ಅವಿಶ್ವಾಸ ಗೊತ್ತುವಳಿ: ಮೋದಿಗೆ ‘ಕೈ’ ಕೊಟ್ಟ ಶಿವಸೇನೆ

Published : Jul 20, 2018, 11:31 AM IST
ಅವಿಶ್ವಾಸ ಗೊತ್ತುವಳಿ:  ಮೋದಿಗೆ ‘ಕೈ’ ಕೊಟ್ಟ ಶಿವಸೇನೆ

ಸಾರಾಂಶ

ತೆಲುಗು ದೇಶಂ ಪಕ್ಷದಿಂದ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಸಭಾತ್ಯಾಗ ಮಾಡಿದ ಬಿಜೆಡಿಯ 19 ಸದಸ್ಯರು

ನವದೆಹಲಿ:  ತೆಲುಗು ಸೇಶಂ ಪಕ್ಷಮಂಡಿಸಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯದ ಮೇಲೆ ಸಂಸತ್ತಿನಲ್ಲಿ ಚರ್ಚೆ ಆರಂಭವಾಗಿದೆ.

ಆದರೆ ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿಗೆ ಅದರ ಮಿತ್ರ ಪಕ್ಷ ಶಿವಸೇನೆ ಶಾಕ್ ನೀಡಿದೆ.

ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿರುವ ಶಿವಸೇನೆ ಕಲಾಪದಿಂದ ದೂರವುಳಿಯಲು ನಿರ್ಧರಿಸಿದೆ.

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂಬಂಧ ಹಳಸಿದೆ. ಮೋದಿ ಸರ್ಕಾರದ ನೀತಿಗಳನ್ನು ಕಟುವಾಗಿ ಟೀಕಿಸುತ್ತಿರುವ ಶಿವಸೇನೆ  ಮುಂಬರುವ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಲ್ಲವೆಂದು  ಈಗಾಗಲೆ ಹೇಳಿದೆ. 

ಈ ನಡುವೆ, ಚರ್ಚೆಗೆ ಕಡಿಮೆ ಸಮಯ ನೀಡಿದ್ದನ್ನು ವಿರೋಧಿಸಿ ಬಿಜು ಜನತಾದಳದ 19 ಸಂಸದರು ಸಭಾತ್ಯಾಗ ಮಾಡಿದ್ದಾರೆ.

ಸಂಸತ್ತಿನ ಹಾಲಿ ಸದಸ್ಯಬಲ 533 ಆಗಿದ್ದು ಎನ್ ಡಿಎ 312, ಯುಪಿಎ 148 ಹಾಗೂ ಇತರರು 73 ಸ್ಥಾನಗಳನ್ನು ಹೊಂದಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!