ. ಇವರು ಮೋದಿ ಜತೆ ಸೇರಿ ಸರ್ಕಾರ ಮಾಡಿದವರು. ಅವರದ್ದು ಅನುಕೂಲಸಿಂಧು ಮತ್ತು ಅವಕಾಶವಾದಿ ರಾಜಕಾರಣ(olitics). ಇದಕ್ಕೇ ನಾನು ಹೇಳೋದು ಜೆಡಿಎಸ್‌(JDS) ಬಿಜೆಪಿಯ ‘ಬಿ ಟೀಂ’(B Team) ಅಂತ. ಹಾಗೆ ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ. ಆದರೆ, ಈಗ ಇದರಲ್ಲಿ ಅನುಮಾನವೇ ಇಲ್ಲ. ಜೆಡಿಎಸ್‌ ಬಿಜೆಪಿಯ ‘ಬಿ ಟೀಮೇ’ ಎಂದರು.

ಧರ್ಮ ಆಧಾರಿತ ಪಕ್ಷ: 

ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ಧರ್ಮ(Religion) ಆಧಾರಿತ ಪಕ್ಷ. ಬಿಜೆಪಿ ಅಲ್ಪಸಂಖ್ಯಾತರ(Minorities) ವಿರುದ್ಧ ಕೆಂಡಕಾರುತ್ತದೆ. ದೇಶದಲ್ಲಿ ಮುಸ್ಲಿಂ(Muslim), ಕ್ರಿಶ್ಚಿಯನ್‌(Christian) ಸೇರಿ ಬೇರೆ ಬೇರೆ ಧರ್ಮೀಯರು ಅವರದ್ದೇ ಆದ ಧರ್ಮದ ಅನುಸಾರವಾಗಿ ಬದುಕುತ್ತಾರೆ. ಆದರೆ ಇದನ್ನು ಬಿಜೆಪಿ ಸಹಿಸಲ್ಲ. ಹಿಂದುತ್ವದ ಹೆಸರಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ಅವರದ್ದು ರಾಕ್ಷಸೀ ಪ್ರವೃತ್ತಿ. ಜೆಡಿಎಸ್‌ನವರದ್ದು ಕುಟುಂಬ ಮತ್ತು ಅವಕಾಶವಾದಿ ರಾಜಕಾರಣ. ಈ ಕಾರಣಕ್ಕಾಗಿಯೇ ಆ ಎರಡೂ ಪಕ್ಷದ ಅನೇಕ ನಾಯಕರು ಇವತ್ತು ಬೇಷರತ್ತಾಗಿ ಕಾಂಗ್ರೆಸ್‌ ಸೇರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಗಾಳಿ ಆರಂಭವಾಗಿದೆ ಎಂದರು.

ಸಿದ್ದರಾಮಯ್ಯ, ಡಿಕೆಶಿ ಸಮ್ಮುಖ ಕಾಂಗ್ರೆಸ್‌ ಸೇರಿದ ಗೋಪಿಕೃಷ್ಣ ದಂಪತಿ

ತರೀಕೆರೆ:  ಹುಣಸಘಟ್ಟದ ಸಮಾಜ ಸೇವಕರಾದ ಎಚ್‌.ಎಂ. ಗೋಪಿಕೃಷ್ಣ ಮತ್ತು ಪತ್ನಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಸೂಯ ಗೋಪಿಕೃಷ್ಣ ಅವರು ತಮ್ಮ ಬೆಂಬಲಿಗರೊಡನೆ ಗುರುವಾರ ಬೆಂಗಳೂರು ಕೆಪಿಸಿಸಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಮಾಜಿ ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಸಮ್ಮುಖದಲ್ಲಿ ಸಮಾಜ ಸೇವಕರಾದ ಎಚ್‌.ಎಂ.ಗೋಪಿಕೃಷ್ಣ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅನಸೂಯ ಗೋಪಿಕೃಷ್ಣ ಅವರನ್ನುಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡರು.

Karnataka Politics: ನನ್ನ ಶರೀರ ಇರೋವರೆಗೂ ಕೈ, ಕಮಲ ಸೇರಲ್ಲ: ದೇವೇಗೌಡ

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ಮಾತನಾಡಿ, ಸಮಾಜ ಸೇವಕರಾದ ಎಚ್‌.ಎಂ. ಗೋಪಿಕೃಷ್ಣ ಮತ್ತು ಜಿ.ಪಂ. ಮಾಜಿ ಸದಸ್ಯರಾದ ಅನಸೂಯ ಗೋಪಿಕೃಷ್ಣ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಎಚ್‌.ಎಂ.ಗೋಪಿಕೃಷ್ಣ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಕಳೆದ ಬಾರಿ ಅಲ್ಪ ಮತದಿಂದ ಸೋತಿದ್ದರು. ಅವರು ಈಗ ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಅವರ ಶ್ರೀಮತಿಯವರು ಸೇರಿದ್ದಾರೆ ಎಂದು ತಿಳಿಸಿ, ಇಬ್ಬರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸ್ವಾಗತಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಮಾಜ ಸೇವಕರಾದ ಎಚ್‌.ಎಂ. ಗೋಪಿಕೃಷ್ಣ ಅವರು ಕಳೆದ ಬಾರಿ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ತರೀಕೆರೆ ಕ್ಷೇತ್ರದಲ್ಲಿ ಅಪಾರವಾದಂತಹ ಜನಸೇವೆ ಮಾಡಿದ್ದಾರೆ. ಬಹಳ ಕಾಲದಿಂದ ಕಾಂಗ್ರೆಸ್‌ಗೆ ಸೇರುವಂತೆ ಆಹ್ವಾನ ನೀಡಿದ್ದೆ. ಅವರು ಮಡಿವಾಳ ಜನಾಂಗದ ಪ್ರಮುಖ ನಾಯಕರಾಗಿದ್ದಾರೆ. ಎಚ್‌.ಎಂ. ಗೋಪಿಕೃಷ್ಣ ಅವರಿಗೆ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅನಸೂಯ ಗೋಪಿಕೃಷ್ಣ ಅವರಿಗೂ ಕಾಂಗ್ರೆಸ್‌ ಪಕ್ಷಕ್ಕೆ ನಾನು ಸ್ವಾಗತ ಕೋರುತ್ತೇನೆ. ಇವರ ಸೇರ್ಪಡೆಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಆನೆಬಲ ಬಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ರಾಮಲಿಂಗರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!