ಉಪಚುನಾವಣೆವರೆಗೂ ಜಾತಿ ಗಣತಿ ಇಲ್ಲ, ಸಿಎಂ ಇದನ್ನು ತಿಳಿಸಿದ್ದಾರೆ: ಬಿ.ಕೆ.ಹರಿಪ್ರಸಾದ್‌

By Kannadaprabha News  |  First Published Oct 20, 2024, 4:59 AM IST

ಜಾತಿ ಆಧಾರಿತ ಜನಗಣತಿ ವರದಿ ಜಾರಿಗೆ ಹಿಂದುಳಿದ ಸಮುದಾಯದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ವರದಿಯನ್ನು ಪರಿಶೀಲಿಸಿ, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಜಾರಿಗೆ ನಿರ್ಧರಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಒತ್ತಾಯಿಸಿದರು.


ಬೆಂಗಳೂರು (ಅ.20): ಜಾತಿ ಆಧಾರಿತ ಜನಗಣತಿ ವರದಿ ಜಾರಿಗೆ ಹಿಂದುಳಿದ ಸಮುದಾಯದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ವರದಿಯನ್ನು ಪರಿಶೀಲಿಸಿ, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಜಾರಿಗೆ ನಿರ್ಧರಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಜಾತಿ ಆಧಾರಿತ ಜನಗಣತಿ ವರದಿ ಹಾಗೂ ಮೀಸಲಾತಿಯನ್ನು ಶೇ. 75ಕ್ಕೆ ಹೆಚ್ಚಿಸುವ ಕುರಿತಂತೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆವು. 

ಅ. 18ರಂದು ಸಚಿವ ಸಂಪುಟ ಸಭೆಯಲ್ಲಿ ಜಾತಿ ಆಧಾರಿತ ಜನಗಣತಿ ವರದಿ ಕುರಿತು ಚರ್ಚಿಸಿ, ನಿರ್ಧರಿಸುವುದಾಗಿ ತಿಳಿಸಿದ್ದರು. ಆದರೆ, ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸದ್ಯ ವರದಿ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆ ನಂತರ ವರದಿ ಸ್ವೀಕರಿಸಿ, ಅದನ್ನು ವಿಶ್ಲೇಷಿಸಿ, ಸಾಧಕ-ಬಾಧಕಗಳನ್ನು ನೋಡಿ ಜಾರಿ ಮಾಡಲು ಮುಖ್ಯಮಂತ್ರಿ ನಿರ್ಧರಿಸಬೇಕು. ಈ ಬಗ್ಗೆ ಸಿಎಂ ಅವರಲ್ಲೂ ಮನವಿ ಮಾಡಲಾಗಿದೆ ಎಂದು ಹೇಳಿದರು.

Tap to resize

Latest Videos

ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಇದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಕೆಲ ಸಮುದಾಯಗಳು ಜಾತಿ ಆಧಾರಿತ ಜನಗಣಿ ವರದಿಯನ್ನು ವಿರೋಧಿಸುತ್ತಿವೆ. ಸಂವಿಧಾನದಲ್ಲಿ ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಆದರೆ, ವರದಿಯನ್ನು ಅಧ್ಯಯನ ಮಾಡದೇ ಅವೈಜ್ಞಾನಿಕ ಎನ್ನುವುದು ಸರಿಯಲ್ಲ. ಮೊದಲಿಗೆ ಸರ್ಕಾರ ವರದಿಯನ್ನು ಪರಿಶೀಲಿಸಿ ಅದರ ಲೋಪ-ದೋಷಗಳನ್ನು ಗುರುತಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿ. ನಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಮುಂದಿನದ್ದು ಮುಖ್ಯಮಂತ್ರಿಗಲ ವಿವೇಚನೆಗೆ ಬಿಟ್ಟಿದ್ದು ಎಂದರು.

click me!