ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ ಚುನಾವಣೆ: ರೇಣುಕಾಚಾರ್ಯ

By Kannadaprabha News  |  First Published Dec 4, 2024, 7:48 AM IST

ಯಡಿಯೂರಪ್ಪ ಅವರ ಕುಟುಂಬದ ಮೇಲೆ ಯಾವುದೇ ದುಷ್ಟಶಕ್ತಿಯ ಕಣ್ಣು ಬೀಳದಿರಲಿ, ನರೇಂದ್ರ ಮೋದಿ ವಿಜಯೇಂದ್ರ ಹಾಗೂ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂದು ಅವರ ಮನೆ ದೇವರಾದ ಶ್ರೀ ಎಡಿಯೂರು ಸಿದ್ದಲಿಂಗೇಶ್ವರ ಅವರಿಗೆ ಪೂಜೆ ಸಲ್ಲಿಸಿದ್ದೇವೆ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ 


ಕುಣಿಗಲ್(ಡಿ.04):  ವಿಜಯೇಂದ್ರ ಒಬ್ಬ ಯುವ ನಾಯಕ. ಅವರಿಗೆ ತಮ್ಮದೇ ಆದ ಶಕ್ತಿ ಇದೆ. ಮುಂದಿನ 2028ರ ಚುನಾವಣೆಯನ್ನು ವಿಜಯೇಂದ್ರ ಅವರ ನೇತೃತ್ವದಲ್ಲಿ ಸ್ಪರ್ಧಿಸಿ 140 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು. 

ತಾಲೂಕಿನ ಶ್ರೀ ಕ್ಷೇತ್ರ ಎಡೆಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ನಾಡಿನ ಜನತೆಗೆ ಒಳಿತಾಗಲಿ, ಯಡಿಯೂರಪ್ಪ ಅವರ ಕುಟುಂಬದ ಮೇಲೆ ಯಾವುದೇ ದುಷ್ಟಶಕ್ತಿಯ ಕಣ್ಣು ಬೀಳದಿರಲಿ, ನರೇಂದ್ರ ಮೋದಿ ವಿಜಯೇಂದ್ರ ಹಾಗೂ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂದು ಅವರ ಮನೆ ದೇವರಾದ ಶ್ರೀ ಎಡಿಯೂರು ಸಿದ್ದಲಿಂಗೇಶ್ವರ ಅವರಿಗೆ ಪೂಜೆ ಸಲ್ಲಿಸಿದ್ದೇವೆ. ಯಡಿಯೂರಪ್ಪನವರು ಅಂದು ಸೈಕಲ್ ತುಳಿದ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ನಂತರ ಹಲವಾರು ವಿಶೇಷ ಯೋಜನೆಗಳನ್ನು ತಂದ ಧೀಮಂತ ನಾಯಕ ಬಿಎಸ್‌ವೈ ಅವರ ಜೊತೆಯಲ್ಲಿ ಮಲ್ಲಿಕಾರ್ಜುನ, ಶಂಕರ್‌ಮೂರ್ತಿ ಸೇರಿದಂತೆ ಹಲವರು ಮಹಾನ್ ನಾಯಕರು ಹೋರಾಟ ಮಾಡಿದ್ದರು. ಬಿಎಸ್‌ವೈ ಸಹ 45 ವರ್ಷಕ್ಕೆ ರಾಜ್ಯಾಧ್ಯಕ್ಷರಾಗಿದ್ದರು. ಅದೇ ರೀತಿ ವಿಜಯೇಂದ್ರ ಕೂಡ ಚಿಕ್ಕ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೆ ತಪ್ಪೇನು ಎಂದರು. 
ಪಕ್ಷದಿಂದ ಕೊಟ್ಟಿರುವ ನೋಟಿಸ್ ಅನ್ನು ಫೇಕ್ ನೋಟಿಸ್ ಅನ್ನುವುದೇಕೆ ? ಎಂದು ಹೆಸರು ಹೇಳದೆ ಯತ್ನಾಳಗೆ ಟಾಂಗ್ ನೀಡಿದರು.

Tap to resize

Latest Videos

ಸೋಲಿಗೆ ವಿಜಯೇಂದ್ರ, ಯಡಿಯೂರಪ್ಪ ಹೊಂದಾಣಿಕೆ ಕಾರಣ, ಬಿಜೆಪಿ ಶಾಸಕನ ಬಾಂಬ್!

ರಾಹುಲ್ ಗಾಂಧಿ ಅವರನ್ನು ಕೂಡ ನಾವು ವಿರೋಧ ಪಕ್ಷದ ನಾಯಕ ಎಂದು ಒಪ್ಪಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಯುವ ನಾಯಕರಿಗೆ ಅವಕಾಶ ನೀಡುವುದು ಉತ್ತಮ ಎಂದರು. ಡಿಸೆಂಬರ್‌ ಹತ್ತರಂದು ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಈ ಸಮಾವೇಶಕ್ಕೆ ಮಾಜಿ ಸಚಿವರು ಸೇರಿದಂತೆ ಆರ್‌. ಅಶೋಕ್  ಹಾಗೂ ಕೇಂದ್ರ ಸಚಿವರನ್ನು ಆಹ್ವಾನಿಸಿದ್ದೇವೆ ಎಲ್ಲರೂ ಕೂಡ ಭಾಗವಹಿಸುತ್ತಾರೆ ಎಂದರು. 

ಈ ಸಂದರ್ಭದಲ್ಲಿ ನೆಲಮಂಗಲ ತುಮಕೂರು ದಾಬಸ್ ಪೇಟೆ, ಕುಣಿಗಲ್ ನ ಹಲವಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ , ನೆಲಮಂಗಲ ಮಾಜಿ ಶಾಸಕ ನಾಗರಾಜ್, ದಿಲೀಪ್, ತುಮಕೂರುಜಿಲ್ಲಾ ವಕ್ತಾರಸದಾಶಿವಯ್ಯ, ಬಿಎಂಟಿಸಿ ಮಾಜಿ ನಿರ್ದೇಶಕ ಭ್ರಂಗೇಶ್, ಯುವ ಮೋರ್ಚಾ ಅಧ್ಯಕ್ಷ ಚೇತನ್ ಸೇರಿದಂತೆ ಇತರರು ಇದ್ದರು.

ವಿಜಯೇಂದ್ರಗೆ ಜೈ 

• 2028ರ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುತ್ತೇವೆ. 
• ಬಿಎಸ್‌ವೈ ಕುಟುಂಬದ ಮೇಲೆ ಯಾವ ದೃಷ್ಟಿ ಬೀಳದಿರಲಿ ಎಂದು ಬೇಡಿಕೆ 
• ಯಡಿಯೂರಪ್ಪ ಸೈಕಲ್ ತುಳಿದಿದ್ದರಿಂದ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ 
• ಬಿಎಸ್‌ವೈಗೆ 45 ವರ್ಷ ಆಗಿದ್ದಾಗ ರಾಜ್ಯಾಧ್ಯಕ್ಷರಾಗಿದ್ದರೂ ಅದೇ ರೀತಿ ಬಿವೈವಿ ಅಧ್ಯಕ್ಷರಾಗಿದ್ದಾರೆ. 
• ದಾವಣಗೆರೆಯಲ್ಲಿ ಉತ್ತರ ನೀಡುತ್ತೇವೆ

ವಿಜಯೇಂದ್ರ, ಯಡಿಯೂರಪ್ಪ ಕಾಲಿನ ಧೂಳಿಗೂ ಸಮನಲ್ಲ: ರಮೇಶ ಜಾರಕಿಹೊಳಿ

ಹೊಂದಾಣಿಕೆ ರಾಜಕಾರಣದ ಆರೋಪ: ವಿಜಯೇಂದ್ರ ಹೇಳಿದ್ದಿಷ್ಟು

ಬೆಂಗಳೂರು: ನನ್ನ ಕುರಿತು ಪಕ್ಷದ ಪಕ್ಷದ ಕೆಲ ನಾಯಕರಲ್ಲಿರುವ ಹೊಂದಾಣಿಕೆ ರಾಜಕಾರಣದ ಅಭಿಪ್ರಾಯಕ್ಕೆ ಶೀಘ್ರದಲ್ಲೇ ಇತಿಶ್ರೀ ಹಾಡಲಾಗುವುದು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಷಯವನ್ನು ವರಿಷ್ಠರು ಗಮನಿಸುತ್ತಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳಬೇಕೇ ಅಥವಾ ಸುಮ್ಮನೆ ಬಿಡಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವಾಗ ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಘೋಷಿಸಿದರೋ ಅಂದಿನಿಂದ ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ. ಕೆಲ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹೊಂದಾಣಿಕೆ ರಾಜಕಾರಣದ ಅಭಿಪ್ರಾಯವಿದೆ. ಇದಕ್ಕೆ ಶೀಘ್ರ ಇತಿಶ್ರೀ ಹಾಡಲಾಗುವುದು. ಆ ನಿಟ್ಟಿನಲ್ಲಿ ನಾನು ಪಕಕ್ಕೆ ಶಕ್ತಿ ತುಂಬಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಈಗಾಗಲೇ ಪಕ್ಷದ ವರಿಷ್ಠರು ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಶಿಸ್ತು ಕ್ರಮದ ಬಗ್ಗೆ ತೀರ್ಮಾನಿಸುತ್ತಾರೆ ಎಂದರು. 

click me!