ತಾತ ದೇವೇಗೌಡ ಅವರಿಗೆ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಮನತುಂಬಿದ ಧ್ಯನ್ಯವಾದ ಹೇಳಿದ್ದಾರೆ. ಕಾರಣ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಜೂನ್.12): ಲೋಕಸಭಾ ಚುನಾವಣೆ ಸೋಲುಕಂಡಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇದೀಗ ಕರ್ನಾಟಕದಿಂದ ರಾಜ್ಯಸಭೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲದೊಂದಿಗೆ ಕರ್ನಾಟಕ ರಾಜ್ಯಸಭೆಗೆ ಸ್ಪರ್ಧಿಸಿದ್ದ ದೇವೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ಇದಕ್ಕೆ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ತಾತನಿಗೆ ಶುಭಾಶಯ ತಿಳಿಸಿದ್ದಾರೆ.
ಎಲೆಕ್ಷನ್ ಇಲ್ಲದೇ ದೇವೇಗೌಡ ಸೇರಿದಂತೆ 4 ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆ
ಹಾಗಾದ್ರೆ ನಿಖಿಲ್ ಕುಮಾರಸ್ವಾಮಿ ತಾತನ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ಓದಿ.
ನಿಖಿಲ್ ಶುಭಾಶಯ
"ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ನಿಮಗೆ ಶುಭಾಶಯಗಳು ತಾತ. ನೆಲ ಜಲ ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ನಿಮ್ಮಂತಹ ಹಿರಿಯರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ರಾಜ್ಯದ ಎಲ್ಲಾ ಪಕ್ಷದ ನಾಯಕರಿಗೆ ಹಾಗೂ ಶಾಸಕರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ದೇವೇಗೌಡ್ರು PM ಆಗಿ 25 ವರ್ಷ: ತಾತನ ಸಾಧನೆಗಳನ್ನು ಮೊಮ್ಮಗ ಬಣ್ಣಿಸಿದ್ದು ಹೀಗೆ
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ 15 ಸಾವಿರ ಕೋಟಿಗೂ ಹೆಚ್ಚು ಹಣ ಈ ಬಾರಿ ಖೋತವಾಗಿದೆ. ಇದರಿಂದಾಗಿ ರಾಜ್ಯವು ಆರ್ಥಿಕವಾಗಿ ಸಂಕಷ್ಟವನ್ನೆದುರಿಸುವಂತಾಗಿದೆ. ಕೇಂದ್ರದ ಇಂತಹ ಮಲತಾಯಿ ಧೋರಣೆಗಳ ನಡುವೆ ನಮ್ಮ ರಾಜ್ಯದ ಹಿತ ಕಾಯಲು ಸಂಸತ್ತಿನಲ್ಲಿ ನಿಮ್ಮಂತಹ ಅನುಭವಿ ಗಟ್ಟಿ ಧ್ವನಿಯೊಂದರ ಅವಶ್ಯಕತೆ ಇತ್ತು. ರಾಜ್ಯ ಹಾಗೂ ದೇಶ ಎದುರಿಸುತ್ತಿರುವ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮ ಅನುಭವದ ಮೂಸೆಯಲ್ಲಿರುವ ಸಲಹೆಗಳು ಅಮೂಲ್ಯವಾಗಿರುವುದಾಗಿದೆ. ದೇಶ ಹಾಗೂ ರಾಜ್ಯದ ಸೇವೆಗಾಗಿ ಈ ಸಮಯದಲ್ಲೂ ಒಪ್ಪಿಗೆ ನೀಡಿರುವ ನಿಮಗೆ ನನ್ನ ಮನತುಂಬಿದ ಧನ್ಯವಾದಗಳು ತಾತ".