* 30 ಸಾವಿರ ಮತಗಳ ಅಂತರದಿಂದ ಸಿಂದಗಿಯಲ್ಲಿ ಗೆಲ್ಲುತ್ತೇವೆ
* ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವನತಿ ಪ್ರಾರಂಭ
* ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿ
ವಿಜಯಪುರ(ಅ.18): ಬಿಜೆಪಿಯವರಿಗೆ(BJP) ಸುಳ್ಳು ಹೇಳಿ ಮೋಸ ಮಾಡುವುದು ಮಾತ್ರ ಗೊತ್ತು ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shiavakumar), ಸಿಂದಗಿ(Sindagi) ಉಪಚುನಾವಣೆಯಲ್ಲಿ(Byelection) ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಹೇಳಿದ್ದಾರೆ.
ಭಾನುವಾರ ಕಾಂಗ್ರೆಸ್(Congress) ಅಭ್ಯರ್ಥಿ ಅಶೋಕ ಮನಗೂಳಿ(Ashok Managooli) ಪರವಾಗಿ ಆಲಮೇಲ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಭರ್ಜರಿ ಪ್ರಚಾರ(Campaign) ಮಾಡಿದ ಅವರು, ರಾಜ್ಯದಲ್ಲಿ(Karnataka) ಬಿಜೆಪಿ ಸರ್ಕಾರದ ಅವನತಿ ಪ್ರಾರಂಭವಾಗಿದೆ. ಬಿಜೆಪಿಯವರಿಗೆ ಬರಿ ಸುಳ್ಳು ಹೇಳುವುದು ಮಾತ್ರ ಗೊತ್ತು. ಅವರು ಬರಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದ ಜನರು ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಈಗ ನಡೆಯುವ ಉಪಚುನಾವಣೆಯಲ್ಲಿ ಜನರು ನಮ್ಮ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ ಎಂದರು. ಎಲ್ಲಾ ಜಾತಿ ಧರ್ಮ ಒಂದೇ. ನಮಗೆ ಯಾವುದೇ ಜಾತಿ-ಧರ್ಮ ಇಲ್ಲ. ನಮ್ಮ ಜಾತಿ ಎಂದರೆ ಕಾಂಗ್ರೆಸ್(Congress). ನೀತಿಯ ಮೇಲೆ ನಮ್ಮ ಪಕ್ಷ ನಿಂತಿದೆ. ಈ ಬಾರಿ ನಮಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದರು.
ಪೊಲೀಸರ ನ್ಯೂ ಗೆಟಪ್: ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ 'ತ್ರಿಶೂಲಾ'ಸ್ತ್ರ ಪ್ರಯೋಗ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟಿಲ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಶಿವಾನಂದ ಪಾಟೀಲ, ಯಶಂತರಾಯಗೌಡ ಪಾಟಿಲ, ಅಜಯಸಿಂಗ, ಅಭ್ಯರ್ಥಿ ಅಶೋಕ ಮನಗೂಳಿ ಇತರರು ಇದ್ದರು.