ಪರಿಷತ್ತಿನಲ್ಲಿ ‘ಲವ್ ಜಿಹಾದ್’ ಗದ್ದಲ

First Published Jul 11, 2018, 10:13 PM IST
Highlights
  • ಬಿಜೆಪಿ ಸದಸ್ಯೆ ತೇಜಸ್ವಿನಿಯಿಂದ ಲವ್ ಜಿಹಾದ್ ಪ್ರಸ್ತಾಪ
  • ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೇ ಮಾತಿನ ಸಮರ
  • ಯು.ಟಿ. ಖಾದರ್ ಉತ್ತರಕ್ಕೆ ತೃಪ್ತಿಯಾಗದ ವಿಪಕ್ಷ ಸದಸ್ಯರು
  • ಗೃಹ ಮಂತ್ರಿ ಈ ಬಗ್ಗೆ ಉತ್ತರ ನೀಡಬೇಕೆಂದು ಪಟ್ಟು; ಕಲಾಪ ಮುಂದೂಡಿಕೆ

ವಿಧಾನ ಪರಿಷತ್ತು : ವಿಧಾನ ಪರಿಷತ್ತು ಬುಧವಾರ  ‘ಲವ್ ಜಿಹಾದ್’ ಗದ್ದಲಕ್ಕೆ ಸಾಕ್ಷಿಯಾಯಿತು.  ಆಡಳಿತ ಪಕ್ಷ ಮತ್ತು ವಿಪಕ್ಷಗಳ ಗದ್ದಲ ನಡುವೆ ಸಭಾಪತಿ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದಾರೆ.

ಪರಿಷತ್ತಿನಲ್ಲಿ ಬಜೆಟ್ ವಿಷಯದಲ್ಲಿ ಮಾತನಾಡುವಾಗ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಲವ್ ಜಿಹಾದ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಎಲ್‌ಇಟಿ ಭಯೋತ್ಪಾದಕ ಸಂಘಟನೆ ಲವ್ ಜಿಹಾದ್ ತರಬೇತಿ ನೀಡುತ್ತದೆ, ಈಗ ಕೇರಳದಲ್ಲಿ ಇದು ನಡೀತಿರೋದು ಗೊತ್ತಾಗಿದೆ. ನಾಪತ್ತೆಯಾಗಿದ್ದ ಯುವತಿಯರ ಬಗ್ಗೆ ಸುಪ್ರೀಂಕೋರ್ಟ್ ತನಿಖೆಗೆ ಆದೇಶ ನೀಡಿದೆ. ತನಿಖೆಯಲ್ಲಿ ಯುವತಿಯರು ನಾಪತ್ತೆಯಾಗಿರೋದು ಲವ್ ಜಿಹಾದ್ ನಿಂದ ಅಂತ ಗೊತ್ತಾಗಿದೆ ಈಗ ಲವ್ ಜಿಹಾದ್ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ವ್ಯಾಪಿಸಿದೆ,ಎಂದು ಹೇಳಿದರು.

ಆ ಸಂದರ್ಭದಲ್ಲಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ತೇಜಸ್ವಿನಿ ಮಾತಿಗೆ ಧ್ವನಿಗೂಡಿಸಿದರು. ತೇಜಸ್ವಿನಿ ಮಾತಿಗೆ  ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ  ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೇ ಮಾತಿನ ಸಮರ ಆರಂಭವಾಯಿತು. ಲವ್ ಜಿಹಾದ್ ಹೆಸರಲ್ಲಿ ಬಡ ಹೆಣ್ಣು ಮಕ್ಕಳನ್ನು  ಅತ್ಯಾಚಾರ ಮಾಡಿ,  ಹೊರ ದೇಶಗಳಿಗೆ  ಮಾರಾಟ ಮಾಡುತ್ತಿದ್ದಾರೆ. ಇದನ್ನ ಸರ್ಕಾರ ತಡೆಯಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರೆ, ಉಗ್ರಪ್ಪ, ಈ ದೇಶದಲ್ಲಿ ಹಿಂದೂ ಧರ್ಮ ಅಲ್ಲ, ಅದೂ ವೇ ಆಫ್ ಲೈಫ್ , ಧರ್ಮ ಧರ್ಮಗಳ ನಡೆವೇ ಕಂದಕಗಳ ನಿರ್ಮಾಣ ಮಾಡೋದಕ್ಕೆ ಅವಕಾಶ ನೀಡಬಾರದು, ನಮ್ಮ ರಾಜ್ಯದಲ್ಲಿ ಇದುವರೆಗೂ ಲವ್ ಜಿಹಾದ್ ಪ್ರಕರಣ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ಹೇಳಿದ್ದಾರೆ.

ವಿಪಕ್ಷ ನಾಯಕರು ಗೃಹ ಮಂತ್ರಿ ಈ ಬಗ್ಗೆ ಉತ್ತರ ನೀಡಬೇಕೆಂದು ಪಟ್ಟು ಹಿಡಿದಾಗ, ಅವರ ಪರವಾಗಿ ಯು.ಟಿ. ಖಾದರ್ ಉತ್ತರ ನೀಡಿದ್ದಾರೆ. ಲವ್ ಜಿಹಾದ್ ಪ್ರಕರಣಗಳು ರಾಜ್ಯದಲ್ಲಿ ಆಗಿಲ್ಲ, 2010 ರಲ್ಲಿ 13 ಯುವತಿಯರು ನಾಪತ್ತೆ ಪ್ರಕರಣ ಆತಂಕ ಮೂಡಿಸಿತ್ತು, ಆದ್ರೆ ಆ ಪ್ರಕರಣದಲ್ಲಿ ಸಯನೈಡ್ ಮೋಹನ್ ಎಂಬ ಪ್ರಾಧ್ಯಾಪಕ ಸಿಕ್ಕಿಬಿದ್ದ. ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆ, ಯಾವುದೇ ತನಿಖೆ ಬೇಕಿದ್ದರೂ ಮಾಡಲಿ, ಎನ್ ಐಎ ರಿಪೋರ್ಟ್ ಹೊರ ಬರಲಿ, ಆ ಬಗ್ಗೆ ಸಾಕ್ಷಿಗಳು ಸಿಕ್ಕರೆ ನಾನು ಕ್ರಮ ತೆಗೆದುಕೊಳ್ಳುತ್ತೆವೆ, ಎಂದು ಹೇಳಿದ್ದಾರೆ.

ಆದರೆ ಯು.ಟಿ. ಖಾದರ್ ಉತ್ತರಕ್ಕೆ ತೃಪ್ತಿಯಾಗದ ವಿಪಕ್ಷ ಸದಸ್ಯರು, ಗೃಹ ಮಂತ್ರಿಗಳೇ ಸದನದಲ್ಲಿ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ  ಗದ್ದಲ ನಡುವೆ ಸಭಾಪತಿ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದಾರೆ.

click me!