ಕಾಂಗ್ರೆಸ್‌ ಕಟ್ಟಾಳು ಖರ್ಗೆಗೆ ಈ ಬಾರಿ ರಾಜ್ಯಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಒಲಿದು ಬರುತ್ತಾ?

By Kannadaprabha News  |  First Published Jun 12, 2020, 12:39 PM IST

11 ಬಾರಿ ನೇರ ಚುನಾವಣೆ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಒಂದು ಬಾರಿ ಸೋತ ನಂತರ ಹೈಕಮಾಂಡ್‌ ಕೃಪೆಯಿಂದ ದಿಲ್ಲಿ ರಾಜಕಾರಣಕ್ಕೆ ಮರಳಿದ್ದಾರೆ. ಮುಂದಿನ ಕೆಲ ತಿಂಗಳಲ್ಲಿ ಗುಲಾಂ ನಬಿ ಆಜಾದ್‌ ಅವಧಿ ಕೊನೆಗೊಳ್ಳಲಿದೆ. ಇವರ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಬರ್ತಾರಾ? 


11 ಬಾರಿ ನೇರ ಚುನಾವಣೆ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಒಂದು ಬಾರಿ ಸೋತ ನಂತರ ಹೈಕಮಾಂಡ್‌ ಕೃಪೆಯಿಂದ ದಿಲ್ಲಿ ರಾಜಕಾರಣಕ್ಕೆ ಮರಳಿದ್ದಾರೆ. ಮುಂದಿನ ಕೆಲ ತಿಂಗಳಲ್ಲಿ ಗುಲಾಂ ನಬಿ ಆಜಾದ್‌ ಅವಧಿ ಕೊನೆಗೊಳ್ಳಲಿದೆ.

ಮತ್ತು ಮನಮೋಹನ್‌ ಸಿಂಗ್‌ ಆರೋಗ್ಯ ಕೂಡ ಅಷ್ಟಕಷ್ಟೇ. ಹೇಗಿದ್ದರೂ ಟೀಮ್‌ ಸೋನಿಯಾ ಜೊತೆಗೆ ಮತ್ತು ರಾಹುಲ್‌ ಗಾಂ​ಧಿ ಟೀಮ್‌ ಜೊತೆಗೂ ಖರ್ಗೆ ಚೆನ್ನಾಗಿದ್ದಾರೆ. ಬೇಡದ ವಿಷಯಗಳಿಗೆ ತಲೆ ಹಾಕದ ಖರ್ಗೆ ಹೈಕಮಾಂಡ್‌ ಕೊಟ್ಟಸೂಚನೆ ಅಕ್ಷರಶಃ ಪಾಲಿಸುವ ನಿಷ್ಠಾವಂತ ಕಾಂಗ್ರೆಸಿಗ. 5 ವರ್ಷ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಖರ್ಗೆ ಒಳ್ಳೆಯ ಸಂಸದೀಯ ಪಟು ಎಂದು ಹೆಸರು ಪಡೆದಿದ್ದರು. ಅವರ ಉರ್ದು ಮಿಶ್ರಿತ ಹಿಂದಿ ಹಾಗೂ ವಿಷಯ ಅಧ್ಯಯನ ಮಾಡಿಕೊಂಡು ಹೋಗುವ ಪರಿಗೆ ಮೋದಿ ಕೂಡ ತಲೆದೂಗಿದ್ದಾರೆ.

Tap to resize

Latest Videos

ಬಿಎಸ್‌ವೈ ಶಿಫಾರಸಿಗೆ ನಕಾರ; ಇದು 3 ನೇ ಶಾಕ್‌ ಟ್ರೀಟ್‌ಮೆಂಟ್..!

ಹೀಗಾಗಿ ಖರ್ಗೆ ಸಾಹೇಬರಿಗೆ ಈಗ ರಾಜ್ಯಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಒಲಿದು ಬಂದರೂ ಆಶ್ಚರ್ಯವಿಲ್ಲ. ಅಂದಹಾಗೆ, 5 ವರ್ಷ ಲೋಕಸಭೆಯಲ್ಲಿ ವಿರೋಧ​ ಪಕ್ಷದ ನಾಯಕರಾದರೂ ಕೂಡ ಖರ್ಗೆ ಅವರಿಗೆ ಕೆಂಪು ಗೂಟದ ಕಾರು, ಪಾರ್ಲಿಮೆಂಟ್‌ನಲ್ಲಿ ಪ್ರತ್ಯೇಕ ಆಫೀಸು ಸಿಕ್ಕಿರಲಿಲ್ಲ. ಏಕೆಂದರೆ ಅವರ ಹುದ್ದೆ ಸಂವಿಧಾನಬದ್ಧ ಆಗಿರಲಿಲ್ಲ. ಈ ಸಲ ಸಿಗಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!