
ತಿರುವನಂತಪುರ(ಡಿ.17): ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಪ್ರಸಿದ್ಧ ಶಬರಿಮಲೆ ದೇಗುಲ ಒಳಪಡುವ ಪಂಡಲಂ ನಗರಸಭೆ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಯಶಸ್ವಿಯಾಗಿದೆ. ಅಲ್ಲದೆ ಕಳೆದ ಬಾರಿ ಸ್ವಲ್ಪದರಲ್ಲೇ ಅಧಿಕಾರ ವಂಚಿತವಾಗಿದ್ದ ಪಾಲಕ್ಕಾಡ್‌ನಲ್ಲೂ ಮೈತ್ರಿಕೂಟ ಅಧಿಕಾರ ಖಚಿತಪಡಿಸಿಕೊಂಡಿದೆ.
ಮಮತಾಗೆ ಬಿಗ್ ಶಾಕ್: ಪ್ರಭಾವಿ ಟಿಎಂಸಿ ಶಾಸಕ ರಾಜೀನಾಮೆ!
ಒಟ್ಟಾರೆ ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಗ್ರಾಮ ಪಂಚಾಯಿತಿ, ನಗರಪಾಲಿಕೆ, ನಗರಸಭೆ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. 941 ಗ್ರಾಮ ಪಂಚಾಯಿತಿಗಳ ಪೈಕಿ 514, 5 ನಗರಪಾಲಿಕೆಗಳ ಪೈಕಿ 4, 86 ನಗರಪಾಲಿಕೆಗಳ ಪೈಕಿ 45, 14 ಜಿಲ್ಲಾ ಪಂಚಾಯಿತಿಗಳ ಪೈಕಿ 10ರಲ್ಲಿ ಎಲ್‌ಡಿಎಫ್ ಅಧಿಕಾರಕ್ಕೇರಿದೆ.
ಯಡಿಯೂರಪ್ಪ ಕೊಟ್ರು ಬಂಪರ್: ನಿಗಮ ಮಂಡಳಿ ಅಧ್ಯಕ್ಷರಿಗೆ ಜಾಕ್ಪಾಟ್
ಕಳೆದ ವರ್ಷ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿವಾದ ಸಂಬಂಧ ರಾಜ್ಯದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಎಲ್‌ಡಿಎಫ್ ನಡುವೆ ದೊಡ್ಡ ವಾಕ್ಸಮರ, ಹೋರಾಟವೇ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ನಡೆದ ಚುನಾವಣೆಯಲ್ಲಿ ಪಂಡಂಲಂ ಮುನ್ಸಿಪಲ್‌ನ 33 ವಾರ್ಡ್ ಪೈಕಿ 17ರಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೇರಿದೆ. ಕಳೆದ ಬಾರಿ ಪಕ್ಷಕ್ಕೆ ಕೇವಲ 7 ಸೀಟು ಸಿಕ್ಕಿತ್ತು. ಇನ್ನು 52 ಸದಸ್ಯ ಬಲದ ಪಾಲಕ್ಕಾಡ್ ನಗರಸಭೆಯಲ್ಲಿ ಕಳೆದ ಬಾರಿ 24 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಈಗಾಗಲೇ 28 ಸ್ಥಾನ ಗೆದ್ದು ಅಧಿಕಾರ ಖಚಿತಪಡಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ನಿಧಾನವಾಗಿ ಬೇರೂರುತ್ತಿರುವ ಸುಳಿವನ್ನು ನೀಡಿದೆ. ಅಲ್ಲದೆ ರಾಜ್ಯದಲ್ಲಿ ಒಟ್ಟಾರೆ 23 ಗ್ರಾಮ ಪಂಚಾಯತ್, 2 ನಗರಸಭೆಗಳಲ್ಲಿ ಗೆದ್ದಿದೆ.
ಮುಂದಿನ ಮಾಚ್‌ರ್- ಏಪ್ರಿಲ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಯ ನಡೆಯಲಿದ್ದು, ಅದಕ್ಕೆ ಈ ಚುನಾವಣೆ ದಿಕ್ಸೂಚಿ ಎಂದೇ ಬಣ್ಣಿಸಲಾಗಿತ್ತು. ಹೀಗಾಗಿ ಬಿಜೆಪಿಯ ಈ ಸಾಧನೆಯನ್ನು ಅತ್ಯಂತ ಮಹತ್ವದ್ದು ಎಂದು ಬಣ್ಣಿಸಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.