ನೈಸ್‌ ವಿರುದ್ಧ ತನಿಖೆ ನಡೆಸದಂತೆ ಎಚ್‌ಡಿಕೆಗೆ ಯಾರೂ ಕೈ ಕಟ್ಟಿರಲಿಲ್ಲ: ಸಿಎಂ

By Kannadaprabha News  |  First Published Jul 23, 2023, 7:26 AM IST

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ಸಿಗರು ನನ್ನ ಕೈಕಟ್ಟಿಹಾಕಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆ ಸುಳ್ಳು. ಸಾಲ ಮನ್ನಾ ಸೇರಿ ಇತರೆ ಕಾರ್ಯಕ್ರಮಕ್ಕೆ ನಾವು ಸಹಕಾರ ನೀಡಿದ್ದರೂ ಅವರು ತಾವಾಗಿಯೇ ಸರ್ಕಾರವನ್ನು ಕಳೆದುಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಬೆಂಗಳೂರು (ಜು.23) :  ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ಸಿಗರು ನನ್ನ ಕೈಕಟ್ಟಿಹಾಕಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆ ಸುಳ್ಳು. ಸಾಲ ಮನ್ನಾ ಸೇರಿ ಇತರೆ ಕಾರ್ಯಕ್ರಮಕ್ಕೆ ನಾವು ಸಹಕಾರ ನೀಡಿದ್ದರೂ ಅವರು ತಾವಾಗಿಯೇ ಸರ್ಕಾರವನ್ನು ಕಳೆದುಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿ ಎಚ್‌.ಡಿ.ಕುಮಾರಸ್ವಾಮಿ ನೈಸ್‌ ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಉತ್ತರಿಸಿದ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರದ ಬಳಿಕ ಮೈತ್ರಿ ಸರ್ಕಾರ ಬಂದ ಸಂದರ್ಭದಲ್ಲಿಯೇ ಎಚ್‌ಡಿಕೆ ಕ್ರಮ ತೆಗೆದುಕೊಳ್ಳಬಹುದಿತ್ತು. ತನಿಖೆ ನಡೆಸಲು ಕಾಂಗ್ರೆಸ್‌ನವರು ಕೈಕಟ್ಟಿದ್ದರು ಎನ್ನುವುದು ಸುಳ್ಳು. ಸಾಲಮನ್ನಾ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಾಂಗ್ರೆಸ್‌ ಸಹಕಾರ ನೀಡಿದ್ದೆವು. ಕಾಂಗ್ರೆಸ್‌ ಕೈಕಟ್ಟಿಹಾಕಿತ್ತು ಎಂದು ಅವರೇನು ರಾಜಿನಾಮೆ ನೀಡಿದ್ದರಾ? ತಾವಾಗೇ ಅವರು ಸರ್ಕಾರ ಕಳೆದುಕೊಂಡರು ಎಂದು ತಿಳಿಸಿದರು.

Tap to resize

Latest Videos

 

ನೈಸ್ ವಿರುದ್ಧ ಜಂಟಿ ಹೋರಾಟ; ಬಿಜೆಪಿ-ಜೆಡಿಎಸ್ ಇನ್ನೂ ಹತ್ತಿರ ಹತ್ತಿರ!

ಇದೇ ಮೊದಲ ಬಾರಿ ವಿರೋಧ ಪಕ್ಷದ ಉಪಸ್ಥಿತಿಯಿಲ್ಲದೇ ಬಜೆಟ್‌ ಚರ್ಚೆಗೆ ಉತ್ತರ ನೀಡಿದ್ದೇವೆ. 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ 14 ಬಾರಿ ಬಜೆಟ್‌ ಮಂಡಿಸಿದ್ದೇನೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದರು. ಸಾಮಾನ್ಯವಾಗಿ ಎರಡು ವಾರ ಸದನ ನಡೆಯುತ್ತದೆ. ಜನಸಾಮಾನ್ಯರ ತೊಂದರೆ ಬಗ್ಗೆ ಚರ್ಚೆಯಾಗಲಿ, ವಿರೋಧ ಪಕ್ಷದವರು ಕ್ರಿಯಾಶೀಲವಾಗಿ ಪಾಲ್ಗೊಳ್ಳಲಿ ಎಂದು ಒಂದು ವಾರ ವಿಸ್ತರಿಸಿ ಮೂರು ವಾರ ಸದನ ನಡೆಸಿದ್ದೇವೆ. ಆದರೆ, ವಿಧಾನಸಭೆಗೆ ಆಗಮಿಸದೆ ಗದ್ದಲದಲ್ಲೇ ಸಮಯವನ್ನು ವ್ಯರ್ಥಗೊಳಿಸಿದರು. ಬಿಜೆಪಿಯವರ ನಡವಳಿಕೆ ಸರಿಯಿಲ್ಲದ ಕಾರಣಕ್ಕೆ ಸಭಾಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ. ಸಭಾಧ್ಯಕ್ಷರ ಕ್ರಮಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ. ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಟ್ಟು, ಹೊರಗೆ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದರು.

1906 ಎಕರೆ ನೈಸ್‌ನಿಂದ ರೈತರಿಗೆ ವಾಪಸ್‌: ಸಂಪುಟ ಸಮಿತಿ ಎಚ್ಚರಿಕೆ, ಖೇಣಿಗೆ ಸಂಕಟ

click me!