ಬಡವರ ಮತಹಕ್ಕು ಕಸಿಯಲು ಎನ್‌ಡಿಎಗೆ ಬಿಡಲ್ಲ: ರಾಹುಲ್

Kannadaprabha News   | Kannada Prabha
Published : Aug 25, 2025, 05:26 AM IST
Rahul Gandhi Bihar Yatra

ಸಾರಾಂಶ

ಬಿಹಾರ ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ‘ಎನ್‌ಡಿಎ ಸರ್ಕಾರ ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬಡವರ ಮತಹಕ್ಕನ್ನು ಕಸಿಯುತ್ತಿದೆ’ ಎಂದು ಪುನರುಚ್ಚರಿಸಿದ್ದಾರೆ.

ಅರಾರಿಯಾ (ಬಿಹಾರ)ಬಿಹಾರ ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ‘ಎನ್‌ಡಿಎ ಸರ್ಕಾರ ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬಡವರ ಮತಹಕ್ಕನ್ನು ಕಸಿಯುತ್ತಿದೆ’ ಎಂದು ಪುನರುಚ್ಚರಿಸಿದ್ದಾರೆ.

ಇಲ್ಲಿ ನಡೆದ ‘ಮತ ಅಧಿಕಾರ ಯಾತ್ರೆ’ಯಲ್ಲಿ ಪಾಲ್ಗೊಂಡ ವೇಳೆ ಮಾತನಾಡಿದ ಅವರು, ‘ನರೇಂದ್ರ ಮೋದಿ ಸರ್ಕಾರ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ ಬಳಿಕ ಇದೀಗ ಚುನಾವಣಾ ಆಯೋಗದ ಸಹಾಯದೊಂ ದಿಗೆ ಬಡವರ ಮತದಾನದ ಹಕ್ಕನ್ನು ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಕದಿಯುತ್ತಿದ್ದಾರೆ. ಇಂಡಿಯಾ ಕೂಟ ಬಿಹಾರದಲ್ಲಿ ಈ ರೀತಿ ಆಗಲು ಬಿಡುವುದಿಲ್ಲ. ಮತಪಟ್ಟಿ ಪರಿಷ್ಕರಣೆ ಅಸಂವಿಧಾನಿಕ. ಬಿಹಾರದ ಜನತೆ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಮತ್ತು ಅವರ ಮೈತ್ರಿಕೂಟಕ್ಕೆ ಸೂಕ್ತವಾದ ಉತ್ತರ ನೀಡಬೇಕು’ ಎಂದರು.=======

ಬೈಕ್‌ ಸವಾರಿ ಮಾಡಿದ ರಾಹುಲ್‌ಗೆ ಮುತ್ತಿಕ್ಕಿದ ಯುವಕ! 

ಪೂರ್ಣಿಯಾ (ಬಿಹಾರ): ಮತ ಅಧಿಕಾರ ಯಾತ್ರೆಯ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಭಾನುವಾರ ಬಿಹಾರದ ಪುರ್ನಿಯಾ ಜಿಲ್ಲೆಯ ಅರಾರಿಯಾದ ಬೀದಿಗಳಲ್ಲಿ ಬುಲೆಟ್‌ ಬೈಕ್‌ ಸವಾರಿ ಮಾಡಿ ಗಮನ ಸೆಳೆದರು. ಈ ವೇಳೆ ಯುವಕನೊಬ್ಬ ರಾಹುಲ್‌ಗೆ ಮುತ್ತಿಟ್ಟ ಘಟನೆ ನಡೆದಿದೆ.ಯಾತ್ರೆ ಅರಾರಿಯಾ ಪ್ರವೇಶಿಸುತ್ತಿದ್ದಂತೆ ಇಬ್ಬರನ್ನೂ ನೋಡಲು ಜನಸಾಗರ ನೆರೆದಿತ್ತು. ಈ ವೇಳೆ ಒಬ್ಬ ಯುವಕ, ಭದ್ರತೆ ದಾಟಿ ಬಂದು, ಬೈಕಲ್ಲಿ ಸಾಗುತ್ತಿದ್ದ ರಾಹುಲ್‌ಗೆ ಮುತ್ತಿಟ್ಟ ಹಾಗೂ ತಬ್ಬಿಕೊಂಡ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ತಳ್ಳಿದರು. ಮತ್ತೆ ಆತ ರಾಹುಲ್‌ ಕಡೆ ನುಗ್ಗಲು ಯತ್ನಿಸಿದಾಗ ಕಪಾಳಮೋಕ್ಷ ಮಾಡಿದರು.

ಲಾಲು ನನಗೆ ಮದುವೆ ಸಲಹೆ ನೀಡಿದ್ದರು: ರಾಗಾ ಚಟಾಕಿ

ಅರಾರಿಯಾ (ಬಿಹಾರ): ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ತಮ್ಮ ಮದುವೆಗೆ ಸಂಬಂಧಿಸಿದ ಚಟಾಕಿ ಹಾರಿಸಿದ ಪ್ರಸಂಗ ಭಾನುವಾರ ನಡೆಯಿತು.ಸುದ್ದಿಗೋಷ್ಠಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು, ‘ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ನನ್ನ ಹಿರಿಯಣ್ಣ ಇದ್ದಂಗೆ. ಅವರು ಮದುವೆ ಆಗಲಿ’ ಎಂದು ಹೇಳಿದರು. ಆಗ ರಾಹುಲ್‌ ಅವರು, ‘ಲಾಲು ಪ್ರಸಾದ್‌ ಯಾದವ್‌ ಕೂಡ ನನಗೆ ಮದುವೆ ಆಗುವಂತೆ ಹಿಂದೆ ಸಲಹೆ ನೀಡಿದ್ದರು’ ಎಂದು ಚಟಾಕಿ ಹಾರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!