ಮೈಸೂರು (ಅ.25): ಚಾಮುಂಡೇಶ್ವರಿ (Chamundeshwari) ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು (GT Devegowda) ನನ್ನ ಸಂಪರ್ಕ ಕಳೆದುಕೊಂಡು ಎರಡು ವರ್ಷಗಳು ಕಳೆದಿವೆ. ಪಕ್ಷದಲ್ಲಿ ಉಳಿಯುವುದು ಅಥವಾ ಬಿಡುವುದು ಅವರಿಗೆ ಬಿಟ್ಟವಿಚಾರ. ಉಳಿಯುತ್ತೇನೆ ಎನ್ನುವ ಸಂದರ್ಭ ಬಂದಾಗ ಮುಂದಿನ ಮಾತನ್ನು ಹೇಳುತ್ತೇನೆ. ಈಗ ಅಂತಹ ಮಾತು ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು.
ಮೈಸೂರಿನ (Mysuru) ಪತ್ರಕರ್ತರ ಸಂಘದಿಂದ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ಜಿ.ಡಿ.ಹರೀಶಗೌಡ (GD harish Gowda) ಸ್ನೇಹಿತರು. ಅವರ ಹಂತದಲ್ಲಿ ಏನಾದರೂ ಮಾತುಕತೆ ನಡೆಯುತ್ತಿರಬಹುದು. ಒಂದು ವೇಳೆ ಮಕ್ಕಳು ಹೇಳಿದರೆ ಕೇಳಬೇಕಾಗುತ್ತದೆ. ನಿಖಿಲ್ ಜತೆಗೆ ಹರೀಶ್‌ಗೌಡ, ಮಹದೇವ ಪುತ್ರ ಪ್ರಸನ್ನ (Prasanna), ಪುಟ್ಟರಾಜು (Puttaraju) ಪುತ್ರ ಶಿವರಾಜು ಸಮಕಾಲೀನರು. ಅವರ ಮಟ್ಟದಲ್ಲಿ ಯಾವ ಬೆಳವಣಿಗೆ ನಡೆದಿದೆಯೋ ಎನ್ನುವುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
undefined
ಜಿಟಿಡಿ ರಾಜಕಿಯಕ್ಕಾಗಿ ಸಾ ರಾ ಮಹೇಶ್ ಮಹತ್ವದ ನಿರ್ಧಾರ
ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ (Shrinivas) ಅವರಿಗೆ ಜೆಡಿಎಸ್ ಶಿಬಿರಕ್ಕೆ ಬನ್ನಿ ಎಂದು ದೂರವಾಣಿ ಮೂಲಕ ಆಹ್ವಾನಿಸಿದ್ದೆ. ಬರುತ್ತೇನೆಂದವರು ಬರಲಿಲ್ಲ. ಪಕ್ಷದ ಇಮೇಜ್ ಕಡಿಮೆಯಾಗುತ್ತಿರುವುದರಿಂದ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿರುವ ಮಾತನ್ನು ಕೇಳಿದ್ದೇನೆ. ನಮ್ಮ ಇಮೇಜ್ ಕಡಿಮೆ ಇರುವಾಗ ಪಕ್ಷದಲ್ಲಿ ಯಾಕೆ ಉಳಿಯುತ್ತಾರೆ? ಅದಕ್ಕಾಗಿಯೇ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಾಯಿತು ಎಂದರು.
ಅಪ್ಪಂದಿರ ಅಪಸ್ವರ - ಮಕ್ಕಳ ಸ್ನೇಹ
ಒಂದೇ ಪಕ್ಷದಲ್ಲಿದ್ರು ರಾಜಕೀಯದಲ್ಲಿ ಅಪ್ಪಂದಿರು ಪರಸ್ಪರ ವಿರೋಧಿಗಳು..ಮಕ್ಕಳು ಮಾತ್ರ ಒಳ್ಳೆ ಸ್ನೇಹಿತರು..
ಜಿಟಿ ದೇವೇಗೌಡರು ಜೆಡಿಎಸ್ ಬಿಟ್ಟು ಹೋದರೆ ಪಕ್ಷಕ್ಕೇನೂ ನಷ್ಟವಿಲ್ಲ: ಎಚ್‌ಡಿಕೆ
ಹೌದು...ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಇದೀಗ ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದಿಂದ ಒಂದು ಆಚೆ ಇಟ್ಟಾಗಿದೆ. ಕುಮಾರಸ್ವಾಮಿ ಹಾಗೂ ಜಿಟಿಡಿ ಒಂದೇ ಪಕ್ಷದವರಾಗಿದ್ರೂ ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಮುಖ ಕೆಡಿಸಿಕೊಂಡಿದ್ದಾರೆ. ಆದ್ರೆ, ಈ ಉಭಯ ನಾಯಕರ ಮಕ್ಕಳು ಮಾತ್ರ ಒಳ್ಳೆ ಸ್ನೇಹಿತರಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹಾಗೂ ಜಿಟಿಡಿ ಪುತ್ರ ಹರೀಶ್ ಗೌಡ ಒಟ್ಟಿಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದರು.